For the best experience, open
https://m.newskannada.com
on your mobile browser.
Advertisement

ʻನನ್ನ ಮೊದಲ ಮತ ದೇಶಕ್ಕಾಗಿʼ: ಅಭಿಯಾನ ಆರಂಭಿಸಿದ ಚುನಾವಣಾ ಆಯೋಗ

ಇನ್ನೇನು ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ಹಾಗಾಗಿ ಭಾರತೀಯ ಚುನಾವಣಾ ಆಯೋಗವು ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ ಅಭಿಯಾನವನ್ನು ಪ್ರಾರಂಭಿಸಿದೆ, ಇದು ಚುನಾವಣೆಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿರುವ ಯುವಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
10:06 PM Mar 06, 2024 IST | Nisarga K
ʻನನ್ನ ಮೊದಲ ಮತ ದೇಶಕ್ಕಾಗಿʼ  ಅಭಿಯಾನ ಆರಂಭಿಸಿದ ಚುನಾವಣಾ ಆಯೋಗ
ʻನನ್ನ ಮೊದಲ ಮತ ದೇಶಕ್ಕಾಗಿʼ: ಅಭಿಯಾನ ಆರಂಭಿಸಿದ ಚುನಾವಣಾ ಆಯೋಗ

ದೆಹಲಿ: ಇನ್ನೇನು ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ಹಾಗಾಗಿ ಭಾರತೀಯ ಚುನಾವಣಾ ಆಯೋಗವು ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ ಅಭಿಯಾನವನ್ನು ಪ್ರಾರಂಭಿಸಿದೆ, ಇದು ಚುನಾವಣೆಗಳಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿರುವ ಯುವಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

Advertisement

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ‘ಮೇರಾ ಪೆಹ್ಲಾ ವೋಟ್ ದೇಶ್ ಕೆ ಲಿಯೇ’ ಗೀತೆಯನ್ನು ಬಿಡುಗಡೆ ಮಾಡುವುದರೊಂದಿಗೆ ಅಭಿಯಾನದಲ್ಲಿ ಭಾಗವಹಿಸಲು ಮತ್ತು ಯುವ ಮತದಾರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

' ಮನ್ ಕಿ ಬಾತ್ ’ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಕೋರಿದ್ದರು.

Advertisement

ಹಲವಾರು ರಾಜ್ಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಈಗಾಗಲೇ ಯುವ ಮತದಾರರನ್ನು ಅಭಿಯಾನದಲ್ಲಿ ತೊಡಗಿಸಿಕೊಂಡಿವೆ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮತವನ್ನು ಚಲಾಯಿಸಲು ಜಾಗೃತಿ ಮೂಡಿಸುತ್ತಿದೆ.

Advertisement
Tags :
Advertisement