ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಾಕ್‌ ವಾಯುನೆಲೆಗೆ ದಾಳಿ ನಡೆಸಿದ ಒಂಬತ್ತು ಉಗ್ರರ ಹತ್ಯೆ

ಮಿಯಾನ್‌ವಾಲಿಯಲ್ಲಿರುವ ಪಾಕಿಸ್ತಾನದ ವಾಯುಪಡೆಯ (ಪಿಎಎಫ್) ತರಬೇತಿ ನೆಲೆಯಲ್ಲಿ ಶನಿವಾರ ಮುಂಜಾನೆ ಭಯೋತ್ಪಾದಕ ದಾಳಿ ನಡೆದಿದ್ದು, ಒಂಬತ್ತು ಉಗ್ರರನ್ನು ಕೊಲ್ಲಲಾಗಿದೆ ಎಂದು ಪಾಕಿಸ್ತಾನ ಮಿಲಿಟರಿ ಹೇಳಿದೆ.
02:34 PM Nov 04, 2023 IST | Ashika S

ಇಸ್ಲಾಮಾಬಾದ್: ಮಿಯಾನ್‌ವಾಲಿಯಲ್ಲಿರುವ ಪಾಕಿಸ್ತಾನದ ವಾಯುಪಡೆಯ (ಪಿಎಎಫ್) ತರಬೇತಿ ನೆಲೆಯಲ್ಲಿ ಶನಿವಾರ ಮುಂಜಾನೆ ಭಯೋತ್ಪಾದಕ ದಾಳಿ ನಡೆದಿದ್ದು, ಒಂಬತ್ತು ಉಗ್ರರನ್ನು ಕೊಲ್ಲಲಾಗಿದೆ ಎಂದು ಪಾಕಿಸ್ತಾನ ಮಿಲಿಟರಿ ಹೇಳಿದೆ.

Advertisement

ಇದೀಗ ಮಿಯಾನ್‌ವಾಲಿಯಲ್ಲಿ ಕೂಂಬಿಂಗ್‌ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

ದಾಳಿಯ ಸಮಯದಲ್ಲಿ ಕಾರ್ಯಾಚರಣೆಯಲ್ಲಿ ಇಲ್ಲದ ವಿಮಾನಗಳಿಗೆ ಅಲ್ಪ ಹಾನಿಯಾಗಿದೆ. ಅದೇ ರೀತಿ ಪಾಕ್‌ ಸಶಸ್ತ್ರ ಪಡೆ ಯಾವುದೇ ರೀತಿಯ ಆಂತರಿಕ ಬಾಹ್ಯ ಬೆದರಿಕೆಗಳನ್ನು ತಡೆಯಲು ಸಮರ್ಥವಾಗಿದೆ ಎಂದು ಪಾಕ್‌ ಸೇನಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.

Advertisement

ಈ ನಡುವೆ ಪಾಕಿಸ್ತಾನದ ಹೊಸ ಉಗ್ರ ಗುಂಪು ತೆಹ್ರೀಕ್-ಇ-ಜಿಹಾದ್ ಪಾಕಿಸ್ತಾನ್ (ಟಿಜೆಪಿ) ದಾಳಿ ಹೊಣೆ ಹೊತ್ತುಕೊಂಡಿದೆ. ಈ ಗುಂಪು ಪಾಕಿಸ್ತಾನದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ಅಂಗಸಂಸ್ಥೆಯಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ, ಪಾಕಿಸ್ತಾನದಲ್ಲಿ ವಿಶೇಷವಾಗಿ ಖೈಬರ್ ಪಖ್ತುಂಕ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಭಯೋತ್ಪಾದಕ ದಾಳಿ ಹೆಚ್ಚುತ್ತಿದೆ ಎಂದು ಡಾನ್‌ ವರದಿ ಹೇಳಿದೆ.

Advertisement
Tags :
LatetsNewsNewsKannadaತರಬೇತಿ ನೆಲೆದಾಳಿಭಯೋತ್ಪಾದಕಮಿಯಾನ್‌ವಾಲಿವಾಯುಪಡೆಹತ್ಯೆ
Advertisement
Next Article