For the best experience, open
https://m.newskannada.com
on your mobile browser.
Advertisement

ರೈತನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ವ್ಯಾಪಾರಿಗಳು: ಪ್ರಕರಣ ತಿಳಿಗೊಳಿಸಿದ ಪೊಲೀಸರು

ಕ್ಷುಲ್ಲಕ ಕಾರಣಕ್ಕೆ ರೈತನ ಮೇಲೆ ಮುಸ್ಲಿಂ ವ್ಯಾಪಾರಿಗಳು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸರು ಕಾನೂನು ಅರಿವು ಮೂಡಿಸಿ ಪ್ರಕರಣ ತಿಳಿಗೊಳಿಸಿದರು.
05:57 PM Feb 04, 2024 IST | Gayathri SG
ರೈತನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ವ್ಯಾಪಾರಿಗಳು  ಪ್ರಕರಣ ತಿಳಿಗೊಳಿಸಿದ ಪೊಲೀಸರು

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ರೈತನ ಮೇಲೆ ಮುಸ್ಲಿಂ ವ್ಯಾಪಾರಿಗಳು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಪೊಲೀಸರು ಕಾನೂನು ಅರಿವು ಮೂಡಿಸಿ ಪ್ರಕರಣ ತಿಳಿಗೊಳಿಸಿದರು.

Advertisement

ನಗರದ ಮುರುಘಾಮಠದ ಎಪಿಎಂಸಿ ಬಳಿ ಎರಡು ಯುವಕರ ಗುಂಪಿನ ನಡುವೆ ಕ್ಷುಲ್ಲಕ ಕಾರಣಕ್ಕೆ ದ್ವೇಷ ಉಂಟಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಈ ಕುರಿತು ಧಾರವಾಡ ಉಪನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಧಾರವಾಡ ಉಪನಗರ ಠಾಣೆ ಇನ್ಸೆಕ್ಟರ್ ದಯಾನಂದ ಹಾಗೂ ತಂಡ ಎಪಿಎಂಸಿಗೆ ಭೇಟಿ ನೀಡಿ ಕಾನೂನು ಅರಿವು ನೀಡಿ ಪ್ರಕರಣ ಬೆಳೆಯದಂತೆ ತಿಳಿಗೊಳಿಸಿದರು.

ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಮುಖಂಡರ ಜೊತೆ ಕೂಡಾ ಸಮಾಲೋಚನೆ ನಡೆಸಿದ ಉಪನಗರ ಪೊಲೀಸ್ ಇನ್ಸೆಕ್ಟರ್ ದಯಾನಂದ, ಮುಂದೆ ಕೂಡಾ ಯಾವುದೇ ರೀತಿಯಲ್ಲಿ ಗಲಾಟೆ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡರೆ ತಮಗೆ ಕಷ್ಟ ಆಗಲಿದೆ, ಕೋರ್ಟ್‌ಗೆ ಅಲೆದಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಕಾನೂನು ಅರಿವು ಮೂಡಿಸಿ ಪ್ರಕರಣ ತಿಳಿಗೊಳಿಸಿದ ಧಾರವಾಡ ಉಪನಗರ ಪೊಲೀಸರ ಕ್ರಮ ಶ್ಲಾಘನೀಯವಾಗಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement
Tags :
Advertisement