ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪರಿಶ್ರಮಕ್ಕೆ ಒಲಿದ ಫಲ: ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾದ ನಿವೇದಿತಾ ಶೆಟ್ಟಿ

ಸತತ ಪರಿಶ್ರಮ, ಛಲಗಾರಿಕೆ ಇದ್ದರೆ ಯಾವುದೇ ಸಾಧನೆಯನ್ನೂ ಮಾಡಬಹುದು ಎಂಬುದನ್ನು ಉಡುಪಿ ಮೂಲದ ನಿವೇದಿತಾ ಶೆಟ್ಟಿ ತೋರಿಸಿಕೊಟ್ಟಿದ್ದಾರೆ.
04:26 PM Nov 03, 2023 IST | Ramya Bolantoor

ಉಡುಪಿ: ಸತತ ಪರಿಶ್ರಮ, ಛಲಗಾರಿಕೆ ಇದ್ದರೆ ಯಾವುದೇ ಸಾಧನೆಯನ್ನೂ ಮಾಡಬಹುದು ಎಂಬುದನ್ನು ಉಡುಪಿ ಮೂಲದ ನಿವೇದಿತಾ ಶೆಟ್ಟಿ ತೋರಿಸಿಕೊಟ್ಟಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಕೆಲಸವನ್ನೇ ತೊರೆದು ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ.

Advertisement

ಯುಪಿಎಸ್ಸಿ 2022ರ ಸಾಲಿನ ಪರೀಕ್ಷೆಯ ಫಲಿತಾಂಶ ಬಂದಿದ್ದು ಪರೀಕ್ಷೆ ಬರೆದ 11 ಲಕ್ಷ ಅಭ್ಯರ್ಥಿಗಳ ಪೈಕಿ 1022 ಮಂದಿ ಆಯ್ಕೆಗೊಂಡಿದ್ದಾರೆ. ಮೂಲತಃ ಉಡುಪಿ ನಗರದ ನಿವಾಸಿಯಾಗಿರುವ ನಿವೇದಿತಾ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದು ಸದಾನಂದ ಶೆಟ್ಟಿ ಮತ್ತು ಸಮಿತಾ ಶೆಟ್ಟಿ ದಂಪತಿಯ ಪುತ್ರಿ. ಇವರ ಪತಿ ದಿವಾಕರ ಶೆಟ್ಟಿ ಒಮಾನ್‌ ಸರಕಾರಿ ಟೆಕ್ನಿಕಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದು ಮೂರು ವರ್ಷದ ಮಗುವಿನ ಜೊತೆಯಲ್ಲೇ ನಿವೇದಿತಾ ಹಗಲಿರುಳು ಓದುತ್ತಲೇ ಯಾವುದೇ ಕೋಚಿಂಗ್ ಪಡೆಯದೇ ಸಾಧನೆ ಮಾಡಿದ್ದಾರೆ.

ಆರಂಭದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಲೇ ಸಿವಿಲ್ ಸರ್ವಿಸಸ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ತಮ್ಮ ಬಿಡುವಿನ ಸಮಯವನ್ನು ಯುಪಿಎಸ್ಸಿ ಪರೀಕ್ಷೆ ತಯಾರಿಗೆ ಬಳಸುತ್ತಿದ್ದರು. ನಂತರ ತಮ್ಮ ಉದ್ಯೋಗವನ್ನು ಬಿಟ್ಟು ಎಲ್ಲ ಸಮಯವನ್ನು ಯುಪಿಎಸ್ಸಿ ಪರೀಕ್ಷೆ ತಯಾರಿಯಲ್ಲಿ ಬಳಸಿ ಸತತ ಪ್ರಯತ್ನದಿಂದ ಯಾವುದೇ ಕೋಚಿಂಗ್ ಪಡೆಯದೆ 2022ರ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

Advertisement

ಯುಪಿಎಸ್‌ಸಿ ಪರೀಕ್ಷೆ ಎಂಬುದು ಕಬ್ಬಿಣದ ಕಡಲೆಯಲ್ಲ. ಸಾಧಿಸುವ ಮನಸ್ಸಿದ್ದರೆ, ಸಾಧಿಸಬೇಕೆಂಬ ಛಲವಿದ್ದರೆ, ಮಹಿಳೆ ಸಹ ಕಠಿಣ ಪರಿಶ್ರಮ ದಿಂದ ಏನನ್ನಾದರೂ ಸಾಧಿಸಬಲ್ಲಳು ಎಂಬುದಕ್ಕೆ ನಿವೇದಿತ ಶೆಟ್ಟಿ ಉದಾಹರಣೆಯಾಗಿದ್ದಾರೆ.

Advertisement
Tags :
EXAMKARNATAKALatestNewsLatetsNewsNewsKannadaSTUDENTUDUPI
Advertisement
Next Article