For the best experience, open
https://m.newskannada.com
on your mobile browser.
Advertisement

ನ್ಯೂಸ್‌ ಕರ್ನಾಟಕ ಸಂಸ್ಥೆಯ ಕ್ರಿಸ್‌ ಮಸ್‌ ಕರೋಲ್‌ ಸ್ಪರ್ಧೆಯಲ್ಲಿ ವಿಂಟರ್‌ ಟೋನ್ ತಂಡ ಚಾಂಪಿಯನ್‌

ನ್ಯೂಸ್‌ ಕರ್ನಾಟಕ ಮಾಧ್ಯಮ ಸಂಸ್ಥೆ ಸಹಯೋಗದಲ್ಲಿ ನಡೆದ ಕ್ರಿಸ್‌ಮಸ್ ಕರೋಲ್ 2023 ರ ಗ್ರ್ಯಾಂಡ್ ಫಿನಾಲೆಯು ಶನಿವಾರ ಕೊನೆಗೊಂಡಿದ್ದು, ಸಾವಿರಾರು ಸಂಗೀತಾಸಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಜಗತ್ತಿನ ಎಲ್ಲ ಪ್ರದೇಶಗಳ ಜನರನ್ನು ಒಗ್ಗೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿದೆ.
08:53 PM Dec 23, 2023 IST | Gayathri SG
ನ್ಯೂಸ್‌ ಕರ್ನಾಟಕ ಸಂಸ್ಥೆಯ ಕ್ರಿಸ್‌ ಮಸ್‌ ಕರೋಲ್‌ ಸ್ಪರ್ಧೆಯಲ್ಲಿ ವಿಂಟರ್‌ ಟೋನ್ ತಂಡ ಚಾಂಪಿಯನ್‌

ಮಂಗಳೂರು: ನ್ಯೂಸ್‌ ಕರ್ನಾಟಕ ಮಾಧ್ಯಮ ಸಂಸ್ಥೆ ಸಹಯೋಗದಲ್ಲಿ ನಡೆದ ಕ್ರಿಸ್‌ಮಸ್ ಕರೋಲ್ 2023 ರ ಗ್ರ್ಯಾಂಡ್ ಫಿನಾಲೆಯು ಶನಿವಾರ ಕೊನೆಗೊಂಡಿದ್ದು, ಸಾವಿರಾರು ಸಂಗೀತಾಸಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಜಗತ್ತಿನ ಎಲ್ಲ ಪ್ರದೇಶಗಳ ಜನರನ್ನು ಒಗ್ಗೂಡಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿದೆ.

Advertisement

ಕ್ರಿಸ್ಮಸ್ ಕರೋಲ್ 2023 ರ ವಿಜೇತ ತಂಡಗಳು ಇಂತಿವೆ.
1. ವಿಂಟರ್ ಟೋನ್ - ಚಾಂಪಿಯನ್ಸ್ ಆಗಿ ಮೂಡಿಬಂದಿದ್ದು, ತಂಡದ ಮನಮೋಹಕ, ಉತ್ಸಾಹ ಭರಿತ ಪ್ರದರ್ಶನ ತೀರ್ಪುಗಾರರ ಮನಗೆದ್ದಿದೆ.

2. ಮ್ಯೂಸಿಕ್ ಮೇವರಿಕ್ಸ್ - 1 ನೇ ರನ್ನರ್-ಅಪ್ ಆಗಿ ಮೂಡಿಬಂದಿದೆ. ತಂಡದ ಸಂಗೀತ ಪ್ರಸ್ತುತಿ, ಸಾಮರ್ಥ್ಯ ಈ ಸ್ಥಾನ ಪಡೆಯುವಲ್ಲಿ ಸಹಕಾರಿಯಾಗಿದೆ.

Advertisement

3. ಸೇಂಟ್ ಡಿಯೋನೈಸಿಯಸ್ ಆರ್ಥೊಡಾಕ್ಸ್ ಚರ್ಚ್ ಕಾಯಿರ್ - 2 ನೇ ರನ್ನರ್-ಅಪ್ ಆಗಿ ಮೂಡಿಬಂದಿದೆ. ಈ ತಂಡದ ನಿರೂಪಣಾ ಶೈಲಿ ಪ್ರೇಕ್ಷಕರು ಮತ್ತು ತೀರ್ಪುಗಾರರ ಮನಗೆಲ್ಲುವಲ್ಲಿ ಸಹಕಾರಿಯಾಗಿದೆ.

ಸಮಾಧಾನಕರ ಬಹುಮಾನ ವಿಜೇತರು:

ನೋಕಿತಾರಂ

ಸಿಲ್ವರ್ ಬೆಲ್ಸ್

ಫ್ಯಾಮಿಲಿಯಾ ಚೋರೇಲ್ (ಫಾಮ್ಚೋ) ಆರ್ಚ್ಡಯೋಸಿಸ್

ನವತರ ಗಣ ವೃಂದ

ಜ್ಞಾನಜ್ಯೋತಿ ಈ ಐದು ತಂಡಗಳು ಸಮಾಧಾನಕರ ಪ್ರಶಸ್ತಿ ಪಡೆದಿವೆ.

ಗ್ರ್ಯಾಂಡ್ ಫಿನಾಲೆಯು ಪ್ರತಿಭೆ, ಸೌಹಾರ್ದತೆ ಮತ್ತು ಸಂಗೀತದ ಸಾರ್ವತ್ರಿಕ ಭಾಷೆಯ ಪ್ರಸ್ತುತಿಗೆ ವೇದಿಕೆಯಾಗಿತ್ತು. ನಿರೂಪಕ ರೋಷನ್ ರಾಜ್ ಮತ್ತು ಉತ್ಸಾಹಿ ಪ್ರೇಕ್ಷಕರು ಈ ಸಂಗೀತ ಕಾರ್ಯಕ್ರಮವನ್ನು ಮರೆಯಲಾಗದ ಅನುಭವವಾಗಿ ರೂಪಿಸಿದರು.

ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯಲ್ಲಿ ವಿಜೇತ ಟೀಮ್ ವಿಂಟರ್ ಟೋನ್, ಮ್ಯೂಸಿಕ್ ಮೇವರಿಕ್ಸ್ ಮತ್ತು ಸೇಂಟ್ ಡಿಯೋನೈಸಿಯಸ್ ಆರ್ಥೊಡಾಕ್ಸ್ ಚರ್ಚ್ ಕಾಯಿರ್ ಮತ್ತು ಸ್ಪರ್ಧೆ ಮಾಡಿದ ಎಲ್ಲ ತಂಡಗಳಿಗೆ ನ್ಯೂಸ್‌ ಕರ್ನಾಟಕ ಮಾಧ್ಯಮ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ.

ಅದೇ ರೀತಿ ನಿರ್ಣಾಯಕರ ತಂಡದ ಈ ಕಾರ್ಯಕ್ರಮದಲ್ಲಿ ಶ್ರಮವಹಿಸಿದೆ. ಅಲಿಸ್ಟರ್ ಲಸ್ರಾಡೊ, ಜಾಸ್ಮಿನ್ ಡಿಸೋಜಾ ಮತ್ತು ಜೀವನ್ ಲೋಬೋ ಅವರು ತುರುಸಿನ ಸ್ಪರ್ಧೆ ನಡುವೆ ನಿರ್ಣಾಯಕ ತೀರ್ಪು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈ ಮೂಲಕ ಕ್ರಿಸ್‌ಮಸ್‌ ಕರೋಲ್‌ ಸ್ಪರ್ಧೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ.

Advertisement
Tags :
Advertisement