ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ಬದ್ದ : ಸಂಸದ ನಳಿನ್‌ ಕುಮಾರ್‌

ಸಂಸದ ನಳಿನ್ ಕುಮಾರ್ ಕಟೀಲ್ ಗೆ ಬಿಜೆಪಿ ಟಿಕೆಟ್ ಕೈ ತಪ್ಪೋ ಸಾಧ್ಯತೆ ವಿಚಾರವಾಗಿ ಮಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸೋದು ನಮ್ಮ ಪಾರ್ಟಿಯ ವಿಶೇಷತೆ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರು ಯೋಚನೆ ಮಾಡಿಕೊಂಡು ಆಯ್ಕೆ ಮಾಡ್ತಾರೆ.
11:49 AM Mar 12, 2024 IST | Nisarga K
ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ಬದ್ದ : ಸಂಸದ ನಳಿನ್‌ ಕುಮಾರ್‌

 ಮಂಗಳೂರು: ಸಂಸದ ನಳಿನ್ ಕುಮಾರ್ ಕಟೀಲ್ ಗೆ ಬಿಜೆಪಿ ಟಿಕೆಟ್ ಕೈ ತಪ್ಪೋ ಸಾಧ್ಯತೆ ವಿಚಾರವಾಗಿ ಮಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸೋದು ನಮ್ಮ ಪಾರ್ಟಿಯ ವಿಶೇಷತೆ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರು ಯೋಚನೆ ಮಾಡಿಕೊಂಡು ಆಯ್ಕೆ ಮಾಡ್ತಾರೆ.

Advertisement

ಪಕ್ಷ ನಿಂತ ನೀರಾಗಬಾರದು, ಹೊಸಬರು ಬರ್ತಾ ಇರಬೇಕು, ಸ್ವಾಗತಿಸ್ತೇನೆ, ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ.ಯಾರೇ ಆದರೂ ಮೋದಿ ಪ್ರಧಾನಿಯಾಗಬೇಕು, ಬಿಜೆಪಿ ಮತ್ತೆ ಗೆಲ್ಲಬೇಕು ಎಂದರು

ರಾಷ್ಟ್ರೀಯ ನಾಯಕರ ಯೋಚನೆಗೆ ನಾವು ಬದ್ದರಾಗಿ ಕೆಲಸ ಮಾಡ್ತೇವೆ. ಪಾರ್ಟಿ ಏನು ಹೇಳುತ್ತೋ ಅದನ್ನ ನಾವು ಮಾಡ್ತೇವೆ,ಗುಡಿಸಿ ಅಂದ್ರೆ ಗುಡಿಸ್ತೇವೆ, ಒರೆಸಿ ಅಂದ್ರೆ ಒರೆಸ್ತೇವೆಅಧಿಕಾರ ಪ್ರಮುಖ ಅಲ್ಲ, ರಾಷ್ಟ್ರೀಯ ನಾಯಕರ ಚಿಂತನೆ ಮುಖ್ಯ ಎಂದು ಮನದ ಮಾತನ್ನು ಮುಂದಿಟ್ಟರು. ನಾನು ಸಾಮಾಜಿಕ ತಾಣಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಪಕ್ಷದ ನಿರ್ಧಾರಕ್ಕೆ ಬದ್ದರಾಗಿರುತ್ತೇವೆ. ನಾವು ಅದನ್ನೇ ನಂಬಿ ಇದ್ದವರಲ್ಲ, ಸಂಘಟನೆ ಕಾರ್ಯವನ್ನು ನಂಬಿದವರು. ಕಾರ್ಯಕರ್ತರ ಆಧಾರದಲ್ಲಿ ಇದೆಲ್ಲಾ ಕಾರ್ಯಗಳು ಆಗುತ್ತೆ ರಾಷ್ಟ್ರೀಯ ನಾಯಕರ ಯಾವ ತೀರ್ಮಾನಕ್ಕೂ ನಾವು ಬದ್ದ ಎಂದರು.

Advertisement

ನನಗೆ ಮೂರು ಬಾರಿ ಅವಕಾಶ ಕೊಡಲಾಗಿದೆ, 15 ವರ್ಷ ಕೆಲಸ ಮಾಡಿದ್ದೇನೆ. ಎಲ್ಲೂ ವ್ಯತ್ಯಾಸಗಳಿಲ್ಲ, ನಮ್ಮ ಪಕ್ಷದಲ್ಲಿ ತುಳಿಯೋ ಕೆಲಸ ನಡೆಯಲ್ಲ, ಬೆಳೆಸೋ ಕೆಲಸ ಮಾಡ್ತಾರೆ ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಸಂಘದ ವಿಚಾರ ಇಟ್ಟುಕೊಂಡಿದ್ದೆ ಬಿಜೆಪಿ ಕೆಲಸ ಮಾಡು ಅಂತ ಹೇಳಿದ್ರು, ಲೋಕಸಭೆಗೆ ನಿಂತೆ ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೂಡ ಕೊಟ್ಟರು.

ಅವಕಾಶ ಸಿಕ್ಕಾಗ ನ್ಯಾಯ ಸಿಕ್ಕಿದೆ, ಸಿಗದೇ ಇದ್ದಾಗ ಅನ್ಯಾಯ ಆಗಿದೆ ಅನ್ನೋ ಹಕ್ಕು ನನಗಿಲ್ಲ ಪಕ್ಷ ಎಲ್ಲರನ್ನೂ ಬೆಳೆಸಿದೆ, ಪಕ್ಷದ ಕೆಲಸಕ್ಕೆ ಜನ ಬೇಕಿದೆ ಅಸಮಾಧಾನ ಯಾಕೆ? ನಾವು ಮಾಡೋದು ಸಂಘಟನೆ ಕಾರ್ಯ ಅಸಮಾಧಾನ ಯಾವುದೇ ಸಂಧರ್ಭದಲ್ಲಿ ಇರಲ್ಲ, ಅದು ಅಸಾಧ್ಯ ಎಂದು ಪ್ರತಿಕ್ರಿಯೆ ನೀಡಿದರು.

Advertisement
Tags :
BJPBJP partyLatestNewsmangaluruMLANALIN KUMAR KATEELNational leadersNewsKannadaPOLITICS
Advertisement
Next Article