For the best experience, open
https://m.newskannada.com
on your mobile browser.
Advertisement

ನಿಟ್ಟೆ ಕ್ರೀಡಾಪಟುಗಳು ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ ಗೆ ಆಯ್ಕೆ

ಉಡುಪಿಯ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಪಿಯು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಡಾ.ಎನ್.ಎಸ್.ಎ.ಎಂ ಪಿಯು ಕಾಲೇಜಿನ ಕ್ರೀಡಾಪಟುಗಳು 58 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನ ಪಡೆದು 06 ಚಿನ್ನ, 6 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿರುವರು.
02:48 PM Nov 22, 2023 IST | Gayathri SG
ನಿಟ್ಟೆ ಕ್ರೀಡಾಪಟುಗಳು ರಾಜ್ಯಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ ಗೆ ಆಯ್ಕೆ

ನಿಟ್ಟೆ: ಉಡುಪಿಯ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಪಿಯು ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಡಾ.ಎನ್.ಎಸ್.ಎ.ಎಂ ಪಿಯು ಕಾಲೇಜಿನ ಕ್ರೀಡಾಪಟುಗಳು 58 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನ ಪಡೆದು 06 ಚಿನ್ನ, 6 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿರುವರು.

Advertisement

ಎರಡನೇ ಪಿ.ಯು ಕಾಮರ್ಸ್ ವಿದ್ಯಾರ್ಥಿನಿ ನಂದಿನಿ 800 ಮೀಟರ್, 3,000 ಮೀಟರ್, 5,000 ಮೀಟರ್ ಮತ್ತು 4 ಕಿ.ಮೀ ಓಟದಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಕ್ರಾಸ್ ಕಂಟ್ರಿ ರೇಸ್ ಮತ್ತು ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಗೆದ್ದರು.

ಪ್ರಥಮ ಪಿ.ಯು ವಿದ್ಯಾರ್ಥಿನಿ ಜೀವಿತಾ ಹೈ ಜಂಪ್ ನಲ್ಲಿ 1.40 ಮೀಟರ್ ಎತ್ತರಕ್ಕೆ ಜಿಗಿದು ಹೊಸ ಮೀಟ್ ದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕ ಮತ್ತು ಟ್ರಿಪಲ್ ಜಂಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

Advertisement

ಪ್ರಥಮ ಪಿಯು ವಿದ್ಯಾರ್ಥಿನಿ ಸಾಕ್ಷಿ 1,500 ಮೀಟರ್ ಓಟದಲ್ಲಿ ಚಿನ್ನದ ಪದಕ, 3,000 ಮೀಟರ್, 5,000 ಮೀಟರ್ ಮತ್ತು 4 ಕಿಮೀ ಕ್ರಾಸ್ ಕಂಟ್ರಿ ಓಟದಲ್ಲಿ ಬೆಳ್ಳಿ ಪದಕಗೆದ್ದಿದ್ದಾರೆ.

ಎರಡನೇ ಪಿಯು ವಿದ್ಯಾರ್ಥಿ ಕುಲದೀಪ್ ಕುಮಾರ್, ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ, ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಪದಕ ಮತ್ತು ಶಾಟ್ ಪುಟ್ ನಲ್ಲಿ ಕಂಚಿನ ಪದಕಗಳಿಸಿದ್ದಾರೆ.

ಜಾವೆಲಿನ್ ಥ್ರೋ ಮತ್ತು ಹ್ಯಾಮರ್ ಥ್ರೋ ವಿಭಾಗದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿ ರಾಘವೇಂದ್ರ ಆರ್.ನಾಯಕ್ ಬೆಳ್ಳಿ ಪದಕ ಪಡೆದಿದ್ದಾರೆ. ಜಾವೆಲಿನ್ ಥ್ರೋನಲ್ಲಿ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ಶಿಯಾ ಜಿ.ಕೋಟ್ಯಾನ್ ಕಂಚಿನ ಪದಕ ಗೆದ್ದಿದ್ದಾರೆ. ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ ನಿಗಮ್ ಸಾಲ್ಯಾನ್ ಹೈಜಂಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

4*400 ಮೀಟರ್ ರಿಲೇಯಲ್ಲಿ ದ್ವಿತೀಯ ಕಾಮರ್ಸ್ ವಿದ್ಯಾರ್ಥಿನಿಯರಾದ ನಂದಿನಿ, ಸಾಕ್ಷಿ, ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಜೀವಿತಾ, ಸಾಕ್ಷಿ ಬೆಳ್ಳಿ ಪದಕ ಪಡೆದರು.

4*400 ಮೀಟರ್ ರಿಲೇಯಲ್ಲಿ ದ್ವಿತೀಯ ಕಾಮರ್ಸ್ ವಿಭಾಗದ ರಿತಿಕ್, ವಿಜ್ಞಾನ ವಿಭಾಗದ ಪ್ರಥಮ ಪಿಯು ನಿಗಮ್ ಸಾಲ್ಯಾನ್, ಪ್ರಥಮ ಪಿಯುಸಿ ಕಾಮರ್ಸ್ ನ ತರುಣ್ ಜೈನ್, ಪ್ರಥಮ ಪಿಯುಸಿ ಕಾಮರ್ಸ್ ನ ಗುರುರಾಜ್ ಕಂಚಿನ ಪದಕ ಪಡೆದರು.

ಅವರ ವೈಯಕ್ತಿಕ ಪರ್ಫಾರ್ಮೆನ್ಸ್ ನ ಆಧಾರದ ಮೇಲೆ ನಂದಿನಿ. ಜಿ., ಸಾಕ್ಷಿ, ಜೀವಿತಾ, ಕುಲದೀಪ್ ಕುಮಾರ್, ರಾಘವೇಂದ್ರ ಆರ್.ನಾಯಕ್, ಗುರುರಾಜ್ ಮತ್ತು ಆದಿತ್ಯ ಅವರು ಧಾರವಾಡ (ಬಾಲಕಿಯರಿಗಾಗಿ) ಮತ್ತು ಬೆಂಗಳೂರಿನಲ್ಲಿ (ಬಾಲಕರಿಗೆ) ನಡೆಯಲಿರುವ ಕರ್ನಾಟಕ ರಾಜ್ಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ ಎಂದು ನಿಟ್ಟೆ ವಿದ್ಯಾಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement
Tags :
Advertisement