For the best experience, open
https://m.newskannada.com
on your mobile browser.
Advertisement

ಮಾರುಕಟ್ಟೆಗೆ ಲಗ್ಗೆಯಿಟ್ಟ ನಂದಿನಿ ರಾಗಿ ಅಂಬಲಿ

ಕರ್ನಾಟಕ ಹಾಲು ಮಹಾ ಒಕ್ಕೂಟ (ಕೆಎಂಎಫ್) ಇದೀಗ ಮಧುಮೇಹಿಗಳು ಸೇರಿದಂತೆ ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಅತಿಹೆಚ್ಚು ನಾರಿನಾಂಶದಿಂದ ಕೂಡಿರುವ ಕ್ಯಾಲ್ಸಿಯಂಯುಕ್ತ ʼರಾಗಿ ಅಂಬಲಿ’ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.
01:54 PM Apr 22, 2024 IST | Ashitha S
ಮಾರುಕಟ್ಟೆಗೆ ಲಗ್ಗೆಯಿಟ್ಟ ನಂದಿನಿ ರಾಗಿ ಅಂಬಲಿ

ಬೆಂಗಳೂರು: ಕರ್ನಾಟಕ ಹಾಲು ಮಹಾ ಒಕ್ಕೂಟ (ಕೆಎಂಎಫ್) ಇದೀಗ ಮಧುಮೇಹಿಗಳು ಸೇರಿದಂತೆ ಎಲ್ಲರ ಆರೋಗ್ಯ ಹಿತದೃಷ್ಟಿಯಿಂದ ಅತಿಹೆಚ್ಚು ನಾರಿನಾಂಶದಿಂದ ಕೂಡಿರುವ ಕ್ಯಾಲ್ಸಿಯಂಯುಕ್ತ ʼರಾಗಿ ಅಂಬಲಿ’ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Advertisement

ಕೆಎಂಎಫ್ ನ ಭಾಗವಾಗಿರುವ ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತವು(ಮೈಮುಲ್‌) ಕಳೆದ 15 ದಿನಗಳ ಹಿಂದೆಯಷ್ಟೇ 200 ಎಂಎಲ್‌ ಹೊಂದಿರುವ ರಾಗಿ ಅಂಬಲಿ ಪ್ಯಾಕ್‌ಗಳನ್ನು ಪ್ರಾಯೋಗಿಕವಾಗಿ ಮೈಸೂರು ಭಾಗದ ಮಾರುಕಟ್ಟೆಗೆ ಪರಿಚಯಿಸಿದ್ದು, ಜನರಿಂದ ಉತ್ತಮ ಸ್ಪಂದನೆಯೂ ದೊರೆತಿದೆ.

ಇದೀಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಲು ಆಸಕ್ತಿ ವಹಿಸಿದೆ. ಆರೋಗ್ಯ ದೃಷ್ಟಿಯಿಂದ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸೇವಿಸಬಹುದಾದ ಪದಾರ್ಥ ಇದಾಗಿದೆ. ದೇಹ ತಂಪೆನಿಸುವ ಹಾಗೂ ಉತ್ತಮ ಆರೋಗ್ಯಕ್ಕಾಗಿ ಫೈಬರ್‌ ಹಾಗೂ ಕ್ಯಾಲ್ಸಿಯಂ ಅಂಶ ಹೊಂದಿರುವ ರಾಗಿ ಅಂಬಲಿಯನ್ನು ಮಾರುಕಟ್ಟೆಗೆ ತರಲಾಗಿದೆ ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌.ವಿಜಯ್‌ಕುಮಾರ್‌ ತಿಳಿಸಿದ್ದಾರೆ

Advertisement

200 ಎಂಎಲ್‌ನ ಒಂದು ಪ್ಯಾಕೇಟ್‌ಗೆ 10 ರೂ. ನಂತೆ ದರ ನಿಗದಿ ಮಾಡಲಾಗಿದೆ. ಈ ರಾಗಿ ಅಂಬಲಿಯನ್ನು ರೆಫ್ರಿಜರೇಟರ್‌ನಲ್ಲಿ ಮೂರರಿಂದ ನಾಲ್ಕು ದಿನಗಳವರೆಗೆ ಶೇಖರಿಸಿ ಇಡಬಹುದಾಗಿದೆ.

Advertisement
Tags :
Advertisement