For the best experience, open
https://m.newskannada.com
on your mobile browser.
Advertisement

ಜೆಟ್ ಏರ್ವೇಸ್​ನ ನರೇಶ್ ಗೋಯಲ್​ಗೆ ಕೊನೆಗೂ ಜಾಮೀನು ಮಂಜೂರು

ಅಕ್ರಮ ಹಣ ವರ್ಗಾವಣೆ ಆರೋಪವಿರುವ ಪ್ರಕರಣ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಕೊನೆಗೂ ಜಾಮೀನು ಮಂಜೂರುರಾಗಿದೆ.
05:27 PM May 06, 2024 IST | Ashitha S
ಜೆಟ್ ಏರ್ವೇಸ್​ನ ನರೇಶ್ ಗೋಯಲ್​ಗೆ ಕೊನೆಗೂ ಜಾಮೀನು ಮಂಜೂರು

ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪವಿರುವ ಪ್ರಕರಣ ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರಿಗೆ ಕೊನೆಗೂ ಜಾಮೀನು ಮಂಜೂರುರಾಗಿದೆ.

Advertisement

ಬಾಂಬೆ ಉಚ್ಚ ನ್ಯಾಯಾಲಯವು ನರೇಶ್ ಗೋಯಲ್ ಅವರಿಗೆ ಎರಡು ತಿಂಗಳ ಕಾಲ ಮಧ್ಯಂತರ ಜಾಮೀನು ಒದಗಿಸಿದೆ.

ರಿಲಾಯನ್ಸ್ ಆಸ್ಪತ್ರೆಯಲ್ಲಿರುವ ನರೇಶ್ ಗೋಯಲ್ ಕ್ಯಾನ್ಸರ್ ರೋಗಿಯಾಗಿದ್ದು, ವೈದ್ಯಕೀಯ ಮತ್ತು ಮಾನವೀಯತೆಯ ಆಧಾರದ ಮೇಲೆ ಬೇಲ್ ಕೊಡಲಾಗಿದೆ. ಬದಲಾಗಿ ಒಂದು ಲಕ್ಷ ರೂ ಶೂರಿಟಿ ಪಡೆಯಲಾಗಿದೆ. ಜೆಟ್ ಏರ್ವೇಸ್​ನ ಸಂಸ್ಥಾಪಕರಾಗಿರುವ ಅವರು ಹಾಗೂ ಪತ್ನಿ ಅನಿತಾ ಇಬ್ಬರೂ ಕೂಡ ಕ್ಯಾನ್ಸರ್ ರೋಗಿಗಳಾಗಿದ್ದಾರೆ.

Advertisement

ಜೆಟ್ ಏರ್ವೇಸ್​ಗೆ ಕೆನರಾ ಬ್ಯಾಂಕ್​ನಿಂದ ನೀಡಲಾಗಿದ್ದ 538.62 ಕೋಟಿ ರೂ ಮೊತ್ತದ ಸಾಲವನ್ನು ಉದ್ದೇಶಿತ ಕಾರ್ಯಗಳಿಗೆ ಬಳಸದೆ ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿಲಾಗಿದೆ ಎನ್ನುವ ಆರೋಪ ನರೇಶ್ ಗೋಯಲ್, ಅವರ ಪತ್ನಿ ಅನಿತಾ ಮತ್ತಿತರರ ಮೇಲೆ ಇದೆ. 2023ರ ಸೆಪ್ಟಂಬರ್​ನಲ್ಲಿ ಜಾರಿ ನಿರ್ದೇಶನಾಲಯವು ನರೇಶ್ ಗೋಯಲ್​ರನ್ನು ಬಂಧಿಸಿತ್ತು.

ನವೆಂಬರ್ ತಿಂಗಳಲ್ಲಿ ಅನಿತಾ ಗೋಯಲ್ ಅವರನ್ನೂ ಬಂಧಿಸಲಾಗಿತ್ತು. ಆದರೆ, ಅನಿತಾ ಅವರ ಆರೋಗ್ಯ ಸ್ಥಿತಿ ಗಮನಿಸಿ ಅವರಿಗೆ ವಿಶೇಷ ಕೋರ್ಟ್​ನಿಂದ ಆಗಲೇ ಜಾಮೀನು ಸಿಕ್ಕಿತ್ತು. ಇದೀಗ ನರೇಶ್ ಗೋಯಲ್​ಗೂ ಜಾಮೀನು ಮಂಜೂರು ಆಗಿದೆ.

Advertisement
Tags :
Advertisement