ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನ್ಯೂಸ್ ಕರ್ನಾಟಕ ಆಯೋಜಿಸಿದ "ಎಥ್ನಿಕ್ ಫ್ಯಾಷನ್ ಸ್ಪರ್ಧೆ"ಯಲ್ಲಿ ಮಿಂದೆದ್ದ ಮಹಿಳಾಮಣಿಗಳು

ನ್ಯೂಸ್ ಕರ್ನಾಟಕ, ಪಾಥ್ ವೇ ಎಂಟರ್ ಪ್ರೈಸಸ್ ಮತ್ತು ವರ್ಟೆಕ್ಸ್ ಲಾಂಜ್ ಮಂಗಳೂರು ಸಹಯೋಗದೊಂದಿಗೆ ಮಾರ್ಚ್‌ 10ರಂದು ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ವಿಶೇಷ ಎಥ್ನಿಕ್ ಫ್ಯಾಷನ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಟ್ರಾವೆಲ್ ವರ್ಲ್ಡ್ ಮುಖ್ಯ ಪ್ರಾಯೋಜಕರಾಗಿ ಉದಾರವಾಗಿ ಪ್ರಾಯೋಜಿಸಿತು. ಇದರಲ್ಲಿ ಉಪಾಸನಾ ಮನರಂಜನಾ ಪಾಲುದಾರರಾಗಿದ್ದರು.
11:02 AM Mar 11, 2024 IST | Ashitha S

ಮಂಗಳೂರು: ನ್ಯೂಸ್ ಕರ್ನಾಟಕ, ಪಾಥ್ ವೇ ಎಂಟರ್ ಪ್ರೈಸಸ್ ಮತ್ತು ವರ್ಟೆಕ್ಸ್ ಲಾಂಜ್ ಮಂಗಳೂರು ಸಹಯೋಗದೊಂದಿಗೆ ಮಾರ್ಚ್‌ 10ರಂದು ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗಾಗಿ ವಿಶೇಷ ಎಥ್ನಿಕ್ ಫ್ಯಾಷನ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಟ್ರಾವೆಲ್ ವರ್ಲ್ಡ್ ಮುಖ್ಯ ಪ್ರಾಯೋಜಕರಾಗಿ ಉದಾರವಾಗಿ ಪ್ರಾಯೋಜಿಸಿತು. ಇದರಲ್ಲಿ ಉಪಾಸನಾ ಮನರಂಜನಾ ಪಾಲುದಾರರಾಗಿದ್ದರು.

Advertisement

ಇನ್ನು  ಕೆನರಾ ಬ್ಯಾಂಕ್ ಎನ್ ಆರ್ ಐ ಶಾಖೆ, ಮಾಂಡೋವಿ ಮೋಟಾರ್ಸ್ ಮಂಗಳೂರು, ಜೆಸಿಐ ಮಂಗಳೂರು, ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡೀಸ್ ಸಲೂನ್ ನಿಂದ ಹೆಚ್ಚಿನ  ಪ್ರೋತ್ಸಾಹ ದೊರೆಯಿತು. ವರ್ಟೆಕ್ಸ್ ಲಾಂಜ್ ಮಣ್ಣಗುಡ್ಡದಲ್ಲಿ ನಡೆದ ಈ ಕಾರ್ಯಕ್ರಮವು ಅಪಾರ ಜನಸಮೂಹವನ್ನು ಆಕರ್ಷಿಸಿತು.

Advertisement

ಇದರಲ್ಲಿ ಸಾಧನೆ ಮಾಡಿದ ಮಹಿಳೆಯರು ಮತ್ತು ಬಾಲಕಿಯರಿಗೆ ಸನ್ಮಾನ ಸಮಾರಂಭ ಏಪರ್ಡಿಸಲಾಗಿತ್ತು. ಶ್ರೀಮತಿ ಪ್ರತೀಕ್ಷಾ ಪ್ರಭು ಅವರ ಸಾಮಾಜಿಕ ಕಾರ್ಯಗಳಿಗಾಗಿ ಮತ್ತು ಮಿಸ್ ಸನ್ನಿಧಿ ಅವರ ಸಾಧನೆಗಳನ್ನು ಗುರುತಿಸಿ ಗೌರವಿಸಲಾಯಿತು.

ದೈಹಿಕ ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಮುಂದೆ ಬಂದ ಸಬಿತಾ ಮೋನಿಸ್, ಶ್ರೀಮತಿ ಕಮಲಾ, ಶ್ರೀಮತಿ ವಿಜಯಾ ಅವರಂತಹ ಗಮನಾರ್ಹ ವ್ಯಕ್ತಿಗಳನ್ನು ಸಹ ಗುರುತಿಸಿ ಸನ್ಮಾನಿಸಲಾಯಿತು.

ಇನ್ನು ಈ ಸ್ಪರ್ಧೆಯು ಎರಡು ವಿಭಾಗಗಳನ್ನು ಒಳಗೊಂಡಿತ್ತು: ಮಿಸ್ ವಿಭಾಗದಲ್ಲಿ ಮಿಸ್ ಸಾನ್ವಿ ಶೆಟ್ಟಿ ಪ್ರಥಮ, ಮಿಸ್ ನಿಶೆಲ್ ದ್ವಿತೀಯ ಮತ್ತು ಮಿಸ್ ನಿಯಾತಿ ತೃತೀಯ ಸ್ಥಾನ ಪಡೆದರು.

ಮಿಸೆಸ್ ವಿಭಾಗದಲ್ಲಿ ಶ್ರೀಮತಿ ವಿದ್ಯಾ ಪ್ರಥಮ ಬಹುಮಾನ ಪಡೆದರೆ, ಅಶ್ವಿನಿ ರೈ ಮತ್ತು ಸುಶ್ಮಿತಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದರು.

ಫ್ಯಾಷನ್ ಶೋನ ತೀರ್ಪುಗಾರರಾಗಿ ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡೀಸ್ ಸಲೂನ್ ನ ಮರ್ಸಿ ವೀಣಾ, ಆಯೇಷಾ ಟಿ ಟೈಮ್  ಅವರು ಸಹಕರಿಸಿದರು . ವೇದಿಕೆಯಲ್ಲಿ ಮರ್ಸಿ ವೀಣಾ ಡಿಸೋಜಾ, ಅಮೃತಾ ರಾಣಿ, ದೀಪಕ್ ಗಂಗೂಲಿ, ಸ್ವಾತಿ, ಹರ್ಷಿತ್ ಹೊಳ್ಳ ಉಪಸ್ಥಿತರಿದ್ದರು.

ನೆರೆದವರ ಉತ್ಸಹವನ್ನು ಮತ್ತಷ್ಟು ಹೆಚ್ಚಿಸಲು ಉಪಾಸನಾ ತಂಡದಿಂದ ಆಕರ್ಷಕ ನೃತ್ಯ ಪ್ರದರ್ಶನಗಳು ನಡೆದವು. ಇದು ಭಾಗವಹಿಸಿದ ಎಲ್ಲರಿಗೂ ಮತ್ತಷ್ಟು ಮನರಂಜನೆ ಹಾಗು ರಸದೌತನವನ್ನು ನೀಡಿತ್ತು.


ಒಟ್ಟಾರೆಯಾಗಿ, ಈ ಕಾರ್ಯಕ್ರಮವು ಒಂದು ಅದ್ಬುತ ಅನುಭವವನ್ನು ನೀಡಿ ಮಹಿಳೆಯರನ್ನು ಹೊಸ ಪ್ರಪಂಚಕ್ಕೆ ಕೊಂಡೊಯ್ಯುವಂತೆ ಮಾಡಿದೆ.

Advertisement
Tags :
GOVERNMENTindiaKARNATAKALatestNewsNewsKannadaನ್ಯೂಸ್ ಕರ್ನಾಟಕಮಂಗಳೂರುಮಹಿಳಾ ದಿನಾಚರಣೆ
Advertisement
Next Article