ಮೊದಲ ಬಾರಿಗೆ ಮೆಟ್ರೊದಲ್ಲಿ ಪ್ರಯಾಣಿಸಿದ ರಾಷ್ಟ್ರಪತಿ ಮುರ್ಮು
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಫೆ.07) ದೆಹಲಿ ಮೆಟ್ರೊದಲ್ಲಿ ಪ್ರಯಾಣಿಸಿದ್ದಾರೆ. ಮುರ್ಮು ಅವರು ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮುರ್ಮು ಅವರು ಹಳದಿ ಸೀರೆಯುಟ್ಟು ಪ್ರಯಾಣ ಬೆಳಸಿದರು. ಈ ವೇಳೆ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದರು. ದೆಹಲಿ ಮೆಟ್ರೊದ ನೇರಳೆ ಮಾರ್ಗದಲ್ಲಿ ಮುರ್ಮು ಪ್ರಯಾಣಿಸಿದ್ದಾರೆ. ಕಾಶ್ಮೀರ್ ಗೇಟ್- ರಾಜಾ ನಹರ್ ಸಿಂಗ್ (ಬಲ್ಲಭಗಢ) ನಡುವೆ ಈ ನೇರಳೆ ಮಾರ್ಗ ಚಲಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
President Droupadi Murmu travelled in Delhi Metro and interacted with school children during the ride.
President Murmu also flagged off shuttle bus service between Central Secretariat Metro Station (Gate 4) and Amrit Udyan (Gate 35) for visitors coming to Amrit Udyan at every… pic.twitter.com/ECCk8HtI2K
— President of India (@rashtrapatibhvn) February 7, 2024