ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಾಟಲಿಯಷ್ಟೇ ಅಲ್ಲ, ಅದರೊಳಗಿನ ನೀರೂ ಪ್ಲಾಸ್ಟಿಕ್‌ ಮಯ

ಹೊರಬಿದ್ದಿರುವ ಹೊಸ ವರದಿಯ ಪ್ರಕಾರ ಒಂದು ಲೀಟರ್ ನ ಬಾಟಲಿ ನೀರಿನಲ್ಲಿ ಅಂದಾಜು 240,000 ಪ್ಲಾಸ್ಟಿಕ್ ತುಣುಕುಗಳಿರುತ್ತವೆ. ಇದು ಈವರೆಗೆ ಗುರುತಿಸಿರಲಾಗಿರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
06:44 PM Jan 09, 2024 IST | Maithri S

ದೆಹಲಿ: ಹೊರಬಿದ್ದಿರುವ ಹೊಸ ವರದಿಯ ಪ್ರಕಾರ, "ಒಂದು ಲೀಟರ್ ನ ಬಾಟಲಿ ನೀರಿನಲ್ಲಿ ಅಂದಾಜು 240,000 ಪ್ಲಾಸ್ಟಿಕ್ ತುಣುಕುಗಳಿರುತ್ತವೆ. ಇದು ಈವರೆಗೆ ಗುರುತಿಸಿರಲಾಗಿರಲಿಲ್ಲ" ಎಂದು ಸಂಶೋಧಕರು ಹೇಳಿದ್ದಾರೆ.

Advertisement

ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಬಾಟಲಿ ನೀರಿನಲ್ಲಿ ನ್ಯಾನೋ ಪ್ಲಾಸ್ಟಿಕ್ ಇರುವುದನ್ನು ಮೊತ್ತಮೊದಲ ಬಾರಿಗೆ ಕಂಡುಹಿಡಿಯಲಾಗಿದೆ. ಈ ಪ್ರಮಾಣ ಅಂದಾಜಿಸಿದ್ದಕ್ಕಿಂತ ನೂರು ಪಟ್ಟು ಹೆಚ್ಚಿದೆ ಎನ್ನಲಾಗಿದೆ. ಪ್ಲಾಸ್ಟಿಕ್ ತುಣುಕುಗಳು 1 ಮೈಕ್ರೋಮೀಟರ್ ಉದ್ದವಿದ್ದು, ಮಾನವನ ಕೂದಲಿನ ಹದಿನೇಳನೇ ಒಂದರಷ್ಟು ಅಗಲವಿರುತ್ತವೆ.

ನ್ಯಾನೋಪ್ಲಾಸ್ಟಿಕ್ ಮಾನವನ ದೇಹದ ಜೀವಕೋಶಗಳ ಒಳಹೊಕ್ಕು, ರಕ್ತವನ್ನು ಸೇರಿ ಅಂಗಗಳ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲವಾದ್ದರಿಂದ ಇವುಗಳನ್ನು ಮೈಕ್ರೋಪ್ಲಾಸ್ಟಿಕ್‌ ಗಿಂತ ಅಪಾಯಕಾರಿ ಎನ್ನಲಾಗಿದೆ. ಇವು ಗರ್ಭದಲ್ಲಿರುವ ಮಗುವಿನ ಮೈ ಸೇರುವ ಸಾಮರ್ಥ್ಯ ಹೊಂದಿವೆ.

Advertisement

ʼಈ ಅಧ್ಯಯನ ನ್ಯಾನೋಪ್ಲಾಸ್ಟಿಕ್ನಿಂದ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆʼ ಎಂದು ಅಧ್ಯಯನ ಗುಂಪಿನ ಮುಖ್ಯಸ್ಥ ನೈಕ್ಸಿನ್ ಕಿಯಾನ್ ಹೇಳಿದ್ದಾರೆ.

ಸಂಶೋಧನೆಗೆ ಪಾಲಿಥಿಲೀನ್ ಟೆರೆಫ್ತಾಲೇಟ್ ನಂತಹ ಬಾಟಲಿ ತಯಾರಿಕೆಗೆ ಬಳಸಲಾಗುವ ಪ್ರಾಸ್ಟಿಕ್ ಅನ್ನು ತೆಗೆದುಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.

Advertisement
Tags :
LatestNewsnanoplasticNewsKannadaplasticwater bottles
Advertisement
Next Article