ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೊದಲ ಬಾರಿಗೆ ಕೇಂದ್ರ ಸಚಿವೆಯಿಂದ ರಾಷ್ಟ್ರಪತಿ ಸಂದರ್ಶನ

ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಂದರ್ಶನ ಮಾಡಿದ್ದಾರೆ. ರಾಷ್ಟ್ರಪತಿಯನ್ನು ಕೇಂದ್ರ ಸಚಿವೆಯೊಬ್ಬರು ಸಂದರ್ಶನ ಮಾಡಿದ್ದು ಇದೇ ಮೊದಲು. ರಾಷ್ಟ್ರಪತಿ ಮುರ್ಮು ಅವರು ಒಡಿಶಾದ ರಾಯ್​ರಂಗಪುರದಿಂದ ರಾಷ್ಟ್ರಪತಿ ಭವನಕ್ಕೆ ಬರುವಾಗಿನ ಅವರ ಹಾದಿ ಹೇಗಿತ್ತು, ಎಷ್ಟು ಕಷ್ಟಗಳು, ಸವಾಲುಗಳನ್ನು ಎದುರಿಸಿದ್ದಾರೆ ಎಂಬುದನ್ನು ಸ್ಮೃತಿ ಇರಾನಿಯವರ ಬಳಿ ಹಂಚಿಕೊಂಡಿದ್ದಾರೆ.
11:17 AM Feb 14, 2024 IST | Ashitha S

ದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಂದರ್ಶನ ಮಾಡಿದ್ದಾರೆ. ರಾಷ್ಟ್ರಪತಿಯನ್ನು ಕೇಂದ್ರ ಸಚಿವೆಯೊಬ್ಬರು ಸಂದರ್ಶನ ಮಾಡಿದ್ದು ಇದೇ ಮೊದಲು. ರಾಷ್ಟ್ರಪತಿ ಮುರ್ಮು ಅವರು ಒಡಿಶಾದ ರಾಯ್​ರಂಗಪುರದಿಂದ ರಾಷ್ಟ್ರಪತಿ ಭವನಕ್ಕೆ ಬರುವಾಗಿನ ಅವರ ಹಾದಿ ಹೇಗಿತ್ತು, ಎಷ್ಟು ಕಷ್ಟಗಳು, ಸವಾಲುಗಳನ್ನು ಎದುರಿಸಿದ್ದಾರೆ ಎಂಬುದನ್ನು ಸ್ಮೃತಿ ಇರಾನಿಯವರ ಬಳಿ ಹಂಚಿಕೊಂಡಿದ್ದಾರೆ.

Advertisement

ಇದು ಇಂದು ಬೆಳಗ್ಗೆ 8 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ಡಿಡಿ-1ರಲ್ಲಿ ಸಂಜೆ 4 ಗಂಟೆಗೆ ಪ್ರಸಾರವಾಗುತ್ತದೆ. ಪ್ರಪ್ರಥಮ ಬಾರಿಗೆ ನೀವು ರಾಷ್ಟ್ರಪತಿಯ ಜೀವನ ಪಯಣದ ಅಸಾಧಾರಣ ಮಜಲುಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ಸ್ಮೃತಿ ಇರಾನಿ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ದ್ರೌಪದಿ ಮುರ್ಮು ಅವರ ಜೀವನ ಮಹಿಳಾ ಶಕ್ತಿಯ ಪ್ರತೀಕ, ಸಣ್ಣ ಹಳ್ಳಿಯಿಂದ ಬಂದು ದೇಶದ ಅತ್ಯುನ್ನತ ಸ್ಥಾನಕ್ಕೆ ಏರಿದ ಅವರ ಅಸಾಧಾರಣ ಕಥೆ ಅನೇಕರಿಗೆ ಸ್ಫೂರ್ತಿ ನೀಡುತ್ತದೆ. ಸ್ಮೃತಿ ಇರಾನಿ ಯೂಟ್ಯೂಬ್ ಲಿಂಕ್​ನ್ನು ಕೂಡ ನೀಡಿದ್ದಾರೆ. ನೀವು ಅಲ್ಲಿ ಸಂದರ್ಶನ ವೀಕ್ಷಿಸಬಹುದಾಗಿದೆ. ‘ನಯೀ ಸೋಚ್, ನಯೀ ಕಹಾನಿ ಎ ರೇಡಿಯೋ ಜರ್ನಿ ವಿತ್ ಸ್ಮೃತಿ ಇರಾನಿ’ ಎಂಬ ಶೀರ್ಷಿಕೆಯಲ್ಲಿ ಪ್ರಸಾರಗೊಂಡಿದೆ.

Advertisement

Advertisement
Tags :
Draupadi MurmuindiaLatestNewsNewsKannadaSmriti Iraniನವದೆಹಲಿರಾಷ್ಟ್ರಪತಿ
Advertisement
Next Article