ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನೇಪಾಳದ ತ್ರಿಶೂಲಿ ನದಿಯಲ್ಲಿ ಭಾರತದ ನಂಬರ್​ಪ್ಲೇಟ್​ ಇರುವ ಜೀಪ್ ಪತ್ತೆ

ನೇಪಾಳದ ತ್ರಿಶೂಲಿ ನದಿಯಲ್ಲಿ ಭಾರತದ ನಂಬರ್ ಪ್ಲೇಟ್​ ಇರುವ ಜೀಪ್ ಪತ್ತೆಯಾಗಿದೆ.
08:47 PM Jan 16, 2024 IST | Ramya Bolantoor

ನೇಪಾಳ: ನೇಪಾಳದ ತ್ರಿಶೂಲಿ ನದಿಯಲ್ಲಿ ಭಾರತದ ನಂಬರ್ ಪ್ಲೇಟ್​ ಇರುವ ಜೀಪ್ ಪತ್ತೆಯಾಗಿದೆ. ನೇಪಾಳ ಪೊಲೀಸರು ಚಿತ್ವಾನ್ ಜಿಲ್ಲೆಯಲ್ಲಿರುವ ತ್ರಿಶೂಲಿ ನದಿಯಲ್ಲಿ ಜೀಪ್​ನ್ನು ಪತ್ತೆ ಮಾಡಿದ್ದಾರೆ. ವಾಹನವೊಂದು ನದಿಗೆ ಬಿದ್ದಿರುವ ಶಂಕೆಯ ಮೇರೆಗೆ ಹುಡುಕಾಡಿದಾಗ ಜೀಪ್ ಕಂಡುಬಂದಿದೆ.

Advertisement

ಸುತ್ತಮುತ್ತಲಿನ ಸ್ಥಳೀಯರು ವಾಹನವೊಂದು ನದಿಗೆ ಬಿದ್ದಿರುವ ಶಂಕೆಯ ಮೇರೆಗೆ ಪೊಲೀಸರಿಗೆ ಕರೆ ಮಾಡಿದ್ದರು. ನಂತರ ಡೈವರ್​ಗಳ ಸಮೇತ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಜೀಪ್ ರಸ್ತೆಯಿಂದ ನೇರವಾಗಿ 85 ಮೀಟರ್​ ಆಳದ ನದಿಗೆ ಬಿದ್ದಿದೆ,

ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ನೇಪಾಳದ ಡ್ಯಾಂಗ್ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದರು.
ಭಾಲುಬಾಂಗ್​ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಕೇವಲ 7 ಮಂದಿ ಗುರುತು ಮಾತ್ರ ಪತ್ತೆಯಾಗಿದೆ. ಪ್ಯಾಸೆಂಜರ್ ಬಸ್ ಬಂಕೆಯ ನೇಪಾಲ್​ಗಂಜ್​ನಿಂದ ಕಠ್ಮಂಡುವಿಗೆ ತೆರಳುತ್ತಿತ್ತು.ಆದ್ರೆ ಆಯತಪ್ಪಿ ಸೇತುವೆಯಿಂದ ಕೆಳಗೆ ರಾಪ್ತಿ ನದಿಗೆ ಬಿದ್ದಿತ್ತು. ಇಬ್ಬರು ಭಾರತೀಯರು ಸೇರಿದಂತೆ ಎಂಟು ಮಂದಿ ಪ್ರಯಾಣಿಕರ ಗುರುತು ಪತ್ತೆಯಾಗಿದೆ ಎಂದು ಪೊಲೀಸ್​ ಇನ್​ಸ್ಪೆಕ್ಟರ್ ಉಜ್ವಲ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.

Advertisement

Advertisement
Tags :
LatestNewsNewsKannadaನೇಪಾಳ
Advertisement
Next Article