ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ನಮೀಬಿಯಾ

2024 ರ ಜೂನ್ ತಿಂಗಳಿನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್​ಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲ್ಲಿರುವ ಈ ಟೂರ್ನಿ ತುಂಬಾ ವಿಶೇಷವಾಗಲಿದೆ.
01:26 PM Nov 29, 2023 IST | Ashitha S

ದೆಹಲಿ: 2024 ರ ಜೂನ್ ತಿಂಗಳಿನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್​ಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲ್ಲಿರುವ ಈ ಟೂರ್ನಿ ತುಂಬಾ ವಿಶೇಷವಾಗಲಿದೆ.

Advertisement

ಏಕೆಂದರೆ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಆಡಲಿವೆ. ಇದುವರೆಗೆ 19 ತಂಡಗಳು ಈ ಟೂರ್ನಿಗೆ ಅರ್ಹತೆ ಪಡೆದಿದ್ದು, ಈ ಪಟ್ಟಿಗೆ ನಮೀಬಿಯಾ ತಂಡ ಹೊಸದಾಗಿ ಸೇರ್ಪಡೆಗೊಂಡಿದೆ.

2024ರ ಟಿ20 ವಿಶ್ವಕಪ್‌ಗಾಗಿ ಆಫ್ರಿಕಾ ವಲಯದ ಅರ್ಹತಾ ಪಂದ್ಯಗಳನ್ನು 7 ತಂಡಗಳ ನಡುವೆ ಆಡಲಾಗುತ್ತಿದೆ. ಇದರಲ್ಲಿ ನಮೀಬಿಯಾ ತಂಡ ಆಡಿರುವ 5 ಪಂದ್ಯಗಳಲ್ಲಿ 5ರಲ್ಲಿ ಜಯಗಳಿಸುವ ಮೂಲಕ 2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ನಮೀಬಿಯಾ, ಆಫ್ರಿಕಾ ಟಿ20 ವಿಶ್ವಕಪ್ ಕ್ವಾಲಿಫೈಯರ್‌ನಿಂದ ಟಿ20 ವಿಶ್ವಕಪ್ 2024 ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ.

Advertisement

ಇದೀಗ ಟಿ20ವಿಶ್ವಕಪ್​ಗೆ ಅರ್ಹತೆ ಪಡೆಯಲು ಕೇವಲ 1 ಸ್ಥಾನ ಮಾತ್ರ ಉಳಿದಿದ್ದು, ಜಿಂಬಾಬ್ವೆ, ಉಗಾಂಡಾ ಮತ್ತು ಕೀನ್ಯಾ ನಡುವೆ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ.

 

Advertisement
Tags :
cricketcricket-newsICC Men’s T2indiaLatestNewsNamibiaNewsKannadaSportsNewsWorld Cup 2024ಟಿ20 ವಿಶ್ವಕಪ್ನಮೀಬಿಯಾ
Advertisement
Next Article