For the best experience, open
https://m.newskannada.com
on your mobile browser.
Advertisement

ಕುಕ್ಕರ್ ಬಾಂಬ್​ ಸ್ಫೋಟ, ಎನ್‌ ಐಎ ಆರೋಪ ಪಟ್ಟಿ ಸಲ್ಲಿಕೆ

ದೇಶವನ್ನೆ ಬೆಚ್ಚಿಬೀಳಿಸಿದ್ದ ಮಂಗಳೂರು ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ವಿಶೇಷ ನ್ಯಾಯಾಲಯಕ್ಕೆ ​ಅಧಿಕಾರಿಗಳು ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.
06:33 PM Nov 29, 2023 IST | Ashika S
ಕುಕ್ಕರ್ ಬಾಂಬ್​ ಸ್ಫೋಟ  ಎನ್‌ ಐಎ ಆರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು: ದೇಶವನ್ನೆ ಬೆಚ್ಚಿಬೀಳಿಸಿದ್ದ ಮಂಗಳೂರು ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ವಿಶೇಷ ನ್ಯಾಯಾಲಯಕ್ಕೆ ​ಅಧಿಕಾರಿಗಳು ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.

Advertisement

ಶಾರಿಕ್ ಹಾಗೂ ಸಯ್ಯದ್ ಯಾಸೀನ್ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಯಾಗಿದ್ದು, ಶಂಕಿತ ಉಗ್ರರು ಕುಕ್ಕರ್​​ನಲ್ಲಿ ಐಇಡಿ ತೆಗೆದುಕೊಂಡು, ಆಟೋದಲ್ಲಿ ಹೋಗಿ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಬ್ಲಾಸ್ಟ್​ ಮಾಡಲು ಪ್ಲಾನ್ ಮಾಡಿದ್ದರು ಎಂದು ತಿಳಿದು ಬಂದಿದೆ.

ಆದರೆ ದಾರಿ ಮಧ್ಯೆಯಲ್ಲಿಯೇ ಈ ಕುಕ್ಕರ್ ಬ್ಲಾಸ್ಟ್​ ಆಗಿತ್ತು. ಕರ್ನಾಟಕದಲ್ಲಿ ಐಸಿಸ್ ಮಾದರಿ ಕೃತ್ಯಕ್ಕೆ ಸಂಚು ರೂಪಗೊಂಡಿದ್ದು ಈ ಸ್ಫೋಟದಿಂದ ಬಯಲಾಗಿತ್ತು. ಅಲ್ಲದೆ, ಶಿವಮೊಗ್ಗದಲ್ಲಿ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ಬಂಧನವಾಗುತ್ತಿದ್ದಂತೆ ಶಾರೀಕ್ ಅಲ್ಲಿಂದ ಪರಾರಿಯಾಗಿ ಮಂಗಳೂರು, ಮೈಸೂರು, ಕೇರಳ, ತಮಿಳುನಾಡು ಸುತ್ತಾಡಿಕೊಂಡಿದ್ದ. ಹಿಂದೂ ವೇಷ ಧರಿಸಿ ಮೈಸೂರಿನಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ಉಗ್ರ ಕೃತ್ಯ ಮಾಡುತ್ತಿದ್ದ.

Advertisement

ಮತ್ತಷ್ಟು ಸುದ್ದಿಗಳಿಗಾಗಿ:

1. ಮಂಗಳೂರು: ಕುಕ್ಕರ್ ಬಾಂಬ್‌ ಸ್ಫೋಟ ಪ್ರಕರಣ ಸಂತ್ರಸ್ತ, ಪುರುಷೋತ್ತಮ ಪೂಜಾರಿ ನವೀಕೃತ ಮನೆ ಹಸ್ತಾಂತರ

2. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಒಂದು ವರ್ಷ: ಅಟೋ ಚಾಲಕನಿಗೆ ಸಿಗದ ಪರಿಹಾರ

Advertisement
Tags :
Advertisement