For the best experience, open
https://m.newskannada.com
on your mobile browser.
Advertisement

"ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಂರಿಗೆ ಇದೆ"

ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಂರಿಗೆ ಇದೆ ಎನ್ನುವ ಭರವಸೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ. ಪ್ರಧಾನಿ ಮೋದಿ ಅವರು ಈ ಬಗ್ಗೆ ಮತಾನಾಡಿದ್ದು, ರಾಷ್ಟ್ರ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.
03:29 PM Apr 22, 2024 IST | Ashitha S
 ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಂರಿಗೆ ಇದೆ

ನವದೆಹಲಿ: ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಂರಿಗೆ ಇದೆ ಎನ್ನುವ ಭರವಸೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ. ಪ್ರಧಾನಿ ಮೋದಿ ಅವರು ಈ ಬಗ್ಗೆ ಮತಾನಾಡಿದ್ದು, ರಾಷ್ಟ್ರ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.

Advertisement

ರಾಜಸ್ಥಾನದ ಬನಸವಾರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ʼದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಂರಿಗೆ ಇದೆʼ ಎಂದು ಕಾಂಗ್ರೆಸ್ ಹೇಳಿತ್ತು. ಈ ಸಂಪತ್ತು ಒಗ್ಗೂಡಿಸಿ ಯಾರಿಗೆ ನೀಡ್ತಾರೆ? ಹೆಚ್ಚು ಮಕ್ಕಳಿರುವವರಿಗೆ ನೀಡ್ತಾರೆ. ನಿಮ್ಮ ಸಂಪತ್ತು ಅನ್ನು ದೇಶಕ್ಕೆ ಒಳ ನುಸುಳುಕೋರರಿಗೆ ನೀಡಬೇಕೇ? ಎಂದು ಪ್ರಧಾನಿ ಮೋದಿ ಅವರು ಜನರನ್ನು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಈ ಹೇಳಿಕೆ ದೇಶದಲ್ಲಿ ಹೊಸ ವಿವಾದ ಸೃಷ್ಟಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಮೋದಿ ಅವರು ಮಾಡಿರೋ ಭಾಷಣದ ವಿಡಿಯೋ ವೈರಲ್‌ ಆಗಿದೆ. ಇದಕ್ಕೆ ಬಿಜೆಪಿ ನಾಯಕರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮಾತನಾಡಿರುವ 10 ವರ್ಷ ಹಿಂದಿನ ಭಾಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಸಂಪತ್ತಿನ ಸವಾಲಿಗೆ ಕಾಂಗ್ರೆಸ್ ನಾಯಕರು ಕೂಡ ತಿರುಗೇಟು ನೀಡುತ್ತಿದ್ದಾರೆ.

Advertisement

Advertisement
Tags :
Advertisement