For the best experience, open
https://m.newskannada.com
on your mobile browser.
Advertisement

ಸಂಗೀತ ಕೇಳಲು ಬಂದ 40ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದ ಉಗ್ರರು !

ರಷ್ಯಾದ ನೆಲದ ಮಾಸ್ಕೋದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.. ಸಂಗೀತ ಕಾರ್ಯಕ್ರಮದ ಮೇಲೆ ಭಯೋತ್ಪಾದಕರ ಪಡೆಯ ಗುಂಡಿನ ದಾಳಿಗೆ ಸುಮಾರು 60 ಮಂದಿ ಬಲಿಯಾಗಿದ್ದಾರೆ. ರಷ್ಯಾದ ಮಾಸ್ಕೋದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಉಗ್ರರು ಗುಂಡಿನ ಸುರಿಮಳೆಯನ್ನೇ ಗೈದಿದ್ದು, ಭಯೋತ್ಪಾದಕರ ಅಟ್ಟಹಾಸಕ್ಕೆ ಇಡೀ ರಷ್ಯಾವೇ ಬೆಚ್ಚಿಬಿದ್ದಿದೆ.
07:30 AM Mar 23, 2024 IST | Ashitha S
ಸಂಗೀತ ಕೇಳಲು ಬಂದ 40ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದ ಉಗ್ರರು

ರಷ್ಯಾದ ನೆಲದ ಮಾಸ್ಕೋದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.. ಸಂಗೀತ ಕಾರ್ಯಕ್ರಮದ ಮೇಲೆ ಭಯೋತ್ಪಾದಕರ ಪಡೆಯ ಗುಂಡಿನ ದಾಳಿಗೆ ಸುಮಾರು 60 ಮಂದಿ ಬಲಿಯಾಗಿದ್ದಾರೆ. ರಷ್ಯಾದ ಮಾಸ್ಕೋದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಉಗ್ರರು ಗುಂಡಿನ ಸುರಿಮಳೆಯನ್ನೇ ಗೈದಿದ್ದು, ಭಯೋತ್ಪಾದಕರ ಅಟ್ಟಹಾಸಕ್ಕೆ ಇಡೀ ರಷ್ಯಾವೇ ಬೆಚ್ಚಿಬಿದ್ದಿದೆ.

Advertisement

ಮಾಸ್ಕೋದ ಹಾಲ್ ಒಂದರಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಇದರಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಎಂಟ್ರಿಕೊಟ್ಟ ಭಯೋತ್ಪಾದಕರು ಯಾರೂ ಊಹಿಸಲಾರದ ಕೃತ್ಯವೆಸಗಿದ್ದಾರೆ. ನೋಡ ನೋಡ್ತಿದ್ದಂತೆ ನಾಲ್ವರು ಬಂದೂಕುದಾರಿಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇನ್ನು ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ದಾಳಿಯನ್ನು ದೊಡ್ಡ ದುರಂತ ಎಂದಿದ್ದು, ದಾಳಿ ನಡೆದ ಸ್ಥಳಕ್ಕೆ 50 ಆಂಬುಲೆನ್ಸ್‌ಗಳನ್ನು ರವಾನಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಭದ್ರತಾ ಪಡೆಗಳನ್ನು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಉಗ್ರರ ದಾಳಿ ಇಡೀ ಮಾಲ್​ ಹೊತ್ತಿ ಉರಿದಿದೆ.

Advertisement

ರಷ್ಯಾ ಅಧ್ಯಕ್ಷ ಪುಟಿನ್​ ಕೂಡ, ದಾಳಿಯ ಬಗ್ಗೆ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ತಿದ್ದಾರೆ. ಹಾಗೂ ಮಾಸ್ಕೋದ ಏರ್​ಪೋರ್ಟ್​, ಬಸ್​ ಸ್ಟೇಷನ್​, ಜನದಟ್ಟಣೆ ಪ್ರದೇಶಗಳಲ್ಲಿ ಹೈ ಅಲರ್ಟ್​ ಘೋಷಿಸಿಲಾಗಿದೆ.

https://twitter.com/i/status/1771338814361141283

Advertisement
Tags :
Advertisement