For the best experience, open
https://m.newskannada.com
on your mobile browser.
Advertisement

ಕಂಗನಾ ರಣಾವತ್​ ಕುಟುಂಬಕ್ಕೆ ಸೇರಿದ ಪ್ರಾಪರ್ಟಿ ಖರೀದಿಸಿದ ಮೃಣಾಲ್​ ಠಾಕೂರ್

ನಟಿ ಮೃಣಾಲ್​ ಠಾಕೂರ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತಿದ್ದಾರೆ. ಅವರು ಮುಂಬೈನ ದುಬಾರಿ ಏರಿಯಾಗಳಲ್ಲಿ ಆಸ್ತಿ ಖರೀದಿ  ಮಾಡುತ್ತಿದ್ದಾರೆ.  ಈಗ ಅವರು ಖರೀದಿ ಮಾಡಿರುವುದು ಕಂಗನಾ ರಣಾವತ್​  ಕುಟುಂಬಕ್ಕೆ ಸೇರಿದ ಪ್ರಾಪರ್ಟಿ.
07:28 AM Feb 21, 2024 IST | Ashika S
ಕಂಗನಾ ರಣಾವತ್​ ಕುಟುಂಬಕ್ಕೆ ಸೇರಿದ ಪ್ರಾಪರ್ಟಿ ಖರೀದಿಸಿದ ಮೃಣಾಲ್​ ಠಾಕೂರ್

ಮುಂಬೈ: ನಟಿ ಮೃಣಾಲ್​ ಠಾಕೂರ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತಿದ್ದಾರೆ. ಅವರು ಮುಂಬೈನ ದುಬಾರಿ ಏರಿಯಾಗಳಲ್ಲಿ ಆಸ್ತಿ ಖರೀದಿ  ಮಾಡುತ್ತಿದ್ದಾರೆ. ಈಗ ಅವರು ಖರೀದಿ ಮಾಡಿರುವುದು ಕಂಗನಾ ರಣಾವತ್​ ಕುಟುಂಬಕ್ಕೆ ಸೇರಿದ ಪ್ರಾಪರ್ಟಿ.

Advertisement

ಮುಂಬೈನ ಅಂದೇರಿಯಲ್ಲಿ ಕಂಗನಾ ರಣಾವತ್​ ಅವರ ತಂದೆ ಅಮರ್​ದೀಪ್​ ರಣಾವತ್​ ಒಡೆತನದಲ್ಲಿ ಇದ್ದ ಎರಡು ಫ್ಲಾಟ್​ಗಳನ್ನು ಮೃಣಾಲ್​ ಠಾಕೂರ್​ ಖರೀದಿ ಮಾಡಿದ್ದಾರೆ. ಇದರ ಬೆಲೆ ಅಂದಾಜು 10 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.

ಮೃಣಾಲ್​ ಠಾಕೂರ್​ ಅವರು ಶೀಘ್ರದಲ್ಲೇ ಈ ಅಪಾರ್ಟ್​ಮೆಂಟ್​ಗೆ ಶಿಫ್ಟ್​ ಆಗಲಿದ್ದಾರೆ. ಸದ್ಯಕ್ಕೆ ಇಂಟೀರಿಯರ್​ ಡಿಸೈನ್​ ಕೆಲಸಗಳು ನಡೆಯುತ್ತಿವೆ ಎಂದು ವರದಿ ಆಗಿದೆ.

Advertisement

ಮೃಣಾಲ್​ ಠಾಕೂರ್​ ಅವರು ಬಣ್ಣದ ಬದುಕು ಆರಂಭಿಸಿದ್ದು ಹಿಂದಿ ಕಿರುತೆರೆಯಿಂದ. ಬಳಿಕ ಅವರಿಗೆ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸುವ ಚಾನ್ಸ್​ ಸಿಕ್ಕಿತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಪ್ರತಿಭೆ ಏನೆಂಬುದನ್ನು ಸಾಬೀತು ಮಾಡಿದ ಅವರಿಗೆ ದಕ್ಷಿಣ ಭಾರತದಿಂದಲೂ ಆಫರ್​ ಸಿಗಲಾರಂಭಿಸಿತು.

ತೆಲುಗಿನಲ್ಲಿ ಅವರು ನಟಿಸಿದ ಮೊದಲ ಸಿನಿಮಾ ‘ಸೀತಾ ರಾಮಂ’ ಸೂಪರ್​ ಹಿಟ್​ ಆಯಿತು. ಆ ಸಿನಿಮಾದಲ್ಲಿ ಮೃಣಾಲ್​ ಠಾಕೂರ್​ ಮಾಡಿದ ಸೀತಾ ಮಹಾಲಕ್ಷ್ಮೀ ಅಲಿಯಾಸ್​ ಪ್ರಿನ್ಸೆಸ್​ ನೂರ್​ ಜಹಾನ್​ ಪಾತ್ರ ಜನಮೆಚ್ಚುಗೆ ಪಡೆಯಿತು.

ಹಿಂದಿಯಲ್ಲಿ ‘ಸೂಪರ್​ 30’, ‘ಬಾಟ್ಲಾ ಹೌಸ್​’, ‘ತೂಫಾನ್​’, ‘ಜರ್ಸಿ’, ‘ಲಸ್ಟ್​ ಸ್ಟೋರೀಸ್​ 2’ ಮುಂತಾದ ಸಿನಿಮಾಗಳಲ್ಲಿ ಮೃಣಾಲ್​ ಠಾಕೂರ್​ ನಟಿಸಿದ್ದಾರೆ.

Advertisement
Tags :
Advertisement