ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಶ್ವದಾದ್ಯಂತ ಧ್ವನಿ ಒಂದುಗೂಡಿಸುತ್ತಿರುವ ʼನ್ಯೂಸ್ ಕರ್ನಾಟಕ ಕ್ರಿಸ್ಮಸ್ ಕ್ಯಾರಲ್ ಕಂಟೆಸ್ಟ್ʼ

ನ್ಯೂಸ್‌ ಕರ್ನಾಟಕ ವತಿಯಿಂದ ಕ್ರಿಸ್ಮಸ್‌ ಪ್ರಯುಕ್ತ ಕ್ರಿಸ್ಮಸ್‌ ಕರೋಲ್ ವಿಡಿಯೋ ಕಂಟೆಸ್ಟ್ -2023 ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ವರ್ಧೆಯಲ್ಲಿ ಭಾಗವಹಿಸಲು ಒಂದಿಷ್ಟು ನಿಯಮಗಳಿವೆ. ಇನ್ನು ಈ ಸ್ಪರ್ಧೆಯಲ್ಲಿ ಮೊದಲು ಬಂದ 75 ವಿಡಿಯೋಗಳಿಗೆ ಆದ್ಯತೆ ನೀಡಲಾಗುತ್ತದೆ. ಅತ್ಯುತ್ತಮವಾದ ಒಂದು ವಿಡಿಯೋಗೆ 15000 ರೂ, ದ್ವಿತೀಯ 10000ರೂ ಹಾಗು ತೃತೀಯ ಬಹುಮಾನವಾಗಿ 5000ರೂ ಸಿಗಲಿದೆ.
08:50 PM Dec 09, 2023 IST | Gayathri SG

ಮಂಗಳೂರು: ನ್ಯೂಸ್‌ ಕರ್ನಾಟಕ ವತಿಯಿಂದ ಕ್ರಿಸ್ಮಸ್‌ ಪ್ರಯುಕ್ತ ಕ್ರಿಸ್ಮಸ್‌ ಕರೋಲ್ ವಿಡಿಯೋ ಕಂಟೆಸ್ಟ್ -2023 ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ವರ್ಧೆಯಲ್ಲಿ ಭಾಗವಹಿಸಲು ಒಂದಿಷ್ಟು ನಿಯಮಗಳಿವೆ. ಇನ್ನು ಈ ಸ್ಪರ್ಧೆಯಲ್ಲಿ ಮೊದಲು ಬಂದ 75 ವಿಡಿಯೋಗಳಿಗೆ ಆದ್ಯತೆ ನೀಡಲಾಗುತ್ತದೆ. ಅತ್ಯುತ್ತಮವಾದ ಒಂದು ವಿಡಿಯೋಗೆ 15000 ರೂ, ದ್ವಿತೀಯ 10000ರೂ ಹಾಗು ತೃತೀಯ ಬಹುಮಾನವಾಗಿ 5000ರೂ ಸಿಗಲಿದೆ.

Advertisement

ಇನ್ನು ಈ ಸ್ಪರ್ಧೆಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಈಗಾಗಲೇ 38 ತಂಡಗಳು ಸ್ಪರ್ಧೆಗೆ ವಿಡಿಯೋಗಳನ್ನು ಕಳುಹಿಸಿಕೊಟ್ಟಿವೆ. ಈಗಾಗಲೇ ಇಸ್ರೇಲ್, ಮಂಗಳೂರು ಅತ್ತಾವರ, ಆನೇಕಲ್‌, ಆನೇಕಲ್‌ ಬೆಂಗಳೂರು, ಹರಿಹರ‌, ವಿಟ್ಲ,ಧಾರವಾಡ, ಮೂಡಬಿದಿರೆ, ಬರ್ಗ್ರಾ, ಒಡಿಶಾ ಸೇರಿದಂತೆ ವಿವಿಧ ಭಾಗಗಳಿಂದ ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ಈ ಸ್ಪರ್ಧೆಯ ಪ್ರಾಯೋಜಕರಾಗಿ ಮೈಕೆಲ್ ಡಿ ಸೋಜಾ & ಫ್ಯಾಮಿಲಿ, ಅಬುಧಾಬಿ., ರಿಚರ್ಡ್ ಕ್ಯಾಸ್ಟಲಿನೊ & ಫ್ಯಾಮಿಲಿ, ಅಬುಧಾಬಿ., ರಾಯಲ್ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಆರ್ಟ್ಸ್, ಅಬುಧಾಬಿ., ಸ್ಯಾಪ್ಲಿಂಗ್ ಮಲ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು., ಜೇಮ್ಸ್ ಮೆಂಡೊಂನ್ಸಾ & ಫ್ಯಾಮಿಲಿ, ದುಬೈ., ಕೆನರಾ ಬ್ಯಾಂಕ್, ಎನ್ಆರ್‌ಐ ಶಾಖೆ, ಕೊಡಿಯಾಲ್ ಬೈಲ್., ಲೂರ್ಡ್ಸ್ ಸೆಂಟ್ರಲ್ ಸ್ಕೂಲ್., ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್., ವಿನ್ನಿಸ್ ರೆಸ್ಟೋರೆಂಟ್, ದುಬೈ., ಅಮಿಗೊ ಆಟೋಮೋಟಿವ್ ಸರ್ವೀಸಸ್, ಅಬುಧಾಬಿ., ಮೌನಿರ್ ಖತರ್ & ಕುಟುಂಬ, ಲೆಬನಾನ್., ಲಿಡಿಯಾ ಲೋಬೊ & ಫ್ಯಾಮಿಲಿ, ಅಬುಧಾಬಿ., ಅಲ್ ಖಾಲಿದಿಯಾ ಗ್ರೂಪ್, ಅಬುಧಾಬಿ., ಹೈಸ್ನಾ ಇಂಟರ್ನ್ಯಾಷನಲ್, ಅಬುಧಾಬಿ., ರೀಗಲ್ ಫರ್ನಿಶಿಂಗ್ & ಸ್ಟೋರೇಜ್ ಸಿಸ್ಟಮ್ಸ್, ಅಬುಧಾಬಿ., ಮೈಕೆಲ್ ಮೊರಾಸ್ & ಫ್ಯಾಮಿಲಿ, ಅಬುಧಾಬಿ., ಮೆರಿಟ್ ಫ್ರೈಟ್ ಸಿಸ್ಟಮ್ಸ್ ಎಲ್ಎಲ್ ಸಿ, ದುಬೈ., ಬ್ಲೂ ರಾಯಲ್ ಗ್ರೂಪ್, ದುಬೈ.

Advertisement

ಸ್ಫರ್ಧೆಯ ನಿಯಮಗಳನ್ನು ನೋಡುವುದಾದರೇ. . .

ಪ್ರತಿ ತಂಡದಿಂದ ಒಂದು ವೀಡಿಯೋ ಗೆ ಅವಕಾಶ.
ವೀಡಿಯೊವನ್ನು ನವೆಂಬರ್ 4 ರಿಂದ ಡಿಸೆಂಬರ್ 10 2023ರ ಒಳಗೆ ರೆಕಾರ್ಡ್ ಮಾಡಿ ನಮಗೆ ಕಳುಹಿಸಿ.
ಒಬ್ಬ ವ್ಯಕ್ತಿಗೆ ಕೇವಲ ಒಂದು ವೀಡಿಯೊವನ್ನು ಕಳುಹಿಸಲು ಹಾಗು ಭಾಗವಹಿಸಲು ಅವಕಾಶ.
ವೀಡಿಯೊ ನೈಜತೆ ಹೊಂದಿರಬೇಕು , ಕನಿಷ್ಠ 3 ನಿಮಿಷಗಳು ಮತ್ತು 4 ನಿಮಿಷಗಳ ಒಳಗೆ ಇರಬೇಕು.
ಒಂದು ತಂಡದಲ್ಲಿ ಕನಿಷ್ಟ 2, ಹೆಚ್ಚೆಂದರೆ 15 ಜನ ಇರಬಹುದು.
ತಮ್ಮ ತಂಡದಲ್ಲಿ ಸಂಗೀತಗಾರರನ್ನು ಒಳಗೊಂಡಿರಬೇಕು.
ನೋಂದಣಿ ಮಾಡಿದ ನಂತರವೇ ವೀಡಿಯೊಗಳನ್ನು ಕಳುಹಿಸಬೇಕು.
ನೋಂದಣಿ ಆದ್ಯತೆ ಆಧಾರದ ಮೇಲೆ ವಿಡಿಯೋಗಳನ್ನು ಪರಿಗಣಿಸಲಾಗುವುದು.
ಬಹುಮಾನದ ಮೊತ್ತ ರೂ.15000 ವಿಜೇತರಿಗೆ, ರೂ.10000 ರನ್ನರ್ ಅಪ್, ರೂ.5000, ಮೂರನೇ ರನ್ನರ್ ಅಪ್ ಮತ್ತು ರೂ.1000 ಐದು ಸಮಾಧಾನಕರ ಬಹುಮಾನಗಳು ಸಿಗಲಿವೆ.
ಸ್ಪರ್ಧೆಯ ನಿಯಮಗಳನ್ನು ಉಲ್ಲಂಘಸಿದರೆ ಅಂತಹ ತಂಡವನ್ನು ಸ್ಫರ್ಧೆಯಿಂದ ಅನರ್ಹತೆಗೊಳಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. . 91 76762 18092.

Advertisement
Tags :
LatestNewsNewsKannadaನ್ಯೂಸ್ ಕರ್ನಾಟಕಮಂಗಳೂರು
Advertisement
Next Article