ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನೇಜಾರು ಕೊಲೆ ಪ್ರಕರಣ: ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಆರತಿ ಕೃಷ್ಣ

ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಇದರ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ತಾಯಿ ಹಾಗೂ ಮೂರು ಮಕ್ಕಳು ಕೊಲೆಯಾದ ನೇಜಾರುವಿನ ಮನೆಗೆ ಇಂದು ಭೇಟಿ ನೀಡಿ, ಮನೆಯ ಯಜಮಾನ ಮೃತ ಹಸೀನಾ ಅವರ ಪತಿ ನೂರ್ ಮೊಹಮ್ಮದ್ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
07:22 PM Nov 26, 2023 IST | Ashika S

ಉಡುಪಿ: ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಇದರ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ತಾಯಿ ಹಾಗೂ ಮೂರು ಮಕ್ಕಳು ಕೊಲೆಯಾದ ನೇಜಾರುವಿನ ಮನೆಗೆ ಇಂದು ಭೇಟಿ ನೀಡಿ, ಮನೆಯ ಯಜಮಾನ ಮೃತ ಹಸೀನಾ ಅವರ ಪತಿ ನೂರ್ ಮೊಹಮ್ಮದ್ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

Advertisement

ಈ‌ ಸಂದರ್ಭದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿಬೇಕು. ಅಲ್ಲದೆ, ಪ್ರಕರಣದ ತ್ವರಿತ ವಿಚಾರಣೆ ಮಾಡಬೇಕು. ವಕೀಲ ಶಿವಪ್ರಸಾದ್ ಆಳ್ವ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸುವಂತೆ ಕುಟುಂಬ ಸದಸ್ಯರು ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆರತಿ ಕೃಷ್ಣ, ಕುಟುಂಬದವರು ಸಲ್ಲಿಸಿದ ಮನವಿಯನ್ನು ನಾನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ. ಆ ನಿಟ್ಟಿನಲ್ಲಿ ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಕೂಡ ಹೋರಾಟ ನಡೆಸುತ್ತೇನೆ ಎಂದರು.

ಕಾಂಗ್ರೆಸ್ ಮುಖಂಡರಾದ ಎಂಎ ಗಫೂರ್, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ವಿಶ್ವಾಸ್ ಅಮೀನ್, ಯು.ಟಿ ಇಫ್ತಿಕರ್ ಅಲಿ ಹಾಜರಿದ್ದರು.

Advertisement

Advertisement
Tags :
LatetsNewsNewsKannadaಕೊಲೆಡಾ.ಆರತಿ ಕೃಷ್ಣನೂರ್ ಮೊಹಮ್ಮದ್ನೇಜಾರುಯಜಮಾನಸಾಂತ್ವನ
Advertisement
Next Article