ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಹೊಸ ದಾಖಲೆ

ಯುಗಾದಿ ಹಬ್ಬದ ದಿನವೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆಯಲಾಗಿದೆ. ಯುಗಾದಿ ದಿನವೇ ಷೇರು ಪೇಟೆಯಲ್ಲಿ ಸೆನ್ಸೆಕ್ಸ್ 75 ಸಾವಿರ ಪಾಯಿಂಟ್ ದಾಟಿದೆ. ಕಂಪನಿಗಳ 4ನೇ ತ್ರೈಮಾಸಿಕದ ಫಲಿತಾಂಶ ಪ್ರಕಟವಾಗುವ ಹಿನ್ನಲೆಯಲ್ಲಿ ದಾಖಲೆಯ ಏರಿಕೆ ಕಂಡಿದೆ.
02:07 PM Apr 09, 2024 IST | Ashitha S

ಮುಂಬೈ: ಯುಗಾದಿ ಹಬ್ಬದ ದಿನವೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆಯಲಾಗಿದೆ. ಯುಗಾದಿ ದಿನವೇ ಷೇರು ಪೇಟೆಯಲ್ಲಿ ಸೆನ್ಸೆಕ್ಸ್ 75 ಸಾವಿರ ಪಾಯಿಂಟ್ ದಾಟಿದೆ. ಕಂಪನಿಗಳ 4ನೇ ತ್ರೈಮಾಸಿಕದ ಫಲಿತಾಂಶ ಪ್ರಕಟವಾಗುವ ಹಿನ್ನಲೆಯಲ್ಲಿ ದಾಖಲೆಯ ಏರಿಕೆ ಕಂಡಿದೆ.

Advertisement

ಇಂದು ಸೆನ್ಸೆಕ್ಸ್‌ 312 ಪಾಯಿಂಟ್ ಏರಿಕೆಯಾಗಿ 75 ಸಾವಿರ ದಾಟಿದೆ. ನಿಫ್ಟಿ ಕೂಡ 22 ಸಾವಿರದ 745ಕ್ಕೆ ಜಿಗಿದಿದೆ. ಭಾರತದ ಷೇರು ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 75,000 ದಾಟಿರೋದು ಜಾಗತಿಕ ಮಾರುಕಟ್ಟೆಯಲ್ಲೂ ಸಾಧನೆಯಾಗಿದೆ. ಏಪ್ರಿಲ್ 08ರಂದು ದೇಶೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ದಾಖಲಾಗಿತ್ತು. ಸತತ 2ನೇ ದಿನವೂ ಸೆನ್ಸೆಕ್ಸ್ ಏರಿಕೆಯಾಗಿದ್ದು, ಹೂಡಿಕೆದಾರರಿಗೆ ಸಂತಸ ತಂದಿದೆ.

ನಿನ್ನೆಯಷ್ಟೇ ಬಿಎಸ್‌ಇ ಮಾರುಕಟ್ಟೆ ಬಂಡವಾಳ 400 ಲಕ್ಷ ಕೋಟಿ ರೂಪಾಯಿ ದಾಟಿತ್ತು. 9 ತಿಂಗಳಲ್ಲಿ ಮಾರುಕಟ್ಟೆ ಬಂಡವಾಳಕ್ಕೆ 100 ಲಕ್ಷ ಕೋಟಿ ರೂಪಾಯಿ ಸೇರ್ಪಡೆಯಾಗಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನಿನ್ನೆ 74,743ಕ್ಕೆ ಅಂತ್ಯವಾಗಿದ್ದ ಷೇರು ಮಾರುಕಟ್ಟೆ ವಹಿವಾಟು ಇಂದು 75 ಸಾವಿರ ದಾಟಿ ಹೊಸ ದಾಖಲೆ ನಿರ್ಮಿಸಿದೆ.

Advertisement

Advertisement
Tags :
BUSINESSindiaKARNATAKALatestNewsstock market
Advertisement
Next Article