For the best experience, open
https://m.newskannada.com
on your mobile browser.
Advertisement

ವಿಶ್ವದಲ್ಲೇ ದುಬಾರಿ ಹಾಲು ಇಲಿ ಹಾಲು : ಇದರ ಬೆಲೆ ಎಷ್ಟು ಗೊತ್ತ!

ಸಾಮಾನ್ಯವಾಗಿ ಎಲ್ಲರೂ ಕುಡಿಯಲು ಮತ್ತು ಇತರೆ ತಿನಿಸುಗಳಿಗೆ ಹಸು ಹಾಲನ್ನು ಬಳಸುತ್ತಾರೆ. ಇನ್ನು ಕೆಲವುಕಡೆ ‌ಹೆಚ್ಚು ಪೌಷ್ಟಿಕ ಎಂದು ಕುರಿ, ಮೇಕೆ ಹಾಲನ್ನು ಬಳಸುತ್ತಾರೆ.ಇವೆಲ್ಲ ಹಾಲು ಈಗ ಸರ್ವೇ ಸಾಮನ್ಯ.
06:16 PM Mar 12, 2024 IST | Nisarga K
ವಿಶ್ವದಲ್ಲೇ ದುಬಾರಿ ಹಾಲು ಇಲಿ ಹಾಲು   ಇದರ ಬೆಲೆ ಎಷ್ಟು ಗೊತ್ತ
ವಿಶ್ವದಲ್ಲೇ ದುಬಾರಿ ಹಾಲು ಇಲಿ ಹಾಲು : ಇದರ ಬೆಲೆ ಎಷ್ಟು ಗೊತ್ತ!

ಸಾಮಾನ್ಯವಾಗಿ ಎಲ್ಲರೂ ಕುಡಿಯಲು ಮತ್ತು ಇತರೆ ತಿನಿಸುಗಳಿಗೆ ಹಸು ಹಾಲನ್ನು ಬಳಸುತ್ತಾರೆ. ಇನ್ನು ಕೆಲವುಕಡೆ ‌ಹೆಚ್ಚು ಪೌಷ್ಟಿಕ ಎಂದು ಕುರಿ, ಮೇಕೆ ಹಾಲನ್ನು ಬಳಸುತ್ತಾರೆ.ಇವೆಲ್ಲ ಹಾಲು ಈಗ ಸರ್ವೇ ಸಾಮನ್ಯ.

Advertisement

ಇನ್ನೂ ಕೆಲವು ಕಡೆ ಒಂಟೆ ಹಾಲು ಹಾಗೂ ಕತ್ತೆ ಹಾಲನ್ನು ಬಳಸುತ್ತಾರೆ. ಹಿಂದಿನ ಕಾಲದ ರಾಣಿಯರು ಸ್ನಾನಕ್ಕೆ ನೀರಿನ ಬದಲು ಕತ್ತೆ ಹಾಲನ್ನು ಬಳಸುತ್ತಿದ್ದರಂತೆ ಹಾಗಾಗಿ ಆಗಿನ ರಾಣಿಯರ ಶರೀರ ಹೆಚ್ಚು ಹೊಳೆಯುತ್ತಿತ್ತು ಎಂದು ಹೇಳಲಾಗುತ್ತದೆ. ಇದನ್ನೇ ಅಚ್ಚರಿ ಎನ್ನುವವರಿಗೆ ಇದಕ್ಕಿಂತ ಅಚ್ಚರಿ ಇಲ್ಲಿದೆ, ಇಲಿ ಎಂದರೆ ಸಾಕು ಮಕ್ಕಳು ಮತ್ತು ಯುವತಿಯರು ಹೆದರಿ ಓಡುತ್ತಾರೆ.ಇನ್ನು ಕೆಲವರು ಪಾಷಣ ಇಟ್ಟು ಕೊಲ್ಲುತ್ತಾರೆ ಆದರೆ ಆದೇ ಇಲಿ ಎಷ್ಟು ಅಮೂಲ್ಯ ಎಂದರೆ ಅದರ 1ಲೀಟರ್‌ ಹಾಲಿನ ಬೆಲೆ 23 ಸಾವಿರ ಯುರೋ ಅಂದರೆ 18 ಲಕ್ಷ! ಹಸುವಿನ ಹಾಲಿಗೂ ಇದರ ಕಾಲು ಭಾಗ ಬೆಲೆ ಇಲ್ಲ ಅಷ್ಟು ಬೆಲೆ ಪುಟ್ಟ ಇಲಿಯ ಹಾಲಿಗಿದೆ.

ಅಚ್ಚರಿ ತರುವ ಬೆಲೆ ಹೊಂದಿರುವ ಈ ಹಾಲನ್ನು ಎಲ್ಲಿ ಬಳಸಲಾಗುತ್ತದೆ ಎಂದರೆ ವಿಜ್ಞಾನಿಗಳು ಸಂಶೋಧನೆಗೆ ಬಳಸುತ್ತಾರೆ.ವಿಜ್ಞಾನಿಗಳು ಮಲೇರಿಯಾ ಬ್ಯಾಕ್ಟೀರಿಯಾಗಳನ್ನ ಕೊಲ್ಲುವ ಔಷದಗಳಲ್ಲಿ ಇಲಿಹಾಲನ್ನು ಬಳಸಲಾಗುತ್ತದೆ. ಇಲಿ ಹಾಲು ಹಸುವಿನ 4 ಪಟ್ಟು ಹೆಚ್ಚು ಪೌಷ್ಟಿಕಾಂಶ ಹೊಂದಿದೆ. ಹಾಗೂ ಇದರ ಡಿಎನ್‌ಎ ಕೂಡ ಬೇರೆ ಪ್ರಾಣಿಗಳಿಗಿಂತ ಹೆಚು ಪರಿಣಾಮಕಾರಿ.ಇದು ಮಾನವ ದೇಹಕ್ಕೂ ಹೋಲುತ್ತದೆ. ಹೆಚ್ಚಾಗಿ ಇಲಿ ಹಾಲನ್ನು ಸಂಶೊದನೆಗೆ, ಪ್ರಯೋಗ ನಡೆಸಲು, ಪಲಿತಾಂಸ ವಿಷ್ಲೆಸಿಸಲು,ಹಾಗೂ ಮಲೇರಿಯಾ ತಡೆಗಟ್ಟಲು ಬಳಸಲಾಗುತ್ತದೆ. ಇಲಿ ಹಾಲು ತುಂಬಾ ದುಬಾರಿ ಎಂದು ತಿಳಿದು ಬಂದಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು ಈಗ ಎಲ್ಲೆಡೆ ವೈರಲ್‌ ಆಗಿದೆ.

Advertisement

https://twitter.com/PediaFact/status/1481720741783826432/photo/1

Advertisement
Tags :
Advertisement