For the best experience, open
https://m.newskannada.com
on your mobile browser.
Advertisement

ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ತಡೆ; ಸರ್ಕಾರವನ್ನು ಪ್ರಶ್ನಿಸಿದ ನಳಿನ್‌ ಕುಮಾರ ಕಟೀಲ್‌

ಇಂಡಿಯಾ ಮೈತ್ರಿಕೂಟದ ಡಿಎಂಕೆ ಪಕ್ಷ ತನ್ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮೇಕೆದಾಟು ಡ್ಯಾಂಗೆ ತಡೆ ಒಡ್ಡುವ ಭರವಸೆ ನೀಡಿದ್ದು, ಇದರ ಬಗ್ಗೆ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಪ್ರಶ್ನಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
06:50 PM Mar 21, 2024 IST | Maithri S
ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ತಡೆ  ಸರ್ಕಾರವನ್ನು ಪ್ರಶ್ನಿಸಿದ ನಳಿನ್‌ ಕುಮಾರ ಕಟೀಲ್‌

ಬೆಂಳೂರು: ಇಂಡಿಯಾ ಮೈತ್ರಿಕೂಟದ ಡಿಎಂಕೆ ಪಕ್ಷ ತನ್ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಮೇಕೆದಾಟು ಡ್ಯಾಂಗೆ ತಡೆ ಒಡ್ಡುವ ಭರವಸೆ ನೀಡಿದ್ದು, ಇದರ ಬಗ್ಗೆ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಪ್ರಶ್ನಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

ʼಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾವೇರಿಯನ್ನು ಚುನಾವಣಾ ಸರಕು ಮಾಡಿಕೊಂಡ ಕಾಂಗ್ರೆಸ್ ಪಕ್ಷ ಮೇಕೆದಾಟಿನ ಹೆಸರಲ್ಲಿ ರಾಜ್ಯದ ಜನರ ಭಾವನೆಯೊಂದಿಗೆ ಆಟವಾಡಿತ್ತುʼ ಎಂದು ಆರೋಪಿಸಿರುವ ಅವರು, ʼಈಗ ಇಂಡಿ ಮೈತ್ರಿಕೂಟದ ತಮಿಳುನಾಡಿನ ಡಿಎಂಕೆ ಪಕ್ಷ ನಾವು ಅಧಿಕಾರಕ್ಕೆ ಬಂದರೆ ಮೇಕೆದಾಟು ಅಣೆಕಟ್ಟೆಗೆ ಅವಕಾಶ ನೀಡುವುದಿಲ್ಲ ಎಂದು ತನ್ನ ಪ್ರಣಾಳಿಕೆಯಲ್ಲೇ ಸಾರಿದೆʼ ಎಂದಿದ್ದಾರೆ.

ರಾಜಕೀಯ ಲಾಭಕ್ಕಾಗಿ ಜನರ ಮಾತಿಗೆ ಬೆಲೆ ಕೊಡದ ಕಾಂಗ್ರೆಸ್‌ ತಮಿಳುನಾಡಿಗೆ ಕಾವೇರಿ ಹರಿಸಿ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಸಿದೆ ಎಂದ ಕಟೀಲ್‌, ಮೇಕೆದಾಟುವಿಗಾಗಿ ಮತ್ತೊಮ್ಮೆ ನಿಮ್ಮ ಪಾದಯಾತ್ರೆ ಯಾವಾಗ? ಎಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಪ್ರಶ್ನಿಸಿದ್ದಾರೆ.

Advertisement

Advertisement
Tags :
Advertisement