For the best experience, open
https://m.newskannada.com
on your mobile browser.
Advertisement

ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಸ್ಥಾನದಿಂದ ಕೆಳಗಿಳಿದ ಎಂಎಸ್‌ ಧೋನಿ

ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್‌ ಕಿಂಗ್ಸ್‌ನ ನಾಯಕ ಸ್ಥಾನದಿಂದ ಅನುಭವಿ ಆಟಗಾರ ಎಂಎಸ್‌ ಧೋನಿ ಕೆಳಗಿಳಿದಿದ್ದಾರೆ. ಅವರ ಬದಲಿಗೆ ರುತುರಾಜ್‌ ಗಾಯಕ್ವಾಡ್‌ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.
04:41 PM Mar 21, 2024 IST | Ashitha S
ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ಸ್ಥಾನದಿಂದ ಕೆಳಗಿಳಿದ ಎಂಎಸ್‌ ಧೋನಿ

ಮುಂಬೈ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್‌ ಕಿಂಗ್ಸ್‌ನ ನಾಯಕ ಸ್ಥಾನದಿಂದ ಅನುಭವಿ ಆಟಗಾರ ಎಂಎಸ್‌ ಧೋನಿ ಕೆಳಗಿಳಿದಿದ್ದಾರೆ. ಅವರ ಬದಲಿಗೆ ರುತುರಾಜ್‌ ಗಾಯಕ್ವಾಡ್‌ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.

Advertisement

'2024 ರ ಟಾಟಾ ಐಪಿಎಲ್ ಆರಂಭಕ್ಕೂ ಮುನ್ನ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ. ರುತುರಾಜ್ 2019 ರಿಂದ ಚೆನ್ನೈ ಸೂಪರ್ ಕಿಂಗ್ಸ್‌ನ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಈ ಅವಧಿಯಲ್ಲಿ ಐಪಿಎಲ್‌ನಲ್ಲಿ 52 ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಋತುವಿನಲ್ಲಿ ಇವರ ನಾಯಕತ್ವದಲ್ಲಿ ಆಡುವುದನ್ನು ತಂಡ ಎದುರು ನೋಡುತ್ತಿದೆ' ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವದಿಂದ ಎಂಎಸ್‌ ಧೋನಿ ಕೆಳಗಿಳಿಯುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ ತಂಡದ ನಾಯಕತ್ವದಿಂದ ಕೆಳಗಿಳಿದು ಈ ಸ್ಥಾನವನ್ನು ರವೀಂದ್ರ ಜಡೇಜಾಗೆ ನೀಡಿದ್ದರು. ಆದರೆ, ಆ ವರ್ಷದ ಐಪಿಎಲ್‌ನಲ್ಲಿ ತಂಡದ ದಯನೀಯ ಸೋಲುಗಳ ಕಾರಣದಿಂದಾಗಿ ಟೂರ್ನಿಯ ನಡುವೆಯೇ ಜಡೇಜಾ ನಾಯಕತ್ವವನ್ನು ಮರಳಿ ಎಂಎಸ್‌ ಧೋನಿಗೆ ನೀಡಿದ್ದರು. ಈಗ ಮತ್ತೊಮ್ಮೆ ಎಂಎಸ್‌ ಧೋನಿ ಮತ್ತೊಮ್ಮೆ ತಂಡದ ನಾಯಕತ್ವವನ್ನು ರುತುರಾಜ್‌ ಗೆ ಹಸ್ತಾಂತರ ಮಾಡಿದ್ದಾರೆ.

Advertisement

Advertisement
Tags :
Advertisement