For the best experience, open
https://m.newskannada.com
on your mobile browser.
Advertisement

ನೀಟ್ ಮರು ಪರೀಕ್ಷೆ ನಮ್ಮ ಕೊನೆಯ ಆಯ್ಕೆ: ಸುಪ್ರೀಂ ಕೋರ್ಟ್​​

ಈ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಕೇಸ್​​ ಸುಪ್ರೀಂ ಕೋರ್ಟ್​ನಲ್ಲಿದೆ.
06:22 PM Jul 08, 2024 IST | Chaitra Kulal
ನೀಟ್ ಮರು ಪರೀಕ್ಷೆ ನಮ್ಮ ಕೊನೆಯ ಆಯ್ಕೆ  ಸುಪ್ರೀಂ ಕೋರ್ಟ್​​

ನವದೆಹಲಿ: ಈ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಇಡೀ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಕೇಸ್​​ ಸುಪ್ರೀಂ ಕೋರ್ಟ್​ನಲ್ಲಿದೆ.

Advertisement

ನೀಟ್​​ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಈಗಾಗಲೇ ಕೇಂದ್ರ ಸರ್ಕಾರ ತನ್ನ ನಿಲುವು ಸುಪ್ರೀಂಕೋರ್ಟ್​​ಗೆ ತಿಳಿಸಿದ್ದು, ಪರೀಕ್ಷೆ ರದ್ದುಗೊಳಿಸೋ ಉದ್ದೇಶವಿಲ್ಲ ಎಂದು ಹೇಳಿದೆ. ಇದರ ಬೆನ್ನಲ್ಲೇ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​​ ಮಹತ್ವದ ಸಲಹೆ ನೀಡಿದೆ.

ನೀಟ್​​ ಪರೀಕ್ಷೆ ಅನ್ನೋದು ಬರೋಬ್ಬರಿ 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ. ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟ. ನೀಟ್​ ಪರೀಕ್ಷೆ ರದ್ದು ಎಂಬುದು ಕೊನೆಯ ಆಯ್ಕೆಯಾಗಬೇಕು. ದೇಶದ ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬ ನೀಟ್​​, ಜೆಇಇ ಪಾಸ್​ ಮಾಡೋ ಗುರಿ ಹೊಂದಿದೆ.

Advertisement

ಹಾಗಾಗಿ ನೀಟ್​ ರದ್ದು ಮಾಡುವುದು ಬಹಳಷ್ಟು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮರು ಪರೀಕ್ಷೆಗೆ ಆದೇಶ ಮಾಡುವಾಗ ಎಚ್ಚರ ಇರಲಿ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

Advertisement
Tags :
Advertisement