ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಯೋಧ್ಯೆಗೆ ಆಹ್ವಾನವಿದ್ದರೂ ಕೆಲ ಕ್ರಿಕೆಟಿಗರ ಅನುಪಸ್ಥಿತಿ; ಸ್ಪಷ್ಟವಾಗದ ಕಾರಣ

ರಾಮಮಂದಿರದಲ್ಲಿ ನಡೆದ ಐತಿಹಾಸಿಕ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಜನಪ್ರತಿನಿಧಿಗಳು, ಕಲಾವಿದರು ಹಾಗು ಕ್ರೀಡಾಪಟುಗಳಿಗೆ ಆಹ್ವಾನವಿತ್ತಾದರೂ ಕೆಲ ಕ್ರಿಕೆಟಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
07:24 PM Jan 23, 2024 IST | Maithri S

ನವದೆಹಲಿ: ರಾಮಮಂದಿರದಲ್ಲಿ ನಡೆದ ಐತಿಹಾಸಿಕ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಜನಪ್ರತಿನಿಧಿಗಳು, ಕಲಾವಿದರು ಹಾಗು ಕ್ರೀಡಾಪಟುಗಳಿಗೆ ಆಹ್ವಾನವಿತ್ತಾದರೂ ಕೆಲ ಕ್ರಿಕೆಟಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

Advertisement

ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನವರು ಖುದ್ದಾಗಿ ಹೋಗಿ ಆಮಂತ್ರಿಸಿದ್ದರೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಎಂ.ಎಸ್.ಧೋನಿ ಹಾಜರಾಗಿರಲಿಲ್ಲ.

ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ಟಾರ್ ಕ್ರಿಕೆಟಿಗ ಕೊಹ್ಲಿಗೆ ಬಿಸಿಸಿಐ ಅನುಮತಿ ನೀಡಿತ್ತು.

Advertisement

ಜ.೨೫ರಿಂದ ನಡೆಯಲಿರುವ ಇಂಗ್ಲಂಡ್ ವಿರುದ್ಧದ ೫ ಟೆಸ್ಟ್ ಪಂದ್ಯಗಳ ಪ್ರಾಕ್ಟಿಸ್ ಭಾನುವಾರದಿಂದ ಶುರುವಾಗಿದ್ದು, ತಂಡ ಹೈದರಾಬಾದಿನಲ್ಲಿ ಬೀಡು ಬಿಟ್ಟಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಟೆಸ್ಟ್ ಸರಿಣಿಯ ಎರಡು ಪಂದ್ಯಗಳಲ್ಲಿ ಕೊಹ್ಲಿ ಆಡುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಬಿಸಿಸಿಐ, ಕೊಹ್ಲಿ ಕೆಲ ವೈಯಕ್ತಿಕ ಕಾರಣಗಳಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದಿದೆ ಮತ್ತು ಅವರ ಕುಟುಂಬದ ಗೌಪ್ಯತೆಗೆ ಧಕ್ಕೆ ತರದಂತೆ ಅಭಿಮಾನಿಗಳನ್ನು ಒತ್ತಾಯಿಸಿದೆ.

ಧೋನಿಯವರ ಅನುಪಸ್ಥಿತಿಗೆ ಕಾರಣ ತಿಳಿದುಬಂದಿಲ್ಲ.

Advertisement
Tags :
AyodhyaBCCIcricketindiaLatestNewsNewsKannada
Advertisement
Next Article