ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿಯಾದ ಇನ್ಫೋಸಿಸ್ ನಾರಾಯಣಮೂರ್ತಿ ಮೊಮ್ಮಗ !

ಇನ್ಫೋಸಿಸ್‌ ಸ್ಥಾಪಕ ಎನ್‌ಆರ್‌ ನಾರಾಯಣ ಮೂರ್ತಿ ಅವರು ನಾಲ್ಕು ತಿಂಗಳು ಪ್ರಾಯದ ಮೊಮ್ಮಗ ಏಕಾಗ್ರಹ ರೋಹನ್‌ ಮೂರ್ತಿಗೆ 240 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಏಕಾಗ್ರಹ ರೋಹನ್‌ ಮೂರ್ತಿ ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.
05:28 PM Mar 18, 2024 IST | Ashitha S

ಬೆಂಗಳೂರು: ಇನ್ಫೋಸಿಸ್‌ ಸ್ಥಾಪಕ ಎನ್‌ಆರ್‌ ನಾರಾಯಣ ಮೂರ್ತಿ ಅವರು ನಾಲ್ಕು ತಿಂಗಳು ಪ್ರಾಯದ ಮೊಮ್ಮಗ ಏಕಾಗ್ರಹ ರೋಹನ್‌ ಮೂರ್ತಿಗೆ 240 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಏಕಾಗ್ರಹ ರೋಹನ್‌ ಮೂರ್ತಿ ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

Advertisement

ತನ್ನ ಮೊಮ್ಮಗ ಏಕಾಗ್ರಹ ರೋಹನ್‌ ಮೂರ್ತಿಗೆ ನಾರಾಯಣ ಮೂರ್ತಿ ಅವರು 240 ಕೋಟಿ ರೂಪಾಯಿ ಮೌಲ್ಯದ ಷೇರನ್ನು ಉಡುಗೊರೆ ನೀಡಿದ್ದಾರೆ. ಅಂದರೆ, ರೋಹನ್‌ ಮೂರ್ತಿಯ ಮಗು ಭಾರತದ ಎರಡನೇ ಬೃಹತ್‌ ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿಯಲ್ಲಿ 15,00,000 ಷೇರುಗಳು ಅಥವಾ ಶೇಕಡ 0.04 ಷೇರುಗಳನ್ನು ತನ್ನದಾಗಿಸಿಕೊಂಡಿದೆ.

ಈ ಷೇರು ಉಡುಗೊರೆ ಬಳಿಕ ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿಯವರ ಷೇರಿನ ಪ್ರಮಾಣವು ಶೇಕಡ 0.40ರಿಂದ 0.36ಕ್ಕೆ ಇಳಿಕೆ ಕಂಡಿದೆ. ಈ ಷೇರು ವಹಿವಾಟನ್ನು "ಆಫ್‌ ಮಾರ್ಕೆಟ್‌" ವಿಭಾಗದಲ್ಲಿ ಮಾಡಲಾಗಿದೆ. ಕಳೆದ ನವೆಂಬರ್‌ ತಿಂಗಳಿನಲ್ಲಿ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿಯವರು ಅಜ್ಜ ಅಜ್ಜಿಯಾಗಿದ್ದರು. ಅಂದರೆ, ಅವರ ಪುತ್ರ ಸೊಸೆ ಅಪರ್ಣಾ ಕೃಷ್ಣನ್‌ ಗಂಡುಮಗುವಿಗೆ ಜನ್ಮ ನೀಡಿದ್ದರು. ಅಕ್ಷಯ್‌ ಮೂರ್ತಿಗೆ ಇಬ್ಬರು ಮಕ್ಕಳು ಜನಿಸಿದಾಗಲೇ ಇವರು ಅಜ್ಜ ಅಜ್ಜಿ ಆಗಿದ್ದರು. 1981ರಲ್ಲಿ ಇನ್ಫೊಸಿಸ್‌ ಕಂಪನಿಯು 250 ಡಾಲರ್‌ ಹೂಡಿಕೆಯೊಂದಿಗೆ ಆರಂಭವಾಗಿತ್ತು.

Advertisement

ನವೆಂಬರ್‌ನಲ್ಲಿ ನಾರಾಯಣ ಮೂರ್ತಿ ಮತ್ತು ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರ ಮಗ ರೋಹನ್ ಮೂರ್ತಿ ಮತ್ತು ಪತ್ನಿ ಅಪರ್ಣಾ ಕೃಷ್ಣನ್‌ ಅವರಿಗೆ ಗಂಡು ಮಗು ಹುಟ್ಟಿತ್ತು. ಈ ಮೂಲಕ ಮೂರ್ತಿ ದಂಪತಿ ಮತ್ತೊಮ್ಮೆ ಅಜ್ಜ- ಅಜ್ಜಿಯಾಗಿದ್ದರು. ಏಕಾಗ್ರಹ್‌ ಮೂರ್ತಿ ದಂಪತಿಯ ಮೂರನೇ ಮೊಮ್ಮಗನಾಗಿದ್ದಾನೆ. ಈ ಹಿಂದೆ ರಿಷಿ ಸುನಾಕ್‌ ಹಾಗೂ ಅಕ್ಷತಾ ಮೂರ್ತಿಯ ಇಬ್ಬರು ಹೆಣ್ಣು ಮಕ್ಕಳ ಮೂಲಕವೂ ಅವರು ಅಜ್ಜಿ-ಅಜ್ಜಿಯಾಗಿದ್ದರು.

 

Advertisement
Tags :
indiaKARNATAKALatestNewsLatetsNewsNarayana MurthyNewsKannadashares worth
Advertisement
Next Article