ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ತುಳುವನಾಡಿನ ಪುಣ್ಯ ಭೂಮಿಯ ಧರ್ಮ ರಕ್ಷಣೆ ಮತ್ತು ಅಭಿವೃದ್ಧಿ ನನ್ನ ಗುರಿ: ಬ್ರಿಜೇಶ್ ಚೌಟ 

ತುಳುವನಾಡಿನ ಪುಣ್ಯ ಭೂಮಿಯ ಧರ್ಮ ರಕ್ಷಣೆ ಮತ್ತು ಅಭಿವೃದ್ಧಿ ನನ್ನ ಮುಂದಿನ ಗುರಿ  ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. 
07:50 PM Mar 15, 2024 IST | Ashika S

ಬಂಟ್ವಾಳ : ತುಳುವನಾಡಿನ ಪುಣ್ಯ ಭೂಮಿಯ ಧರ್ಮ ರಕ್ಷಣೆ ಮತ್ತು ಅಭಿವೃದ್ಧಿ ನನ್ನ ಮುಂದಿನ ಗುರಿ  ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.

Advertisement

ಬಿಸಿರೋಡಿನಲ್ಲಿರುವ ಬಂಟ್ವಾಳ ಕ್ಷೇತ್ರ ಬಿಜೆಪಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ, ಶಾಸಕರು ಹಾಗೂ ಪಕ್ಷದ ಪ್ರಮುಖರ ಜೊತೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು . ಕಳೆದ ಹತ್ತು ವರ್ಷ ಗಳಲ್ಲಿ ಬಿಜೆಪಿಯ ಬೇರೆ ಬೇರೆ ಸಂಘಟನಾತ್ಮಕಜವಾಬ್ದಾರಿಗಳನ್ನು ನಿರ್ವಹಿಸಿರುವ ನಾನು ಪಕ್ಷದ ಹಿರಿಯರ ಮತ್ತು ಯುವಕಾರ್ಯಕರ್ತರ ತ್ಯಾಗ ಪರಿಶ್ರಮಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಈ ದೇಶ 2047ರಲ್ಲಿ ವಿಕಷಿತ ವಿಶ್ವಗುರು ಭಾರತವಾಗಿ ಪರಿವರ್ತಿಸಲು ಸಂಕಲ್ಪ ತೊಟ್ಟಿರುವ ನಮ್ಮ ಹೆಮ್ಮೆಯ ನರೇಂದ್ರ ಮೋದಿಯವರಿಗೆ ಬಲ ನೀಡಲು ನಾನು ಕಟಿಬದ್ಧನಾಗಿದ್ದೇನೆ.

ಕಾರ್ಯಕರ್ತರ ಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸುವವನಾಗಿ ನಿಮ್ಮ ಜೊತೆಯಲ್ಲಿರುತ್ತೇನೆ. ಬಂಟ್ವಾಳ ಕ್ಷೇತ್ರದಸವಾಲು ಗಳೇನು, ಕಾರ್ಯಕರ್ತರ ಭಾವನೆಗಳೇನು ಎಂಬುವುದರ ಅರಿವು ನನಗಿದೆ. ಈ ಚುನಾವಣಾ ಮಹಾ ಸಮರದಲ್ಲಿ
ನಾವೆಲ್ಲಾ ಒಂದಾಗಿ ಶ್ರಮಿಸಿ ಜಯಗಳಿಸೋಣ ಎ೦ದರು.

Advertisement

ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು . ಬಂಟ್ವಾಳದ ಜನಪ್ರಿಯ ಶಾಸಕರಾದ ರಾಜೇ ಶ್ ನಾಯ್ಕ್ ಉಳಿಪಾಡಿಯವರು ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ನಮಗೆ ಗೆಲುವು ನಿಶ್ಚಿತವಾಗಿದ್ದರೂ , ಮೈಮರೆವುಸಲ್ಲದು . ಗೆಲುವಿಗಾಗಿ ಕಾರ್ಯಕರ್ತರ ಪರಿಶ್ರಮ  ದ್ವಿಗುಣಗೊಳ್ಳಬೇಕು . ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಪ್ರವಾಸ ಮಾಡಿ, ಜನಜಾಗೃತಿಗೊಳಿಸುವ ಮೂಲಕ ನರೇಂದ್ರ ಮೋದಿಯವರನ್ನು 3 ನೇ ಭಾರಿ ಪ್ರಧಾನಿ ಮಾಡುವುದಕ್ಕಾಗಿ ಬ್ರಿಜೇಶ್ ಚೌಟರನ್ನು ಸಂಸದರಾಗಿ ಗೆಲ್ಲಿಸೋಣ" ಎ೦ದರು.

ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ ಯುವ ಅಭ್ಯರ್ಥಿ ಬ್ರಿಜೇಶ್ ಚೌಟರನ್ನು ಬಿಜೆಪಿ ರಾಷ್ಟ್ರೀಯ ವರಿಷ್ಠರು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಕಳೆದ ಭಾರಿ ಬಂಟ್ವಾಳದಲ್ಲಿ ನಳಿನ್ ಕುಮಾರ್ ಕಟೀಲ್ ರವರಿಗೆ 31000 ಮತಗಳ ಮುನ್ನಡೆ ನೀಡಲಾ ಗಿದ್ದು , ಈ ಸಲ 50000 ಮತಗಳ ಮುನ್ನಡೆಯೊಂದಿಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರಾದ ನಾವೆಲ್ಲ ಶ್ರಮಿಸೋಣ ಎಂದರು.

ಕಾ ರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಬಂಟ್ವಾಳ ಮಂಡಲ ಪ್ರಭಾರಿ  ಪೂಜಾಪೈ , ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯತೀಶ್ ಆರ್ವರ್, ಹರಿಕೃಷ್ಣ ಬಂಟ್ವಾಳ ರಾಜ್ಯ ನಾಯಕರಾದ ವಿಕಾ ಸ್ ಪುತ್ತೂರು, ಜಿಲ್ಲಾ ಪ್ರಭಾರಿಸಂದೇ ಶ್ ಶೆಟ್ಟಿ , ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಡೊಂಬಯ ಅರಳ, ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement
Tags :
LatetsNewsNewsKarnatakaಬ್ರಿಜೇಶ್ ಚೌಟ
Advertisement
Next Article