For the best experience, open
https://m.newskannada.com
on your mobile browser.
Advertisement

ಫೋಟೋಗ್ರಾಫರ್​​ನ ಕತ್ತು ಹಿಸುಕಿ ಕೊಂದ ಯುವಕನ ಗ್ಯಾಂಗ್: ಕಾರಣವೇನು ಗೊತ್ತಾ?

ಕ್ಯಾಮೆರಾಕ್ಕಾಗಿ ಓರ್ವ ಫೋಟೋಗ್ರಾಫರ್​​ ಅನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.
09:43 AM Mar 05, 2024 IST | Gayathri SG
ಫೋಟೋಗ್ರಾಫರ್​​ನ ಕತ್ತು ಹಿಸುಕಿ ಕೊಂದ ಯುವಕನ ಗ್ಯಾಂಗ್  ಕಾರಣವೇನು ಗೊತ್ತಾ

ವಿಶಾಖಪಟ್ಟಣಂ: ಕ್ಯಾಮೆರಾಕ್ಕಾಗಿ ಓರ್ವ ಫೋಟೋಗ್ರಾಫರ್​​ ಅನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

Advertisement

ಕೊಲೆ ಆರೋಪಿಯನ್ನು ಶಣ್ಮುಖ ತೇಜ(19ವರ್ಷ) ಎಂದು ಗುರುತಿಸಲಾಗಿದೆ. ಮೃತರನ್ನು ಪಿ ಸಾಯಿ ವಿಜಯ್ ಪವನ್ ಕಲ್ಯಾಣ್ ವೃತ್ತಿಪರ ಫೋಟೋಗ್ರಾಫರ್ ಎನ್ನಲಾಗಿದೆ. ಈತನ ಬಳಿಯಿದ್ದ 15 ಲಕ್ಷ ಮೌಲ್ಯದ ಕ್ಯಾಮರಾಗಾಗಿ ಕೊಲೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಲೆದರ್ ಬೆಲ್ಟ್​ನಿಂದ ಕತ್ತು ಹಿಸುಕಿ ಕೊಲೆ ಮಾಡಿ, ಮುಲಸ್ಥನಮ್ ಬಳಿಯ ಗೋಧಾವರಿ ದಡದಲ್ಲಿ ಶವವನ್ನು ಹೂಳಿದ್ದರು.

ಶಣ್ಮುಖ ತೇಜ ಆನ್​ಲೈನ್ ಮೂಲಕ ಫೋಟ್ರೋಗ್ರಫಿಗೆ ಆಹ್ವಾನ ನೀಡಿದ್ದು, ರಾಜಮಹೇಂದ್ರವರಂ ರೈಲ್ವೇ ನಿಲ್ದಾಣದಲ್ಲಿ ಸಾಯಿ ವಿಜಯ್​​ನನ್ನು ಪಿಕ್ ಮಾಡಿದ್ದರು. ನಂತರ ತೇಜ್ ಅಂಡ್ ಗ್ಯಾಂಗ್ ಆತನ ಬಳಿಯಿದ್ದ ಕ್ಯಾಮೆರಗಾಗಿ ಕೊಲೆ ಮಾಡಿದ್ದರು. ಫೆಬ್ರವರಿ 26 ರಂದು ಕೊಲೆ ಮಾಡಿ ಶವವನ್ನು ಹೂತು ಹಾಕಿದ್ದರು ಎಂದು ತಿಳಿದುಬಂದಿದೆ.

Advertisement

ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement
Tags :
Advertisement