ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಓ.ಎನ್.ಜಿ.ಸಿ ಕಾರ್ಗೋವನ್ನು ಸ್ವಾಗತಿಸಿದ ಎಮ್.ಆರ್.ಪಿ.ಎಲ್‌

ಮಂಗಳೂರು ರಿಫೈನರಿ ಪೆಟ್ರೋಲಿಯಂ ಲಿಮಿಟೆಡ್‌ ತನ್ನ ಮೊದಲ ONGCಯ KG 98/2 ಕಚ್ಚಾ ತೈಲದ ಹಡಗನ್ನು ಶನಿವಾರ ಸ್ವಾಗತಿಸಿದೆ. ಇದರಿಂದ ದೇಶದ ಪೆಟ್ರೋಲಿಯಂ ಉತ್ಪಾದನೆ 7% ಏರಿಕೆಯಾಗುವ ನಿರೀಕ್ಷೆಯಿದ್ದು, LPG, ಪೆಟ್ರೋಲ್‌ ಹಾಗು ಡೀಸೆಲ್‌ ಉತ್ಪಾದನೆ ಸುಲಭವಾಗಲಿದೆ.
07:12 PM Mar 09, 2024 IST | Maithri S

ಮಂಗಳೂರು: ಮಂಗಳೂರು ರಿಫೈನರಿ ಪೆಟ್ರೋಲಿಯಂ ಲಿಮಿಟೆಡ್‌ ತನ್ನ ಮೊದಲ ONGCಯ KG 98/2 ಕಚ್ಚಾ ತೈಲದ ಹಡಗನ್ನು ಶನಿವಾರ ಸ್ವಾಗತಿಸಿದೆ. ಇದರಿಂದ ದೇಶದ ಪೆಟ್ರೋಲಿಯಂ ಉತ್ಪಾದನೆ 7% ಏರಿಕೆಯಾಗುವ ನಿರೀಕ್ಷೆಯಿದ್ದು, LPG, ಪೆಟ್ರೋಲ್‌ ಹಾಗು ಡೀಸೆಲ್‌ ಉತ್ಪಾದನೆ ಸುಲಭವಾಗಲಿದೆ.

Advertisement

ಸಂಸ್ಥೆಯ ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯದ ಬಗ್ಗೆ ಮಾತನಾಡಿದ MRPLನ ವ್ಯವಸ್ಥಾಪಕ ನಿರ್ದೇಶಕ ಮುಂಡ್ಕೂರ್‌ ಶ್ಯಾಮ್‌, ಕಚ್ಚಾ ತೈಲ ಸಂಸ್ಕರಣೆಗೆ ಅಗತ್ಯವಿರುವ ಮೂಲಸೌಕರ್ಯ ಹಾಗು ಕೌಶಲ್ಯವನ್ನು MRPL ಹೊಂದಿದೆ. ಕಚ್ಚಾ ತೈಲದಲ್ಲಿನ ಎಲ್ಲಾ ಅಶುದ್ಧತೆಗಳನ್ನು ತೆಗೆಯುವ ಕಾರ್ಯವನ್ನು ಕೈಗೆತ್ತಿಕೊಂಡವರಲ್ಲಿ ನಾವು ಮೊದಲಿಗರಾಗಿದ್ದೇವೆ ಎಂದರು.

ಬಂಗಾಳಕೊಲ್ಲಿಯ ಕೃಷ್ಣಾ-ಗೋದಾವರಿ ತಟದಿಂದ ಮೊದಲ ಕಾರ್ಗೋವನ್ನು ಸ್ವಾಗತಿಸುವುದು ನಮಗೆಲ್ಲರಿಗು ಸಂತಸದ ಸಂಗತಿ ಎಂದು ಸಂಸ್ಥೆಯ CVO ಗಣೇಶ್‌ ಭಟ್ ಹೇಳಿದರು.

Advertisement

ಆಮದಿನ ಮೇಲೆ ಅವಲಂಬಿತರಾಗುವುದರಿಂದ ಎದುರಾಗುವ ಸವಾಲುಗಳ ಬಗ್ಗೆ ವಿವರಿಸಿದ ಅವರು, ಕಚ್ಚಾ ತೈಲ ವಲಯದಲ್ಲಿ ಪಶ್ಚಿಮದ ರಾಷ್ಟ್ರಗಳೇ ಮೇಲುಗೈ ಸಾಧಿಸಿರುವುದರಿಂದ ಆಮದಿನ ಮೇಲಿನ ಅತಿಯಾದ ಅವಲಂಬನೆ ಜಾಗತಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ MRPLನ ಸಂಸ್ಕರಣಾ ನಿರ್ದೇಶಕ ಸಂಜಯ್‌ ವರ್ಮಾ, ಹಣಕಾಸು ನಿರ್ದೇಶಕ ವಿವೇಕ ಟೋಗಾನ್ಕರ್‌, ONGCಯ ಸುನಿಲ್‌ ಕುಮಾರ್‌ ಉಪಸ್ಥಿತರಿದ್ದರು.

Advertisement
Tags :
indiaLatestNewsMRPLNewsKannadaONGCಕರ್ನಾಟಕಮಂಗಳೂರು
Advertisement
Next Article