ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂದು ಎಂಟ್ರಿ ಕೊಡಲಿದೆ ಮೊಟೊರೊಲಾ ಎಡ್ಜ್‌ 50 ಪ್ರೊ

ಮೊಟೊರೊಲಾ ಮೊಬೈಲ್‌ ಕಂಪನಿಯ ನೂತನ ಮೊಟೊರೊಲಾ ಎಡ್ಜ್‌ 50 ಪ್ರೊ ಸ್ಮಾರ್ಟ್‌ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ಇಂದು (ಏಪ್ರಿಲ್‌ 3 ರಂದು) ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಮೀಡ್‌ರೇಂಜ್‌ ಪ್ರೈಸ್‌ ಟ್ಯಾಗ್‌ ಪಡೆದಿರುವ ನಿರೀಕ್ಷೆಗಳು ಇದ್ದು, ಕೆಲವು ಅತ್ಯಾಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳೆದಿದೆ.
04:35 PM Apr 03, 2024 IST | Ashitha S

ಮೊಟೊರೊಲಾ ಮೊಬೈಲ್‌ ಕಂಪನಿಯ ನೂತನ ಮೊಟೊರೊಲಾ ಎಡ್ಜ್‌ 50 ಪ್ರೊ ಸ್ಮಾರ್ಟ್‌ಫೋನ್‌ ದೇಶಿಯ ಮಾರುಕಟ್ಟೆಯಲ್ಲಿ ಇಂದು (ಏಪ್ರಿಲ್‌ 3 ರಂದು) ಅಧಿಕೃತವಾಗಿ ಎಂಟ್ರಿ ಕೊಡಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಮೀಡ್‌ರೇಂಜ್‌ ಪ್ರೈಸ್‌ ಟ್ಯಾಗ್‌ ಪಡೆದಿರುವ ನಿರೀಕ್ಷೆಗಳು ಇದ್ದು, ಕೆಲವು ಅತ್ಯಾಕರ್ಷಕ ಫೀಚರ್ಸ್‌ಗಳ ಮೂಲಕ ಗಮನ ಸೆಳೆದಿದೆ.

Advertisement

ಮೊಟೊರೊಲಾ ಎಡ್ಜ್‌ 50 ಪ್ರೊ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ನಾಳೆ ಲಾಂಚ್ ಆಗಲಿದೆ. ಈ ಮೊಬೈಲ್‌ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದು, ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 3 SoC ಪ್ರೊಸೆಸರ್‌ ಪವರ್‌ ಪಡೆದಿದೆ.

ಮೊಟೊರೊಲಾ ಎಡ್ಜ್‌ 50 ಪ್ರೊ ಮೊಬೈಲ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಒಳಗೊಂಡಿರಲಿದ್ದು, ಈ ಡಿಸ್‌ಪ್ಲೇಯು 1200 x 2780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಪೋರ್ಟ್‌ ಪಡೆದಿರುತ್ತದೆ. ಇದಲ್ಲದೆ ಡಿಸ್‌ಪ್ಲೇ 144 ಟ್ರೂ ಕಲರ್‌ ಡಿಸ್‌ಪ್ಲೇ ಸೌಲಭ್ಯ ಒಳಗೊಂಡಿರಲಿದ್ದು, ಹಾಗೆಯೇ ಇದರ ಡಿಸ್‌ಪ್ಲೇ 2000 ನಿಟ್ಸ್‌ ಬ್ರೈಟ್‌ನೆಸ್‌ ಬೆಂಬಲ ಇರಲಿದೆ. ಅಲ್ಲದೇ 3D ಕರ್ವ್‌ ಡಿಸ್‌ಪ್ಲೇ ರಚನೆ ಅನ್ನು ಪಡೆದಿರಲಿದೆ.

Advertisement

ಮೊಟೊರೊಲಾದ ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 3 SoC ಪ್ರೊಸೆಸರ್‌ ಬಲವನ್ನು ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಇರಲಿದೆ. ಇದರೊಂದಿಗೆ 12 GB RAM ಮತ್ತು 256 GB ಆಂತರೀಕ ಸ್ಟೋರೇಜ್‌ ಆಯ್ಕೆ ಒಳಗೊಂಡಿರಲಿದೆ.

ಇನ್ನು ಈ ನೂತನ 5G ಮೊಬೈಲ್‌ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 125W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಆಯ್ಕೆ ಇರಲಿದೆ ಎಂದು ತಿಳಿದು ಬಂದಿದೆ.

 

Advertisement
Tags :
indiaKARNATAKAmotorola edge 50 proNewsKarnataka
Advertisement
Next Article