For the best experience, open
https://m.newskannada.com
on your mobile browser.
Advertisement

ಬೆಂಗಳೂರಲ್ಲಿ ಮಗಳ ಜೊತೆ ಐಸ್ ಕ್ರೀಮ್ ಸವಿದ ನಾರಾಯಣಮೂರ್ತಿ

ಬ್ರಿಟನ್‌ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ, ತಮ್ಮ ತಂದೆ ನಾರಾಯಣಮೂರ್ತಿ ಜೊತೆ ಬೆಂಗಳೂರಲ್ಲಿ ಐಸ್​ಕ್ರೀಂ ಸವಿದಿದ್ದಾರೆ. ಅಕ್ಷತಾ ಮೂರ್ತಿ ಬ್ರಿಟನ್​ ಪ್ರಥಮ ಮಹಿಳೆ ಮತ್ತು ನಾರಾಯಣಮೂರ್ತಿ ಅವರ  ಮಗಳಾಗಿದ್ದಾರೆ.
01:33 PM Feb 13, 2024 IST | Ashitha S
ಬೆಂಗಳೂರಲ್ಲಿ ಮಗಳ ಜೊತೆ ಐಸ್ ಕ್ರೀಮ್ ಸವಿದ ನಾರಾಯಣಮೂರ್ತಿ

ಬೆಂಗಳೂರು: ಬ್ರಿಟನ್‌ ಪ್ರಧಾನಿ ರಿಶಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ, ತಮ್ಮ ತಂದೆ ನಾರಾಯಣಮೂರ್ತಿ ಜೊತೆ ಬೆಂಗಳೂರಲ್ಲಿ ಐಸ್​ಕ್ರೀಂ ಸವಿದಿದ್ದಾರೆ. ಅಕ್ಷತಾ ಮೂರ್ತಿ ಬ್ರಿಟನ್​ ಪ್ರಥಮ ಮಹಿಳೆ ಮತ್ತು ನಾರಾಯಣಮೂರ್ತಿ ಅವರ  ಮಗಳಾಗಿದ್ದಾರೆ.

Advertisement

ತಂದೆ-ಮಗಳು ಬೆಂಗಳೂರಿನ ಜನಪ್ರಿಯ ಐಸ್ ಕ್ರೀಮ್ ಜಾಯಿಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜಯನಗರದಲ್ಲಿರುವ ಐಕಾನಿಕ್ ಕಾರ್ನರ್ ಹೌಸ್‌ನಲ್ಲಿ ಇಬ್ಬರು ಐಸ್​ಕ್ರೀಂ ಸವಿದಿದ್ದಾರೆ. ಕುಟುಂಬದ ಸಮಯವನ್ನು ಆನಂದಿಸುತ್ತಿರೋದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಕ್ಯಾಶುವಲ್ ಡ್ರೆಸ್​ನಲ್ಲಿದ್ದ ತಂದೆ-ಮಗಳು ಐಸ್ ಕ್ರೀಂ ಕಪ್ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಸಾಮಾನ್ಯ ಚೇರ್​​ ಮೇಲೆ ಕೂತಿರೋದನ್ನೂ ನಾವು ಫೋಟೊದಲ್ಲಿ ನೋಡಬಹುದಾಗಿದೆ.

ಇನ್ನು ರಿಶಿ ಸುನಕ್ ಮತ್ತು ಪತ್ನಿ ಅಕ್ಷತಾ ಮುರ್ತಿ ಕಳೆದ ಸೆಪ್ಟೆಂಬರ್​​ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. G20 ಶೃಂಗಸಭೆ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದರು. ರಿಶಿ ಸುನಕ್ ಪ್ರಧಾನಿ ಆದ ಮೇಲೆ ಭಾರತದ ಮೊದಲ ಭೇಟಿ ಅದಾಗಿತ್ತು.

Advertisement

Advertisement
Tags :
Advertisement