ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರು, ಮಹಾರಾಷ್ಟ್ರ ಎನ್‌ಐಎ ದಾಳಿ ವೇಳೆ ಸಿಕ್ತು 51 ಹಮಾಸ್​ ಧ್ವಜ, ಗನ್

ಕಳೆದ ದಿನ ಬೆಂಗಳೂರು ಹಾಗೂ ಮಹಾರಾಷ್ಟ್ರದ ಹಲವೆಡೆ ಎನ್ಐಎ ದಾಳಿ ನಡೆದಿದೆ. ಆದರೆ ಈ ದಾಳಿ ವೇಳೆ ಹಮಾಸ್ ಧ್ವಜಗಳು ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
02:10 PM Dec 10, 2023 IST | Ashitha S

ಬೆಂಗಳೂರು: ಕಳೆದ ದಿನ ಬೆಂಗಳೂರು ಹಾಗೂ ಮಹಾರಾಷ್ಟ್ರದ ಹಲವೆಡೆ ಎನ್ಐಎ ದಾಳಿ ನಡೆದಿದೆ. ಆದರೆ ಈ ದಾಳಿ ವೇಳೆ ಹಮಾಸ್ ಧ್ವಜಗಳು ಕೂಡ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Advertisement

ಮಹಾರಾಷ್ಟ್ರದ ಹಲವೆಡೆ ಶೋಧ ನಡೆಸಿದ ವೇಳೆ 51 ಹಮಾಸ್ ಧ್ವಜ ಪತ್ತೆಯಾಗಿದೆ. ದಾಳಿ ವೇಳೆ ಒಟ್ಟು 68.03 ಲಕ್ಷ ನಗದು ಹಣ ಕೂಡ ಅಧಿಕಾರಿಗಳಿಗೆ ಸಿಕ್ಕಿದೆ. ಒಂದು ಪಿಸ್ತೂಲ್, ಎರಡು ಏರ್ ಗನ್, ಎಂಟು ಚಾಕುಗಳು, ಎರಡು ಲ್ಯಾಪ್‌ಟಾಪ್, ಆರು ಹಾರ್ಡ್ ಡಿಸ್ಕ್, ಮೂರು ಸಿಡಿಗಳು, 38 ಮೊಬೈಲ್, ಹತ್ತು ಮ್ಯಾಗಜೀನ್ ಬುಕ್ಸ್ ಹಾಗೂ 51 ಹಮಾಸ್ ಪ್ಲಾಗ್ ಜಪ್ತಿ ಮಾಡಲಾಗಿದೆ.

ಇನ್ನು ಬೆಂಗಳೂರಿನ ಪುಲಿಕೇಶಿನಗರ, ಮಹಾರಾಷ್ಟ್ರದ ಪಡ್ಗಾ, ಬೊರಿವಲಿ, ಥಾಣೆ, ಮೀರಾ ರಸ್ತೆ ಹಾಗೂ ಪುಣೆಯಲ್ಲಿ ಎನ್​ಐಎ ದಾಳಿ ನಡೆಸಿದ್ದಾರೆ. ಬೆಂಗಳೂರು ಹಾಗೂ ಮಹಾರಾಷ್ಟ್ರ ಸೇರಿ ಒಟ್ಟು 44 ಕಡೆ ದಾಳಿ ನಡೆಸಿದ್ದಾರೆ. ಈ ಸಂಬಂಧ 15 ಮಂದಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Advertisement

ಆದಿಲ್ ಖೋತ್ ಎಂಬಾತನ ಮನೆಯಲ್ಲಿ ಹಮಾಸ್ ಧ್ವಜಗಳು ಪತ್ತೆಯಾಗಿವೆ. ಫಿರೋಜ್ ದಸ್ತಗೀರ್ ಖುವಾನ್, ರಾಜೀಲ್ ಅಬ್ದುಲ್, ಜಿಶಾನದ ಅಝಾಜ್, ಮುಕ್ಬುಲ್ ನಚಾಮ್ ಎಂಬುವರ ಮನೆಯಲ್ಲಿ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳು ಸಿಕ್ಕಿವೆ.ಸೈಫ್ ಅತೀಕ್ ನಚಾಮ್, ರೇಹಾನದ ಅಶ್ಫಾಕ್ ಸೊಸೆ ಹಾಗೂ ಅತೀಫ್ ನಾಸಿರ್ ಮುಲ್ಲಾ ಎಂಬುವರ ಮನೆಯಲ್ಲಿ ನಗದು ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ.

Advertisement
Tags :
GOVERNMENTindiaLatestNewsNewsKannadaNIAನವದೆಹಲಿಬೆಂಗಳೂರು
Advertisement
Next Article