For the best experience, open
https://m.newskannada.com
on your mobile browser.
Advertisement

ಸಿಯುಇಟಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಯುಜಿಸಿ

ಈ ಹಿಂದೆ ಘೋಷಿಸಿದಂತೆ ಬರುವ ಮೇ 15 ಮತ್ತು ಮೇ 31ರ ನಡುವೆ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶಾತಿ ಪರೀಕ್ಷೆ (ಸಿಯುಇಟಿ)- ಯುಜಿ ನಡೆಯಲಿವೆ. ಲೋಕಸಭೆ ಚುನಾವಣೆ ನಿಗದಿಯಾಗಿರುವ ಕಾರಣ ಪರೀಕ್ಷೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಅಧ್ಯಕ್ಷ ಜಗದೀಶ್‌ ಕುಮಾರ್ ಸ್ಪಷ್ಟಪಡಿಸಿದ್ದಾರೆ.
07:09 AM Mar 18, 2024 IST | Ashitha S
ಸಿಯುಇಟಿ ಪರೀಕ್ಷೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ  ಯುಜಿಸಿ

ವದೆಹಲಿ: ಈ ಹಿಂದೆ ಘೋಷಿಸಿದಂತೆ ಬರುವ ಮೇ 15 ಮತ್ತು ಮೇ 31ರ ನಡುವೆ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶಾತಿ ಪರೀಕ್ಷೆ (ಸಿಯುಇಟಿ)- ಯುಜಿ ನಡೆಯಲಿವೆ. ಲೋಕಸಭೆ ಚುನಾವಣೆ ನಿಗದಿಯಾಗಿರುವ ಕಾರಣ ಪರೀಕ್ಷೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಅಧ್ಯಕ್ಷ ಜಗದೀಶ್‌ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Advertisement

ಅಲ್ಲದೇ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಮುಗಿದ ಬಳಿಕ ಪರೀಕ್ಷಾ ದಿನಾಂಕ, ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು. ಆದಾಗ್ಯೂ ಈ ತಿಂಗಳ ಆರಂಭದಲ್ಲಿ ಈ ಬಗ್ಗೆ ಮಾತನಾಡಿದ್ದ ಯುಜಿಸಿ ಅಧ್ಯಕ್ಷ ಜಗದೀಶ್‌ 'ಮುಂಬರುವ ಲೋಕಸಭೆ ಚುನಾವಣೆಯ ದಿನಾಂಕದ ಆಧಾರದಲ್ಲಿ ಪರೀಕ್ಷೆ ದಿನಾಂಕವನ್ನು ಬದಲಾಯಿಸಬಹುದು' ಎಂದಿದ್ದರು.

ದೇಶದ 543 ಲೋಕಸಭೆ ಸ್ಥಾನಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏ.19ರಂದು ಮೊದಲ ಹಂತದಲ್ಲಿ 102 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಹಾಗೂ ಜೂನ್‌ 4ರಂದು ಮತ ಎಣಿಕೆ ನಡೆಸಲಾಗುತ್ತದೆ ಎಂದು ಕಳೆದ ಶನಿವಾರ ಚುನಾವಣಾ ಆಯೋಗ ಘೋಷಣೆ ಮಾಡಿದೆ.

Advertisement

ಈ ಮೊದಲೇ ಘೋಷಿಸಿರುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಮೇ 15ರಿಂದ 31ರವರೆಗೆ ಸಿಯುಇಟಿ- ಯುಜಿ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿದೆ. ಈ ಅವಧಿಯಲ್ಲಿ ಮೇ 20 ಮತ್ತು ಮೇ 25ರಂದು ಎರಡು ಬಾರಿ ದೇಶದ ವಿವಿಧೆಡೆ ಚುನಾವಣೆ ನಿಗದಿಯಾಗಿದೆ.

ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ಇದೇ 26ರಂದು ಕೊನೆಯ ದಿನಾಂಕ. ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಪ್ರದೇಶವಾರು ಹಂಚಿಕೆ ಬಗ್ಗೆ ತಿಳಿದು ಕೊಳ್ಳುತ್ತೇವೆ. ಈ ಅಂಕಿಅಂಶದ ಆಧಾರದ ಮೇಲೆ ಪರೀಕ್ಷಾ ಮಂಡಳಿಯು ವೇಳಾಪಟ್ಟಿ ಪ್ರಕಟಿಸಲಿದೆ. ಹಾಗಿದ್ದರೂ ನಿಗದಿತ ದಿನಾಂಕಗಳನ್ನು ಬದಲಾಯಿಸುವುದಿಲ್ಲ ಎಂದು ಜಗದೀಶ್‌ ತಿಳಿಸಿದ್ದಾರೆ.

Advertisement
Tags :
Advertisement