ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜನವರಿ 25: ಇಂದು ರಾಷ್ಟ್ರೀಯ ಮತದಾರರ ದಿನ

ಪ್ರತಿವರ್ಷ ಜನವರಿ 25 ರಂದು ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ದೇಶದ ಜನರನ್ನು (ಮತದಾರರನ್ನು) ಉತ್ತೇಜಿಸುವ ಕೆಲಸ ಮಾಡಲಾಗುತ್ತದೆ. ಈ ವರ್ಷ ಮತದಾರರ ದಿನ 14ನೇ ಆವೃತ್ತಿಯನ್ನು ಆಚರಿಸಲಾಗುತ್ತಿದೆ.
10:36 AM Jan 25, 2024 IST | Ashitha S

ದೆಹಲಿ: ಪ್ರತಿವರ್ಷ ಜನವರಿ 25 ರಂದು ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ದೇಶದ ಜನರನ್ನು (ಮತದಾರರನ್ನು) ಉತ್ತೇಜಿಸುವ ಕೆಲಸ ಮಾಡಲಾಗುತ್ತದೆ. ಈ ವರ್ಷ ಮತದಾರರ ದಿನ 14ನೇ ಆವೃತ್ತಿಯನ್ನು ಆಚರಿಸಲಾಗುತ್ತಿದೆ.

Advertisement

ಅದರಂತೆ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವರ್ಚುವಲ್ ಮೂಲಕ ಮೊದಲ ಬಾರಿ ಮತ ಚಲಾಯಿಸುವ ಒಂದು ಕೋಟಿಗೂ ಹೆಚ್ಚು ಯುವ ಮತದಾರರೊಂದಿಗೆ ಸಂವಾದ ನಡೆಸಲಿದ್ದಾರೆ.

2011ರ ಜನವರಿ 25 ರಂದು ಮೊದಲ ಬಾರಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಹೆಚ್ಚು ಹೆಚ್ಚು ಯುವ ಮತದಾರರನ್ನು ಚುನಾವಣಾ ಪ್ರಕ್ರಿಯೆಯನ್ನು ಭಾಗವಹಿಸುವಂತೆ ಉತ್ತೇಜಿಸಲು ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಕಾನೂನು ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿತು. ಅಂದಿನಿಂದ ಈ ದಿನದ ಆಚರಣೆ ಜಾರಿಗೆ ಬಂದಿತು.

Advertisement

18 ವರ್ಷ ತುಂಬಿದ ಹೊಸ ಮತದಾರರು ಮತದಾರರ ಪಟ್ಟಿ ತಮ್ಮ ಹೆಸರು ನೋಂದಾಯಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಅಂಶವನ್ನಯ ತಿಳಿಸುವ ಮೂಲಕ ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವೆ ಅಂಬಿಕಾ ಸೋನಿ ಆ ಸಮಯದಲ್ಲಿ ಎಲ್ಲ ಗಮನ ಸೆಳೆದಿದ್ದರು.

ಈ ಸಮಸ್ಯೆಯನ್ನು ಬಗೆಹರಿಸಲು ಚುನವಣಾ ಆಯೋಗವು ಭಾರತದಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ಪ್ರತಿವರ್ಷ ಜನವರಿ 1 ರಂದು 18 ವರ್ಷ ತುಂಬಿದ ಅರ್ಹ ಮತದಾರರನ್ನು ಗುರುತಿಸಲು ರಾಷ್ಟ್ರವ್ಯಾಪಿ ಪ್ರಯತ್ನ ಮಾಡಲು ಪ್ರಾರಂಭಿಸಲು ನಿರ್ಧರಿಸಲಾಯಿತು. ಹೀಗೆ ಯುವ ಮತದಾರರನ್ನು ನೋಂದಾಯಿಸಿ ಜನವರಿ 25 ರಂದು ಅವರಿಗೆ ಚುನಾವಣಾ ಗುರುತಿನ ಚೀಟಿ ನೀಡಲಾಗುವುದು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ವರ್ಷ ನವದೆಹಲಿಯಲ್ಲಿ ಭಾರತದ ಚುನಾವಣಾ ಆಯೋಗ ಆಯೋಜಿಸಿರುವ ರಾಷ್ಟ್ರೀಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಅರ್ಜುನ್ ರಾಮ್ ಮೇಘವಾಲ್ ಅವರು ಗೌರವ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಇನ್ನು ಈ ವರ್ಷದ ಥೀಮ್: 'ಮತದಾನಕ್ತಿಂತ ಹೆಚ್ಚು ಯಾವುದೂ ಇಲ್ಲ, ನಾನು ಖಂಡಿತವಾಗಿ ಮತದಾನ ಮಾಡುತ್ತೇನೆ' ಎಂಬುವುದಾಗಿದೆ. ಇದು ಕಳೆದ ವರ್ಷದ ಥೀಮ್‌ನ ಮುಂದುವರಿಕೆಯಾಗಿದೆ.ಆಚರಣೆಯ ಅಂಗವಾಗಿ, ಎಲ್ಲಾ ಸರ್ಕಾರಿ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಸಂಸ್ಥೆಗಳು ಪ್ರತಿಜ್ಞೆಯನ್ನು ಸ್ವೀಕರಿಸುತ್ತವೆ. 'ಭಾರತದ ಪ್ರಜೆಗಳಾದ ನಾವು, ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭೀತವಾಗಿ ಮತ್ತು ಪ್ರಭಾವಕ್ಕೆ ಒಳಗಾಗದೆ ಮತದಾನ ಮಾಡಲು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ" ಎಂಬುದಾಗಿದೆ.

Advertisement
Tags :
BJPCongressGOVERNMENTindiaLatestNewsNewsKannadaಚುನಾವಣಾನವದೆಹಲಿಪ್ರಧಾನಿ ನರೇಂದ್ರ ಮೋದಿಮತದಾರರ ದಿನ
Advertisement
Next Article