For the best experience, open
https://m.newskannada.com
on your mobile browser.
Advertisement

ಗಡಿಯಲ್ಲಿ ಕೋವಿಡ್ ಕಡ್ಡಾಯ ತಪಾಸಣೆ ಇಲ್ಲ : ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ

 ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ ಗಡಿಯಲ್ಲಿ ಕಡ್ಡಾಯ ತಪಾಸಣೆ ಇಲ್ಲ, ಆರೋಗ್ಯ ಸಿಬ್ಬಂದಿ ಮಾಹಿತಿ ಕೊಡ್ತಾರೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ.
05:20 PM Dec 20, 2023 IST | Ramya Bolantoor
ಗಡಿಯಲ್ಲಿ ಕೋವಿಡ್ ಕಡ್ಡಾಯ ತಪಾಸಣೆ ಇಲ್ಲ    ಆರೋಗ್ಯಾಧಿಕಾರಿ ಡಾ ಎಚ್ ಆರ್ ತಿಮ್ಮಯ್ಯ

ಮಂಗಳೂರು;   ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ ಗಡಿಯಲ್ಲಿ ಕಡ್ಡಾಯ ತಪಾಸಣೆ ಇಲ್ಲ, ಆರೋಗ್ಯ ಸಿಬ್ಬಂದಿ ಮಾಹಿತಿ ಕೊಡ್ತಾರೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಗಡಿಭಾಗವಾದ ಕಾರಣ ಕೇರಳದಿಂದ ಹಲವಾರು ಮಂದಿ ಮಂಗಳೂರಿಗೆ ಬರುತ್ತಾರೆ. ಮಂಗಳೂರು ಗಡಿಭಾಗ ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ ಸರ್ಕಾರದಿಂದ ಕೆಲ ಮಾರ್ಗಸೂಚಿ ಬಂದಿದೆ. ಅದರಂತೆ ದ.ಕ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ ಎಂದು ಹೇಳಿದರು.

ಯಾರೂ ಕೂಡ ಆತಂಕ ಮತ್ತು ಅನಗತ್ಯ ಗೊಂದಲ ಬೇಡ. ಗಡಿ ಜಿಲ್ಲೆ ಕೇರಳದ ಕಾಸರಗೋಡಿನಲ್ಲಿ ನಿತ್ಯ ಒಂದೆರಡು ಪ್ರಕರಣ ಪತ್ತೆಯಾಗ್ತಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಪ್ರಕರಣಗಳು ಇಲ್ಲ. ಸದ್ಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ಕೊಡಲಾಗಿದೆ ಎಂದರು.

Advertisement

ಆಕ್ಸಿಜನ್ ಬೆಡ್ ಗಳು, ಐಸಿಯು, ವೆಂಟಿಲೇಟರ್ ಸಿದ್ದವಾಗಿಡಲು ಸೂಚಿಸಲಾಗಿದೆ. ಇದರ ಜೊತೆಗೆ ಗಡಿಭಾಗವಾದ ಸ್ವರ್ಗ, ಸಾರಡ್ಕ, ಜಲ್ಸೂರು, ತಲಪಾಡಿ, ಈಶ್ವರಮಂಗಲದಲ್ಲಿ ಅಲರ್ಟ್ ಗೆ ಸೂಚಿಸಲಾಗಿದೆ. ಕೇರಳದ ಗಡಿಭಾಗವಾಗ ಈ ಐದು ಕಡೆ ಯಾವುದೇ ನಿರ್ಬಂಧ ಇರಲ್ಲ. ಆದರೆ ಅಲ್ಲಿಂದ ಬರೋರಿಗೆ ನಮ್ಮ ಸಿಬ್ಬಂದಿ ಮೈಕ್ ಮೂಲಕ ಮಾಹಿತಿ ಕೊಡುತ್ತಾರೆ.

ನಮಗೆ ಯಾವುದೇ ಕಡ್ಡಾಯ ತಪಾಸಣೆ ಮಾಡಲು ಸೂಚನೆ ಬಂದಿಲ್ಲ ಆದರೆ ಮಾಹಿತಿ ಕೊಡ್ತೇವೆ, ಅಗತ್ಯ ಬಿದ್ದರೆ ತಪಾಸಣೆ ಮಾಡುತ್ತೇವೆ. ಸಾರಿ ಪ್ರಕರಣಗಳ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸ್ತೇವೆ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳುತ್ತೆವೆ. ಮಂಗಳೂರಿನ ತಲಪಾಡಿ, ಸುಳ್ಯದ ಜಾಲ್ಸೂರು, ಪುತ್ತೂರಿನ ಸ್ವರ್ಗ, ಬಂಟ್ವಾಳದ ಸಾರಡ್ಕ ಗಡಿಯಲ್ಲಿ ಅಲರ್ಟ್ ಇದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ 10,986 ಬೆಡ್ ಇದೆ, 1376 ಆಕ್ಸಿಜನ್ ಸಪೋರ್ಟ್ ಬೆಡ್ ಗಳಿವೆ. ಐಸಿಯು 728, ವೆಂಟಿಲೇಟರ್ 336 ಇದೆ. ಶಬರಿಮಲೆಗೆ ಹೋಗಿ ಬಂದವರಿಗೆ ರೋಗ ಲಕ್ಷಣ ಇದ್ರೆ ಪರೀಕ್ಷೆಗೆ ಒಳಪಡಿಸ್ತೇವೆ. ಸದ್ಯ ನಮಗೆ ನಿತ್ಯ 321 ಜನರನ್ನು ಪರೀಕ್ಷೆ ಮಾಡೋ ಗುರಿ ಇದೆ ಎಂದು ಹೇಳಿದರು.

Advertisement
Tags :
Advertisement