For the best experience, open
https://m.newskannada.com
on your mobile browser.
Advertisement

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು ಸ್ವಾಮಿ ದೈವದ ನೇಮೋತ್ಸವ ಏರ್ಪಡಿಸಲಾಗಿತ್ತು. ಇದ್ದಕ್ಕಿದ್ದಂತೆ ನಡುರಾತ್ರಿ ವ್ಯಾಪಕ ಮಳೆ ಆರಂಭವಾಯಿತು.
12:29 PM May 20, 2024 IST | Ashitha S
ಸುರಿಯುವ ಮಳೆಯಲ್ಲೇ ದೈವ ನರ್ತನ  ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಉಡುಪಿ: ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು ಸ್ವಾಮಿ ದೈವದ ನೇಮೋತ್ಸವ ಏರ್ಪಡಿಸಲಾಗಿತ್ತು. ಇದ್ದಕ್ಕಿದ್ದಂತೆ ನಡುರಾತ್ರಿ ವ್ಯಾಪಕ ಮಳೆ ಆರಂಭವಾಯಿತು.

Advertisement

ಸುರಿಯುವ ಮಳೆಯಲ್ಲೇ ದೈವ ನರ್ತಕ ರವಿ ಪಡ್ಡಮ್ ಅವರು ಗಗ್ಗರಸೇವೆ ನಡೆಸಿಕೊಟ್ಟರು. ಮಳೆಯಲ್ಲೇ ನಡೆಯುತ್ತಿರುವ ನೇಮೋತ್ಸವದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ದೈವರಾಧನೆಯ ಬಗ್ಗೆ ಕರಾವಳಿ ಜನರಲ್ಲಿ ಇರುವ ಶ್ರದ್ದೆ ಈ ಮೂಲಕ ವ್ಯಕ್ತವಾಗಿದೆ. ಆರಾಧನೆಯಲ್ಲಿ ಯಾವುದೇ ಲೋಪ ಬಾರದಂತೆ ದೈವರಾಧಕರು ಮತ್ತು ಜನರು ಈ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ಅಂದ ಹಾಗೆ ತುಳುನಾಡಿನಲ್ಲಿ ಈ ವರ್ಷದಲ್ಲಿ ನಡೆಯುವ ಬಬ್ಬು ಸ್ವಾಮಿ ದೈವದ ಕೊನೆಯ ಕೋಲ ಇದು ಎಂದು ತಿಳಿದುಬಂದಿದೆ.

Advertisement

Advertisement
Tags :
Advertisement