ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

57 ವರ್ಷ ಹಿಂದೆಯೇ ಅಂಚೆಚೀಟಿಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಯ ವರ್ಷ ಪ್ರಕಟ !

ಅಯೋಧ್ಯೆ ರಾಮಮಂದಿರ ಹಿಂದೂಗಳ ಹಲವು ವರ್ಷಗಳ ಕನಸು. ಇದು ಈಗ ಪ್ರಾಣ ಪ್ರತಿಷ್ಠೆಯಾಗುತ್ತಿರುವುದು ಕನಸೋ ನನಸೋ ಎಂಬಷ್ಟು ಅಚ್ಚರಿಯಲ್ಲಿ ಜನರಿರುವಾಗ, 57 ವರ್ಷಗಳ ಹಿಂದೆಯೇ ನೇಪಾಳ ಇದನ್ನು ಊಹಿಸಿತ್ತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ.
12:31 PM Jan 17, 2024 IST | Ashitha S

ದೆಹಲಿ: ಅಯೋಧ್ಯೆ ರಾಮಮಂದಿರ ಹಿಂದೂಗಳ ಹಲವು ವರ್ಷಗಳ ಕನಸು. ಇದು ಈಗ ಪ್ರಾಣ ಪ್ರತಿಷ್ಠೆಯಾಗುತ್ತಿರುವುದು ಕನಸೋ ನನಸೋ ಎಂಬಷ್ಟು ಅಚ್ಚರಿಯಲ್ಲಿ ಜನರಿರುವಾಗ, 57 ವರ್ಷಗಳ ಹಿಂದೆಯೇ ನೇಪಾಳ ಇದನ್ನು ಊಹಿಸಿತ್ತೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ.

Advertisement

ವೈರಲ್ ಆಗಿರುವ ನೇಪಾಳದ ಅಂಚೆಚೀಟಿಯೊಂದು ಈ ಪ್ರಶ್ನೆಯೇಳಲು ಕಾರಣವಾಗಿದೆ. ರಾಮ ಮಂದಿರದ ಪ್ರತಿಷ್ಠಾಪನೆಯ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಈ ಸಂದರ್ಭದಲ್ಲಿ ನೇಪಾಳದಿಂದ 57 ವರ್ಷಗಳ ಹಿಂದೆ ಅಚ್ಚಾದ ಅಂಚೆ ಚೀಟಿಯ ಫೋಟೋವೊಂದು ಹೊರಬಿದ್ದಿದೆ. ಈ ಅಂಚೆಚೀಟಿಯನ್ನು ಏಪ್ರಿಲ್ 18, 1967ರಂದು ರಾಮ ನವಮಿಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿತ್ತು.

ಇದರ ಮೇಲೆ ರಾಮ ಸೀತೆಯ ಚಿತ್ರವಿದ್ದು, ಕೆಳಗೆ, ವಿ.ಎಸ್.(ವಿಕ್ರಮ ಸಂವತ್ಸರ ) 2024 ಎಂದು ಬರೆಯಲಾಗಿದೆ. ಇದು ರಾಮಮಂದಿರ ಉದ್ಘಾಟನೆಯ ವರ್ಷವನ್ನು ಆಗಲೇ ಊಹಿಸಿತ್ತೇ ಎಂಬ ಅಚ್ಚರಿಗೆ ದೂಡಿದೆ.

Advertisement

ಅಸಲಿಗೆ ನೇಪಾಳ ಮತ್ತು ಭಾರತದ ಕೆಲವು ಭಾಗಗಳಲ್ಲಿ ಅನುಸರಿಸುವ ಹಿಂದೂ ಕ್ಯಾಲೆಂಡರ್‌ನ ವಿಕ್ರಮ್ ಸಂವತ್‌ನ 2024 ವರ್ಷವನ್ನು ಅಂಚೆ ಚೀಟಿ ಮೇಲೆ ಹಾಕಲಾಗಿದೆ. ಆದರೆ, ಇದರ ನಿಜವಾದ ಕಾರಣ ಬೇರೆ ಇದೆ. ಏನೆಂದರೆ, ವಿಕ್ರಮ ಸಂವತ್ ಗ್ರೆಗೋರಿಯನ್ ಕ್ಯಾಲೆಂಡರ್‌ಗಿಂತ 57 ವರ್ಷಗಳ ಮುಂದಿದೆ. ಆದ್ದರಿಂದ, ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ 1967 ರ ವರ್ಷವು ವಿಕ್ರಮ್ ಸಂವತ್‌ನಲ್ಲಿ 2024 ಆಗಿತ್ತು. ಆದ್ದರಿಂದ, 1967ರಲ್ಲಿ ಬಿಡುಗಡೆಯಾದ ಅಂಚೆಚೀಟಿಯ ಮೇಲೆ 2024 ಎಂದು ಬರೆಯಲಾಗಿದೆ.

Advertisement
Tags :
indiaKARNATAKALatestNewsNewsKannadaನೇಪಾಳಬೆಂಗಳೂರು
Advertisement
Next Article