For the best experience, open
https://m.newskannada.com
on your mobile browser.
Advertisement

ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಯ್ತೆಂದು ಜಿಯೋ ಕೊಟ್ಟರಂತೆ ಅಂಬಾನಿ !

ಇಂದು ನೆಟ್‌ವರ್ಕ್ ಎಂದರೆ ಜಿಯೋ ಎಂಬ ಮಟ್ಟಿಗೆ ಭಾರತದಲ್ಲಿ ಜಿಯೋ ಕ್ರಾಂತಿ ಮಾಡಿದೆ. ಇದು ಸಾಕಷ್ಟು ಜನರ ಬದುಕು ಬದಲಾಯಿಸಿದೆ. ನಿಮಗೆ ಗೊತ್ತಾ, ಇಂಥಾ ಈ ಜಿಯೋವನ್ನು ರಿಲೈಯನ್ಸ್ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ ಲಾಂಚ್ ಮಾಡಲು ಕಾರಣ, ಅವರ ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಗುತ್ತಿತ್ತೆಂಬುದು.
11:12 AM Feb 25, 2024 IST | Ashitha S
ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಯ್ತೆಂದು ಜಿಯೋ ಕೊಟ್ಟರಂತೆ ಅಂಬಾನಿ

ಮುಂಬೈ: ಇಂದು ನೆಟ್‌ವರ್ಕ್ ಎಂದರೆ ಜಿಯೋ ಎಂಬ ಮಟ್ಟಿಗೆ ಭಾರತದಲ್ಲಿ ಜಿಯೋ ಕ್ರಾಂತಿ ಮಾಡಿದೆ. ಇದು ಸಾಕಷ್ಟು ಜನರ ಬದುಕು ಬದಲಾಯಿಸಿದೆ. ನಿಮಗೆ ಗೊತ್ತಾ, ಇಂಥಾ ಈ ಜಿಯೋವನ್ನು ರಿಲೈಯನ್ಸ್ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ ಲಾಂಚ್ ಮಾಡಲು ಕಾರಣ, ಅವರ ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಗುತ್ತಿತ್ತೆಂಬುದು.

Advertisement

ಹೌದು. . ಈ ವಿಚಾರವನ್ನು 2018 ರಲ್ಲಿ ಲಂಡನ್‌ನಲ್ಲಿ ನಡೆದ ಫೈನಾನ್ಶಿಯಲ್ ಟೈಮ್ಸ್ ಆರ್ಸೆಲರ್ ಮಿತ್ತಲ್ ಬೋಲ್ಡ್‌ನೆಸ್ ಇನ್ ಬ್ಯುಸಿನೆಸ್ ಅವಾರ್ಡ್ಸ್‌ ಸಮಯದಲ್ಲಿ ತಮ್ಮ ಭಾಷಣದಲ್ಲಿ ಆಸಕ್ತಿದಾಯಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

2011ರಲ್ಲಿ ಜಿಯೋ ಪ್ರಾರಂಭಿಸಲು ತಮ್ಮ ಮಗಳು ಇಶಾ ಕಾರಣ. ಇದು ಆಕೆಯ ಕಲ್ಪನೆ ಎಂದಿದ್ದಾರೆ ಮುಖೇಶ್. ಮಗಳು ಆಗ ಯೇಲೆ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದಳು ಮತ್ತು ರಜೆಗಾಗಿ ಮನೆಗೆ ಮರಳಿದ್ದಳು. ಆಗ ಮನೆಯಲ್ಲಿದ್ದ ಕಳಪೆ ನೆಟ್ವರ್ಕ್ ಆಕೆಯ ಹತಾಶೆಗೆ ಕಾರಣವಾಯ್ತು . ಮನೆಯಲ್ಲಿರುವ ಸಮಯದಲ್ಲಿ ಕೆಲ ಕೋರ್ಸ್‌ಗಳನ್ನು ಮುಗಿಸಿಕೊಳ್ಳಲು ಬಯಸಿದ್ದ ಇಶಾಗೆ ಇಂಟರ್ನೆಟ್ ಸಮಸ್ಯೆ ದೊಡ್ಡ ಸಮಸ್ಯೆಯಾಯಿತು. ಆಕೆ ಈ ವಿಷಯವನ್ನು ತಂದೆಗೆ ಹೇಳಿಕೊಂಡಳು.

Advertisement

ಮಗಳ ಈ ಸಮಸ್ಯೆ ಕೇಳಿದ ಅಂಬಾನಿ, ಕೇವಲ ಮಗಳಿಗಲ್ಲ, ಕೋಟ್ಯಂತರ ಭಾರತೀಯರಿಗೆ ಕೈಗೆಟುಕುವ, ಹೆಚ್ಚಿನ ವೇಗದ ಇಂಟರ್ನೆಟ್ ಒದಗಿಸಲು ಜಿಯೋ ಲಾಂಚ್ ಮಾಡಿದರು. ಈ ಭಾಷಣದಲ್ಲಿ ಮುಖೇಶ್ ಅವರ ಮಕ್ಕಳಾದ ಇಶಾ ಮತ್ತು ಆಕಾಶ್ ಅವರು ಅಸಾಧಾರಣವಾದ ಸೃಜನಶೀಲ, ಮಹತ್ವಾಕಾಂಕ್ಷೆಯ ಮತ್ತು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಅಸಹನೆ ಹೊಂದಿರುವ ಪೀಳಿಗೆಯನ್ನು ಪ್ರತಿನಿಧಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

Advertisement
Tags :
Advertisement