ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

MRPL ಸಂಸ್ಥೆಗೆ AS9001:D ಪ್ರಮಾಣೀಕರಣದ ಕಿರೀಟ

ಮಂಗಳೂರಿನ MRPL ಸಂಸ್ಥೆ, ಅಂತರರಾಷ್ಟ್ರೀಯ ಏರೋಸ್ಪೇಸ್ ಕ್ವಾಲಿಟಿ ಗ್ರೂಪ್ (IAQG) ರವರ AS9001:D ಪ್ರಮಾಣಿಕರಣವನ್ನು ಗಳಿಸಿದೆ. ಈ ಪ್ರಮಾಣಿಕರಣ ಮಾನದಂಡವು ವಾಯುಯಾನ, ಬಾಹ್ಯಾಕಾಶ ಮತ್ತು ರಕ್ಷಣಾ ಸಂಸ್ಥೆಗಳಲ್ಲಿ ಉತ್ಪಾದನೆ, ಸಂಗ್ರಹಣೆ, ಪರೀಕ್ಷೆ ಮತ್ತು ಏವಿಯೇಷನ್ ​​ಟರ್ಬೈನ್ ಇಂಧನ (ATF) ವಿತರಣೆಯನ್ನು ಖಾತರಿಪಡಿಸುತ್ತದೆ.
01:46 PM Feb 01, 2024 IST | Gayathri SG

ಮಂಗಳೂರಿನ MRPL ಸಂಸ್ಥೆ, ಅಂತರರಾಷ್ಟ್ರೀಯ ಏರೋಸ್ಪೇಸ್ ಕ್ವಾಲಿಟಿ ಗ್ರೂಪ್ (IAQG) ರವರ AS9001:D ಪ್ರಮಾಣಿಕರಣವನ್ನು ಗಳಿಸಿದೆ. ಈ ಪ್ರಮಾಣಿಕರಣ ಮಾನದಂಡವು ವಾಯುಯಾನ, ಬಾಹ್ಯಾಕಾಶ ಮತ್ತು ರಕ್ಷಣಾ ಸಂಸ್ಥೆಗಳಲ್ಲಿ ಉತ್ಪಾದನೆ, ಸಂಗ್ರಹಣೆ, ಪರೀಕ್ಷೆ ಮತ್ತು ಏವಿಯೇಷನ್ ​​ಟರ್ಬೈನ್ ಇಂಧನ (ATF) ವಿತರಣೆಯನ್ನು ಖಾತರಿಪಡಿಸುತ್ತದೆ.

Advertisement

MRPL ಈ ನೂತನ ಏರೋಸ್ಪೇಸ್ ಗುಣಮಟ್ಟವನ್ನು ಪಡೆದ ಭಾರತದ ಮೊದಲ ತೈಲ ಸಂಸ್ಕರಣಾಗಾರವಾಗಿದೆ. ಏರೋಸ್ಪೇಸ್ ಉದ್ಯಮವು ಅದರ ಪೂರೈಕೆ ಸರಪಳಿಯಲ್ಲಿ ಅತ್ಯಂತ ನಿಖರತೆ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯನ್ನು ಬಯಸುತ್ತದೆ. AS9001:D ಮಾನದಂಡವು ಕಚ್ಚಾ ವಸ್ತುಗಳ ಪೂರೈಕೆಯಿಂದ ಅಂತಿಮ ಉತ್ಪನ್ನ ಪ್ರಮಾಣೀಕರಣದವರೆಗೆ ವಿವಿಧ ಪ್ರಕ್ರಿಯೆಗಳನ್ನು ಮತ್ತು ಸಂರಚನೆಯನ್ನು ಖಾತ್ರಿಗೊಳಿಸುತ್ತದೆ. ಪ್ರಮಾಣೀಕರಣ ಪ್ರಕ್ರಿಯೆಯು ಎಟಿಎಫ್‌ (ATF)ನ ಕ್ವಾಲಿಫೈಡ್ ಅಡಿಟಿವ್, ಕ್ಯಾಟಲಿಸ್ಟ ಮತ್ತು ಉತ್ಪಾದನಾ ಪ್ರಕ್ರಿಯೆಗಳ ಪ್ರಮಾಣೀಕರಣ, ಪೈಪ್‌ಲೈನ್ ನೆಟ್‌ವರ್ಕ್, ಫಾರಿನ್ ಆಬ್ಜೆಕ್ಟ್ ಡಿಟೇಕ್ಷನ್ (FOD) ತಡೆಗಟ್ಟುವಿಕೆ, ಶೇಖರಣಾ ಟ್ಯಾಂಕ್‌ಗಳ ಪ್ರಮಾಣೀಕರಣ ಮತ್ತು ವಿತರಣೆ ಈ ಎಲ್ಲಾ ಹಂತಗಳನ್ನು ಒಳಗೊಂಡಿರುತ್ತದೆ.

MRPL ಏರೋಸ್ಪೇಸ್ ವಲಯದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಈ AS9001:D ಪ್ರಮಾಣಿಕರಣವೂ ಸಹಕಾರಿಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

Advertisement

Advertisement
Tags :
LatestNewsMRPLNewsKannada
Advertisement
Next Article