For the best experience, open
https://m.newskannada.com
on your mobile browser.
Advertisement

ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.
09:56 AM May 18, 2024 IST | Ashika S
ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ ನಿಧನ

ಮಂಗಳೂರು:  ಮುಂಬಯಿಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (75) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಿಧನರಾದರು.

Advertisement

1984 ರಲ್ಲಿ ಕೇವಲ 4 ಮಂದಿ ಸಿಬ್ಬಂದಿ ಜತೆ ನ್ಯಾಚುರಲ್ ಐಸ್ ಕ್ರೀಂ ಸಂಸ್ಥೆ ಆರಂಭಿಸಿದ್ದು, ಪ್ರಸ್ತುತ ನ್ಯಾಚುರಲ್ ಸಂಸ್ಥೆ ದೇಶದಲ್ಲೇ ಪ್ರತಿಷ್ಠಿತ ಐಸ್ ಕ್ರೀಂ ಉದ್ಯಮವಾಗಿ ಸಾವಿರಾರು ಮಂದಿಗೆ ಉದ್ಯೋಗ ನೀಡುತ್ತಿದೆ. ದೇಶಾದ್ಯಂತ 135 ಔಟ್ ಲೆಟ್ ಹೊಂದಿದ್ದು, ವರ್ಷಕ್ಕೆ 400 ಕೋಟಿ ರೂ.ಗೂ ಅಧಿಕ ವ್ಯವಹಾರ ಮಾಡುತ್ತಿದೆ

ರಘುನಂದನ್ ಕಾಮತ್ ಅವರ ತಂದೆ ಹಣ್ಣು ವ್ಯಾಪಾರಿಯಾಗಿದ್ದ ಕಾರಣ ರಘುನಂದನ್ ಅವರಿಗೆ ಆ ಹಣ್ಣುಗಳ ವಿಶೇಷತೆ ತಿಳಿದಿತ್ತು. ಮೂಲತಃ ಮಂಗಳೂರು ನಿವಾಸಿಯಾಗಿದ್ದ ರಘುನಂದನ್  ತನ್ನ 14ನೇ ವಯಸ್ಸಿನಲ್ಲೇ ಮುಂಬಯಿಗೆ ತೆರಳಿ ಸಹೋದರನ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿದರು.

Advertisement

ಐಸ್ ಕ್ರೀಂ ಸಂಸ್ಥೆ ಆರಂಭಿಸಿದ ಪ್ರಾರಂಭ ದಿನದಲ್ಲಿ ಪಾವ್ ಬಾಜಿ ಜತೆ ಐಸ್ ಕ್ರೀಂ ನೀಡಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಇದಾದ ಕೆಲವೇ ಸಮಯದಲ್ಲಿ ಪಾವ್ ಬಾಜಿ ಹೊರತುಪಡಿಸಿ ನ್ಯಾಚುರಲ್ ಐಸ್ ಕ್ರೀಂ ಗ್ರಾಹಕರ ಫೇವರಿಟ್ ಆಗಿ ಮಾರುಕಟ್ಟೆ ಬೆಳೆಯಿತು.

Advertisement
Tags :
Advertisement