For the best experience, open
https://m.newskannada.com
on your mobile browser.
Advertisement

ಕೆಫೆ ಬ್ಲಾಸ್ಟ್ ಕೇಸ್; ಬೆಂಗಳೂರಿನಲ್ಲಿ ಇಬ್ಬರನ್ನ ವಶಕ್ಕೆ ಪಡೆದ ಎನ್​ಐಎ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಸ್ಫೋಟಕ ಇಟ್ಟವನಿಗೆ ಎನ್‌ಐಎ ತೀವ್ರ ಹುಡುಕಾಟ ನಡೆಸುತ್ತಿದೆ. ಶಂಕಿತನ ಸಂಪರ್ಕ ಹೊಂದಿದ್ದ ಅನುಮಾನದ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದೆ.
12:24 PM Mar 26, 2024 IST | Ashitha S
ಕೆಫೆ ಬ್ಲಾಸ್ಟ್ ಕೇಸ್  ಬೆಂಗಳೂರಿನಲ್ಲಿ ಇಬ್ಬರನ್ನ ವಶಕ್ಕೆ ಪಡೆದ ಎನ್​ಐಎ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧ ಸ್ಫೋಟಕ ಇಟ್ಟವನಿಗೆ ಎನ್‌ಐಎ ತೀವ್ರ ಹುಡುಕಾಟ ನಡೆಸುತ್ತಿದೆ. ಶಂಕಿತನ ಸಂಪರ್ಕ ಹೊಂದಿದ್ದ ಅನುಮಾನದ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದೆ.

Advertisement

ಬೆಂಗಳೂರು ಮೂಲದ ಇಬ್ಬರು ಅನುಮಾನಿತರನ್ನು ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ.

ಶಂಕಿತ ಬಾಂಬರ್ ಜೊತೆಗೆ ಸಂಪರ್ಕವನ್ನು ಹೊಂದಿದ್ದ ಶಂಕೆಯ ಮೇರೆಗೆ ಬೆಂಗಳೂರು ಮೂಲದ ಇಬ್ಬರು ಅನುಮಾನಿತರನ್ನ ಎನ್ ಐಎ ವಿಚಾರಣೆ ಮಾಡುತ್ತಿದೆ. ಶನಿವಾರ ಸಂಜೆ ಅನುಮಾನಿತರನ್ನು ಎನ್​​ಐಎ ವಶಕ್ಕೆ ಪಡೆದುಕೊಂಡಿದ್ದು, ಇಬ್ಬರಿಂದ ಬಾಂಬರ್ ಕುರಿತು ಎನ್​ಐಎ ಅಧಿಕಾರಿಳು ಮಾಹಿತಿ ಸಂಗ್ರಹ ಮಾಡ್ತಿದ್ದಾರೆ. ಅನುಮಾನಿತರನ್ನು ಕೇವಲ ವಿಚಾರಣೆ ನಡೆಸುತ್ತಿದ್ದು, ಬಂಧಿಸಿಲ್ಲ ಎಂದು ಎನ್‌ಐಎ ಮೂಲಗಳು ಮಾಹಿತಿ ನೀಡಿವೆ.

Advertisement

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದಲ್ಲಿ ತನಿಕೆ ಚುರುಕು ಗೊಳಿಸಿದ್ದ ಎನ್​​ಐಎ ಶಂಕಿತನ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಆತನಿಗೆ ಬಾಂಬ್ ಹಿಡಲು ಸಹಾಯ ಮಾಡಿದ್ದ ಕೆಲ ಶಂಕಿತರನ್ನು ಅಧಿಕಾರಿಗಳ ತಂಡ ಗುರುತಿಸಿತ್ತು.

ತನಿಖೆ ವೇಳೆ ಶಂಕಿತ ಧರಿಸಿದ್ದ ಟೋಪಿಯೇ ಎನ್​ಐಎ ಅಧಿಕಾರಿಗಳಿಗೆ ಆರೋಪಿತನ ಬಗ್ಗೆ ಸುಳಿವು ನೀಡಿತ್ತು. ಶಂಕಿತನನ್ನು ಶಿವಮೊಗ್ಗ ಜಿಲ್ಲೆಯ ಮುಸಾವೀರ್ ಹುಸೇನ್ ಶಜೀದ್ ಎಂದು ಗುರುತಿಸಲಾಗಿದೆ. ಆದರೆ ಈತನೇ ಸ್ಫೋಟ ನಡೆಸಿದ್ದಾನಾ ಎಂದು ಇದುವರೆಗೂ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.

Advertisement
Tags :
Advertisement