ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಚಿವ ಭೈರತಿ ಸುರೇಶ್ ಅಪಸ್ವರಕ್ಕೆ ವೇದಿಕೆಯಲ್ಲೇ ನಳಿನ್ ಕಟೀಲ್ ತಿರುಗೇಟು

ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಮಂಗಳೂರಿನಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ನಿರ್ಮಾಣವಾದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಇಂದು ಲೋಕಾರ್ಪಣೆಗೊಂಡಿತು.
04:47 PM Nov 24, 2023 IST | Ashika S

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಮಂಗಳೂರಿನಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿದೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ನಿರ್ಮಾಣವಾದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ಇಂದು ಲೋಕಾರ್ಪಣೆಗೊಂಡಿತು.

Advertisement

ಈಜುಕೊಳ ಉದ್ಘಾಟಿಸಿ  ಮಾತನಾಡಿದ  ಸಂಸದ ನಳಿನ್ ಕುಮಾರ್ ಕಟೀಲ್ ಸ್ಮಾರ್ಟ್ ಸಿಟಿ ಪ್ರಥಮ ಹಂತದಲ್ಲಿ ಮಂಗಳೂರು ಇರಲಿಲ್ಲ, ರಾಜ್ಯದ ಏಳು ನಗರಗಳು ಇದ್ದರೂ ಮಂಗಳೂರು ಇರಲಿಲ್ಲ. ಆದರೆ ಈಗ  ಮಾರುಕಟ್ಟೆ ಸೇರಿ ಹಲವು ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೀತಾ ಇದೆ. ಅಭಿವೃದ್ಧಿ ಕಾರ್ಯದಲ್ಲಿ ನಮ್ಮಲ್ಲಿ ಯಾವುದೇ ರಾಜಕೀಯ ಇಲ್ಲ. ಮಾರ್ಕೆಟ್, ಪಾರ್ಕಿಂಗ್ ಜಾಗ ಸೇರಿ ಹಲವು ಕೆಲಸ ಆಗ್ತಿದೆ ಎಂದರು.

ಸಚಿವ ಭೈರತಿ ಸುರೇಶ್ ಗೆ ತಿರುಗೇಟು ನೀಡಿದ ಕಟೀಲ್ 

Advertisement

ನಳಿನ್ ಕುಮಾರ್ ಕಟೀಲ್  ವೇದಿಕೆಯಲಿ ಕುಳಿತಿದ್ದ ಸಚಿವ ಭೈರತಿ ಸುರೇಶ್ ಮಾತನಾಡಿ ಇಲ್ಲಿ ಆದಾಯ ತರೋ ಯೋಜನೆಗಳಿಲ್ಲ ಎಂದು ಹೇಳಿದ್ದರು. ಅದಕ್ಕೆ ತಿರುಗೇಟು ನೀಡಿದ  ಕಟೀಲ್ " ಸ್ಮಾರ್ಟ್ ಸಿಟಿಗೆ ಮಂಗಳೂರು ಆಯ್ಕೆಯಾದಗ ನಿಮ್ಮದೇ ಕಾಂಗ್ರೆಸ್ ನ ಶಾಸಕ ಜೆ.ಆರ್.ಲೋಬೋ ಇದ್ದರು. ಆಯ್ಕೆಯಾದ ಬಳಿಕ ಲೋಬೋ ಜೊತೆ ಚರ್ಚೆಯಾಗಿತ್ತು. ಆದರೆ ಆಗ ಹಾಕಿದ ಯೋಜನೆಗಳಲ್ಲಿ ಇದೆಲ್ಲ ಇರಲಿಲ್ಲ,  ವೇದವ್ಯಾಸ ಕಾಮತ್ ಬಂದ ಮೇಲೆ ವೇಗವಾಗಿ ಅಭಿವೃದ್ಧಿ ಆಗಿದೆ. ನೀವು ಹೇಳಿದ ಆದಾಯ ತರೋ ಯೋಜನೆಗಳೂ ಇಲ್ಲಿ ಆಗ್ತಿದೆ ಎಂದು ತಿರುಗೇಟು ನೀಡಿದರು.

ವಾಟರ್ ಫ್ರಂಟ್ ಕಾಮಗಾರಿಗೆ ಕೆಲ ಖಾಸಗಿ ವ್ಯಕ್ತಿಗಳ ತಡೆ ಇದೆ, ಅದನ್ನು ಮಾನ್ಯ ಸಚಿವರು ಸಭೆ ನಡೆಸಿ ಸರಿ ಪಡಿಸಬೇಕು. ನಂತೂರು ಫ್ಲೈ ಓವರ್ ಕಾಮಗಾರಿ ಆರು ತಿಂಗಳಿನಿಂದ ಬಾಕಿ ಇದೆ,ಇಲ್ಲಿ ಮರ ಕಡಿದರೆ ಪ್ರತಿಭಟನೆ ಆಗುತ್ತೆ, ಭೂ ಸ್ವಾಧೀನ ಸಮಸ್ಯೆ ಇದೆ,  28 ಕಿ.ಮೀ ಹೆದ್ದಾರಿ ಅಭಿವೃದ್ಧಿಗೆ 40 ಕಡೆ ಕೇಸ್ ಹಾಕಿದ್ದಾರೆ ಇದರಿಂದ ಹಲವು ಕಡೆ ರಾಷ್ಟ್ರೀಯ ಹೆದ್ದಾರಿ ಕೆಲಸ ನಿಂತಿದೆ ಮರ ಕಡಿಯೋದು, ಭೂಸ್ವಾಧೀನ ವಿಚಾರದಲ್ಲಿ ಸಮಸ್ಯೆ ಇದೆ. ಇವುಗಳ ಬಗ್ಗೆ ಒಮ್ಮೆ  ಭೈರತಿ ಸುರೇಶ್ ರವರು ಸಭೆ ನಡೆಸಬೇಕು ಎಂದರು.

Advertisement
Tags :
LatetsNewsNewsKannadaಅಂತಾರಾಷ್ಟ್ರೀಯಈಜುಕೊಳಯೋಜನೆಸ್ಮಾರ್ಟ್ ಸಿಟಿ
Advertisement
Next Article