For the best experience, open
https://m.newskannada.com
on your mobile browser.
Advertisement

ಭಾರತ್ ಅಕ್ಕಿ ಯೋಜನೆಗೆ ಹೊಸ ನೀತಿ ತರಲು ಮುಂದಾದ ಕೇಂದ್ರ

ಮಹತ್ವಾಕಾಂಕ್ಷೆಯ 'ಭಾರತ್ ಅಕ್ಕಿ' ಯೋಜನೆಗೆ ಹೊಸ ಪಾಲಿಸಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಶುರುವಾಗಿದೆ.
11:49 AM Jul 09, 2024 IST | Ashitha S
ಭಾರತ್ ಅಕ್ಕಿ ಯೋಜನೆಗೆ ಹೊಸ ನೀತಿ ತರಲು ಮುಂದಾದ ಕೇಂದ್ರ

ಬೆಂಗಳೂರು: ಮಹತ್ವಾಕಾಂಕ್ಷೆಯ 'ಭಾರತ್ ಅಕ್ಕಿ' ಯೋಜನೆಗೆ ಹೊಸ ಪಾಲಿಸಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಶುರುವಾಗಿದ್ದು, ಶೀಘ್ರದಲ್ಲೇ ಪಾಲಿಸಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Advertisement

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಿಪಿಎಲ್ ಕಾರ್ಡ್​ನಲ್ಲಿ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ, ಅಂತ್ಯೋದಯ ಕಾರ್ಡ್​ಗೆ 35 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ, ನ್ಯಾಯಬೆಲೆ ಅಂಗಡಿಗಳ ಮೂಲಕ ಪ್ರತಿ ತಿಂಗಳು ಉಚಿತವಾಗಿ ವಿತರಿಸುತ್ತಿದೆ. ರಾಜ್ಯ ಸರ್ಕಾರ, ಎಪಿಎಲ್ ಕಾರ್ಡ್​ಗೆ ಕೆಜಿಗೆ 15 ರೂ.ನಂತೆ 10 ಕೆಜಿ ಅಕ್ಕಿ ವಿತರಿಸುತ್ತಿತ್ತು. ಆದರೆ, ಮೂರು ತಿಂಗಳಿಂದ ಅಕ್ಕಿ ವಿತರಣೆಯನ್ನು ನಿಲ್ಲಿಸಿದೆ.

ರಾಜ್ಯದಲ್ಲಿ ಪಡಿತರ ಚೀಟಿಯೇ ಇಲ್ಲದ ಲಕ್ಷಾಂತರ ಕುಟುಂಬಗಳಿವೆ. ಬಡತನ ರೇಖೆಯಿಂದ ಕೆಳಗಿನ ಕುಟುಂಬದವರು ಸಂಖ್ಯೆ ಸಾಕಷ್ಟಿದೆ. ಹಾಗಾಗಿ, ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟ ಅಕ್ಕಿ ವಿತರಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕಳೆದ ಫೆಬ್ರವರಿಯಲ್ಲಿ ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತಂದರು. ಅದರಂತೆ, ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿnew-policyಯಾ ಲಿಮಿಟೆಡ್ (ನಾಫೆಡ್), ಕರ್ನಾಟಕದಲ್ಲಿ ರಿಯಾಯಿತಿ ದರದಲ್ಲಿ 'ಭಾರತ್ ಅಕ್ಕಿ', 'ಬೇಳೆ' ಮತ್ತು ಗೋಧಿ ಹಿಟ್ಟು ಮಾರಾಟ ಮಾಡುತ್ತಿತ್ತು.

Advertisement

. ರಾಜ್ಯಾದ್ಯಂತ ಈವರೆಗೆ 40 ಸಾವಿರ ಮೆಟ್ರಿಕ್ ಅಕ್ಕಿ ಮಾರಾಟ ಮಾಡಿದೆ. ಭಾರತ್ ಅಕ್ಕಿಗೆ ಈಗಾಗಲೇ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದಿದೆ. ಆದರೆ, ಗೋದಾಮುಗಳಲ್ಲಿ ದಾಸ್ತಾನು ಇಲ್ಲದ ಪರಿಣಾಮ ಅಕ್ಕಿ ವಿತರಣೆಯನ್ನು ಸದ್ಯ ನಿಲ್ಲಿಸಲಾಗಿದೆ. ಯೋಜನೆ ಸಂಬಂಧಿಸಿದಂತೆ ಹೊಸ ಪಾಲಿಸಿ ತರಲು ಕೇಂದ್ರ ಸರ್ಕಾರ, ರೂಪುರೋಷ ಸಿದ್ಧಪಡಿಸಿಸುತ್ತಿದೆ. ಡಿ-ಮಾರ್ಟ್ ಸೇರಿ ಸೂಪರ್ ಮಾರ್ಕೆಟ್​ಗಳಲ್ಲಿ ಮಾರಾಟ ಸೇರಿ ಇತರೆ ಅಂಶಗಳು ಪಾಲಿಸಿಯಲ್ಲಿವೆ ಎನ್ನಲಾಗಿದೆ.

Advertisement
Tags :
Advertisement