For the best experience, open
https://m.newskannada.com
on your mobile browser.
Advertisement

ಮೊಜಾಂಬಿಕ್: ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿ

ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿಯಾಗಿರುವ ಘಟನೆ ನಡೆದಿದೆ. 
09:46 AM Apr 08, 2024 IST | Ashika S
ಮೊಜಾಂಬಿಕ್  ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿ

ದಕ್ಷಿಣ ಆಫ್ರಿಕಾ:  ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿಯಾಗಿರುವ ಘಟನೆ ನಡೆದಿದೆ.

Advertisement

ಸತ್ತವರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬದುಕುಳಿದ 5 ಜನರಲ್ಲಿ 2 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

130 ಮಂದಿ ಪ್ರಯಾಣಿಸುತ್ತಿದ್ದ ಮೀನುಗಾರಿಕಾ ದೋಣಿ ಮೊಜಾಂಬಿಕ್ ದ್ವೀಪದಿಂದ ನಂಪುಲಾ ದ್ವೀಪಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ.

Advertisement

ಈ ದೋಣಿ, ಪ್ರಯಾಣಿಕರ ಸಾಗಣೆಗೆ ಯೋಗ್ಯವಾಗಿಲ್ಲ, ಹಾಗೂ ದೋಣಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ತುಂಬಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮೊಜಾಂಬಿಕ್​ನಲ್ಲಿ ಕಾಲರಾ ಪ್ರಕರಣಗಳು ಕೂಡ ಹೆಚ್ಚಾಗಿದ್ದು,ಇದರಿಂದಾಗಿ ಜನರು ಮೊಜಾಂಬಿಕ್​ನಿಂದ ವಲಸೆ ಹೋಗುತ್ತಿದ್ದಾರೆ, ಇದಲ್ಲದೇ ನೆರೆಯ ಕಾಬೋ ಡೆಲ್ಗಾಡೊದಲ್ಲಿ ಜಿಹಾದಿ ದಾಳಿಯಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡುವವರ ಸಂಖ್ಯೆಯೂ ಹೆಚ್ಚಿದೆ.

ಹೆಚ್ಚಿದೆ. ಅಕ್ಟೋಬರ್ 2023 ರಿಂದ ಸುಮಾರು 15,000 ಪ್ರಕರಣಗಳನ್ನು ವರದಿ ಮಾಡಿದೆ, 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Advertisement
Tags :
Advertisement