For the best experience, open
https://m.newskannada.com
on your mobile browser.
Advertisement

ಗಂಡನ ಕಿರುಕುಳ: 2 ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಗಂಡನ ಕಿರುಕುಳದಿಂದ ಮನನೊಂದು 2 ಹೆಣ್ಣು ಮಕ್ಕಳನ್ನು ಹೆತ್ತ ತಾಯಿಯೇ ಬಾವಿಗೆ ತಳ್ಳಿ ಕೊಲೆಗೈದು ನಂತರ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
07:12 PM Jan 17, 2024 IST | Ashika S
ಗಂಡನ ಕಿರುಕುಳ  2 ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಗಂಡನ ಕಿರುಕುಳದಿಂದ ಮನನೊಂದು 2 ಹೆಣ್ಣು ಮಕ್ಕಳನ್ನು ಹೆತ್ತ ತಾಯಿಯೇ ಬಾವಿಗೆ ತಳ್ಳಿ ಕೊಲೆಗೈದು ನಂತರ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ತಾಯಿ ಸರಸ್ವತಿ ಕಿರವೆ (26), ಮಕ್ಕಳಾದ ದೀಪಿಕಾ (7), ಹಾಗೂ ರೀತಿಕಾ (4) ಮೃತ ದುರ್ದೈವಿಗಳು.

ಮನಕುಲಕುವ ಘಟನೆ ನಡೆದಿದೆ. ಎರಡು ಹೆಣ್ಣು ಮಕ್ಕಳ ಜೋತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Advertisement

ಮಹಾರಾಷ್ಟ್ರ ಸಾಂಗ್ಲಿಯ ಕಿರಣ ಎಂಬುವವರ ಜೊತೆ ಸರಸ್ವತಿ ಅವರನ್ನು 2016ರಲ್ಲಿ ವಿವಾಹ ಮಾಡಿಕೊಡಲಾಗಿತ್ತ. ಆದರೆ, ಗಂಡನ ಕಿರುಕುಳಕ್ಕೆ ಬೇಸತ್ತು ಸರಸ್ವತಿ ತವರು ಮನೆ ಸುಲ್ತಾನಪುರಕ್ಕೆ ಬಂದಿದ್ದಳು. ಆಗಾಗ್ಗೆ ಫೋನ್‌ ಮಾಡಿ ಬಾಯಿಗೆ ಬಂದಂತೆ ಬೈದು ಕಿರುಕುಳ ನೀಡುತ್ತಿದ್ದನು. ಇದರಿಂದ ಮನನೊಂದು ಆಕೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತವರು ಮನೆಯವರು ಹೇಳಿದ್ದಾರೆ.

ಇನ್ನು ಮೃತ ದೇಹಗಳನ್ನು ಬಾವಿಯಿಂದ ಹೊರ ತೆಗೆದ ಮೃತರ ಕುಟುಂಬಸ್ಥರು ಗಂಡನ ಮನೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821

Advertisement
Tags :
Advertisement