For the best experience, open
https://m.newskannada.com
on your mobile browser.
Advertisement

ಭಾವ- ಬಾಮೈದನ ನಡುವಿನ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ

ಭಾವ ಮತ್ತು ಬಾಮೈದನ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸಾಗಡೆ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.
10:05 PM Feb 22, 2024 IST | Gayathri SG
ಭಾವ  ಬಾಮೈದನ ನಡುವಿನ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ

ಚಾಮರಾಜನಗರ: ಭಾವ ಮತ್ತು ಬಾಮೈದನ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸಾಗಡೆ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

Advertisement

ಹಣದ ವಿಚಾರವಾಗಿ ಶುರುವಾದ ಗಲಾಟೆ ಬೆಳೆಗ್ಗೆಯಿಂದ ಸಂಜೆಯವರೆಗೂ ನಡೆದು ಮಾತಿನ ಚಕಮಕಿ ತಾರಕಕ್ಕೇರಿದೆ ಇದರಿಂದ ಕೋಪೋದ್ರಿಕನಾದ ರಾಜು ಬಾಮೈದ ನಾಗೇಂದ್ರನ (34) ಮುಖಕ್ಕೆ ಕಾರದಪುಡಿ ಎರಚಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ. ಮೃತ ನಾಗೇಂದ್ರ ತನ್ನ ಬಾವ ರಾಜುಗೆ ಬೇರೆಯವರಿಂದ ಸಾಲದ ರೂಪದಲ್ಲಿ ಹಣ ಕೊಡಿಸಿದ್ದ ಎನ್ನಲಾಗಿದ್ದು ಹಣ ವಾಪಾಸ್ ಕೇಳಿದ್ದಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೈದು ಪೊಲೀಸ್ ಠಾಣೆಗೆ ಹೋಗಿ ಶರಣಾಗುವುದಾಗಿ ಹೇಳಿ ಪರಾರಿಯಾಗಿರುವ ಆರೋಪಿ ರಾಜುವಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Advertisement

Advertisement
Tags :
Advertisement