For the best experience, open
https://m.newskannada.com
on your mobile browser.
Advertisement

ಮುರುಘಾ ಮಠದ ಶರಣರಿಗೆ ಮತ್ತೆ ಕಾನೂನು ಸಂಕಷ್ಟ: ಅರೆಸ್ಟ್‌ ವಾರಂಟ್ ಜಾರಿ

ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ.
12:31 PM Nov 20, 2023 IST | Ramya Bolantoor
ಮುರುಘಾ ಮಠದ ಶರಣರಿಗೆ ಮತ್ತೆ ಕಾನೂನು ಸಂಕಷ್ಟ  ಅರೆಸ್ಟ್‌ ವಾರಂಟ್ ಜಾರಿ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. 2ನೇ ಪೋಕ್ಸೋ ಕೇಸ್‌ನಲ್ಲಿ ಮುರುಘಾ ಶ್ರೀ ವಿರುದ್ಧ ಚಿತ್ರದುರ್ಗ ಜಿಲ್ಲಾ ನ್ಯಾಯಾಯದಿಂದ ಅರೆಸ್ಟ್‌ ವಾರಂಟ್ ಜಾರಿ ಮಾಡಿದೆ.

Advertisement

ಕಳೆದ 4 ದಿನದ ಹಿಂದಷ್ಟೇ ಶಿವಮೂರ್ತಿ ಶರಣರು ಜೈಲಿನಿಂದ ಬಿಡುಗಡೆ ಆಗಿದ್ದರು. 14 ತಿಂಗಳ ಬಳಿಕ ಜೈಲಿನಿಂದ ಹೊರ ಬಂದ ಮುರುಘಾ ಸ್ವಾಮೀಜಿ ಸದ್ಯ ದಾವಣಗೆರೆ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸದ್ಯ ಒಂದು ಕೇಸ್​​​ನಲ್ಲಿ ಜಾಮೀನು ಪಡೆದಿರೋ ಸ್ವಾಮೀಜಿಯನ್ನ ಮತ್ತೊಂದು ಪ್ರಕರಣದಲ್ಲಿ ಬಂಧಿಸುವಂತೆ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಅಲ್ಲದೆ ಇಂದೇ ಸಂಜೆಯೊಳಗೆ ವಿಚಾರಣೆಗೆ ಹಾಜರುಪಡಿಸಲು ಪೊಲೀಸ್ ಅಧಿಕಾರಿಗಳಿಗೆ ಕೋರ್ಟ್‌ ಸೂಚನೆ ನೀಡಿದೆ ಎಂದು ವರದಿಯಾಗಿದೆ.

Advertisement
Advertisement
Tags :
Advertisement