For the best experience, open
https://m.newskannada.com
on your mobile browser.
Advertisement

ಇನ್ಫೋಸಿಸ್‌ ನಾರಾಯಣ ಮೂರ್ತಿ 5 ತಿಂಗಳ ಮೊಮ್ಮಗನಿಗೆ ₹4.2 ಕೋಟಿ ಲಾಭ!

ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ 5 ತಿಂಗಳ ಮೊಮ್ಮಗ ತನ್ನ ಪಾಕೆಟ್‌ಗೆ ಬರೋಬ್ಬರಿ 4.2 ಕೋಟಿ ರೂಪಾಯಿ ಗಳಿಸಿದ್ದಾನೆ. ಒಂದು ತಿಂಗಳ ಹಿಂದಷ್ಟೇ ತಮ್ಮ ಪ್ರೀತಿಯ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ನಾರಾಯಣ ಮೂರ್ತಿ ಅವರು 0.04% ಅಂದ್ರೆ 15 ಲಕ್ಷ ಇನ್ಫೋಸಿಸ್‌ ಷೇರುಗಳನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದರು.
10:42 PM Apr 19, 2024 IST | Ashitha S
ಇನ್ಫೋಸಿಸ್‌ ನಾರಾಯಣ ಮೂರ್ತಿ 5 ತಿಂಗಳ ಮೊಮ್ಮಗನಿಗೆ ₹4 2 ಕೋಟಿ ಲಾಭ

ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ 5 ತಿಂಗಳ ಮೊಮ್ಮಗ ತನ್ನ ಪಾಕೆಟ್‌ಗೆ ಬರೋಬ್ಬರಿ 4.2 ಕೋಟಿ ರೂಪಾಯಿ ಗಳಿಸಿದ್ದಾನೆ. ಒಂದು ತಿಂಗಳ ಹಿಂದಷ್ಟೇ ತಮ್ಮ ಪ್ರೀತಿಯ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ನಾರಾಯಣ ಮೂರ್ತಿ ಅವರು 0.04% ಅಂದ್ರೆ 15 ಲಕ್ಷ ಇನ್ಫೋಸಿಸ್‌ ಷೇರುಗಳನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದರು.

Advertisement

ಕಳೆದ ತಿಂಗಳು 243 ಕೋಟಿ ರೂಪಾಯಿ ಮೌಲ್ಯದ 15 ಲಕ್ಷ ಷೇರುಗಳನ್ನು ಏಕಾಗ್ರಹ ರೋಹನ್ ಮೂರ್ತಿಗೆ ಪಡೆದಿದ್ದರು. ಆ ಷೇರುಗಳಿಗೆ ಈಗ ಡಿವೆಡೆಂಡ್‌ ಸಿಕ್ಕಿದೆ. ಕೇವಲ ಒಂದೇ ತಿಂಗಳಿಗೆ ಇನ್ಫೋಸಿಸ್ ಸಂಸ್ಥೆಯಿಂದ 4.2 ಕೋಟಿ ರೂಪಾಯಿ ಲಾಭ ಗಳಿಸಿ ಏಕಾಗ್ರಹ ರೋಹನ್ ಮೂರ್ತಿ ಮತ್ತೆ ಸುದ್ದಿಯಾಗಿದ್ದಾರೆ.

ಹೌದು. . 2024 ಮಾರ್ಚ್‌ನ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಅದರಲ್ಲಿ ಇನ್ಫೋಸಿಸ್ ಶೇಕಡಾ 30ರಷ್ಟು ಹೆಚ್ಚಳ ಲಾಭವನ್ನು ಘೋಷಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇನ್ಫೋಸಿಸ್ ಆದಾಯವು 37,923 ಕೋಟಿ ರೂಪಾಯಿ ಏರಿಕೆ ಆಗಿದೆ. ಇದರ ಅನ್ವಯ ಇನ್ಫೋಸಿಸ್ ಷೇರು 2024ರ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 20 ರೂಪಾಯಿಗಳ ಲಾಂಭಾಂಶವನ್ನು ಹೊಂದಿದೆ. ಇದರ ಜೊತೆಗೆ ಪ್ರತಿಯೊಂದು ಷೇರಿಗೆ 8 ರೂಪಾಯಿಗಳ ವಿಶೇಷ ಲಾಭಾಂಶವನ್ನು ಶಿಫಾರಸು ಮಾಡಿದೆ.

Advertisement

ಇನ್ಫೋಸಿಸ್ ನಾಲ್ಕನೇ ತ್ರೈಮಾಸಿಕ ವರದಿಯ ಪ್ರಕಾರ 15 ಲಕ್ಷ ಷೇರುಗಳ ಮೌಲ್ಯವೂ ಏರಿಕೆಯಾಗಿದೆ. ಈ ಮೂಲಕ ನಾರಾಯಣ ಮೂರ್ತಿ ಅವರ 5 ತಿಂಗಳ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ 4.2 ಕೋಟಿ ರೂಪಾಯಿ ಲಾಂಭಾಂಶ ಸೇರಲಿದೆ.

Advertisement
Tags :
Advertisement